ಕ್ರೈಂ ಸ್ಪೆಷಲ್‌: ಹಲ್ಲೆಗೆ ಕುಖ್ಯಾತಿ ಪಡೆಯುತ್ತಿರುವ ಮಂಗಳೂರು ಜೈಲು !


Team Udayavani, May 29, 2018, 4:55 AM IST

sub-jail-28-5.jpg

ಮಹಾನಗರ: ಜಿಲ್ಲೆಯಲ್ಲಿ ನಡೆದ ನಾನಾ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ ಸಿಕ್ಕಿಬಿದ್ದ ಈ ಜಿಲ್ಲೆಯ ಮತ್ತು ಹೊರ ಜಿಲ್ಲೆ ಹಾಗೂ ರಾಜ್ಯಗಳ ಆರೋಪಿಗಳನ್ನು ಮಂಗಳೂರಿನ ಈ ಜೈಲಿನಲ್ಲಿ ವಿಚಾರಾಧೀನ ಕೈದಿಗಳಾಗಿ ಇರಿಸಲಾಗುತ್ತಿದೆ. ಆದರೆ, ಕೆಲವು ತಿಂಗಳಿಂದೀಚೆಗೆ ಈ ಜೈಲಿನಲ್ಲಿ ಕೆಲವು ವಿಚಾರಣಾಧೀನ ಕೈದಿಗಳು ಅಟ್ಟಹಾಸ ಮೆರೆಯುತ್ತಿದ್ದು, ಭದ್ರತೆಗೆ ನಿಯೋಜನೆಗೊಂಡಿರುವ ಸಿಬಂದಿ ಮತ್ತು ಪೊಲೀಸರ ಮೇಲೆಯೇ ಹಲ್ಲೆ ನಡೆಸುತ್ತಿರುವುದು ಆತಂಕಕಾರಿ ಹಾಗೂ ಗಂಭೀರ ವಿಚಾರ. ಇದಕ್ಕೆಲ್ಲ ನಿಗದಿತ ಸಾಮರ್ಥ್ಯಕ್ಕಿಂತ ಅಧಿಕ ಸಂಖ್ಯೆಯ ವಿಚಾರಾಧೀನ ಕೈದಿಗಳು ಮಂಗಳೂರು ಜೈಲಿನಲ್ಲಿ ತುಂಬಿ ತುಳುಕುತ್ತಿರುವುದು ಮತ್ತು ಬೇಕಾದಷ್ಟು ಸಿಬಂದಿ ಇಲ್ಲದಿರುವುದೇ ಮುಖ್ಯ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಮಿತಿ ಮೀರಿದ ಕೈದಿಗಳು
ಈ ಜೈಲು ಒಟ್ಟು 210 ಕೈದಿಗಳನ್ನು ಇರಿಸುವ ಸಾಮರ್ಥ್ಯ ಹೊಂದಿದೆ. ಆದರೆ ಈಗ ಜೈಲಿನಲ್ಲಿ 382 ಮಂದಿ ಇದ್ದಾರೆ. ಅವರಲ್ಲಿ 10 ಮಂದಿ ಮಹಿಳೆಯರು ಮತ್ತು ಮೂವರು ಮಕ್ಕಳು. 2016ರಲ್ಲಿ ಒಂದೊಮ್ಮೆ ಈ ಜೈಲಿನಲ್ಲಿ 425ಕ್ಕೂ ಮಿಕ್ಕಿ ಕೈದಿಗಳಿದ್ದರು. ಹೊಸ ಜೈಲಿನಲ್ಲಿ  ಸ್ಥಳಾವಕಾಶದ ಕೊರತೆಯಿಂದ ಸುಮಾರು 50ರಷ್ಟು ಕೈದಿಗಳನ್ನು ಹಳೆ ಜೈಲು ಕಟ್ಟಡದಲ್ಲಿ ಇರಿಸಲಾಗುತ್ತದೆ. 

ಸಿಬಂದಿ ಕೊರತೆ
ಕಾರಾಗೃಹ ಕೈಪಿಡಿ ಪ್ರಕಾರ 5 ಜನ ಕೈದಿಗಳಿಗೆ ಓರ್ವ ಸಿಬಂದಿ ಬೇಕು. ಆದರೆ ಈಗ 382 ಮಂದಿ ಕೈದಿಗಳಿಗೆ 28 ಸಿಬಂದಿ ಇದ್ದಾರೆ. ಅಂದರೆ 14 ಮಂದಿ ಕೈದಿಗಳಿಗೆ ಓರ್ವ ಸಿಬಂದಿ ಇದ್ದಾರೆ. ಕಾರಾಗೃಹ ಕೈಪಿಡಿಯನ್ನು ಅನುಸರಿಸುವುದೇ ಆದರೆ ಈಗ ಜೈಲಿನಲ್ಲಿ ಇರುವ ಕೈದಿಗಳನ್ನು ನೋಡಿಕೊಳ್ಳಲು ಇನ್ನೂ ಕನಿಷ್ಠ  50 ಮಂದಿ ಸಿಬಂದಿಯ ಆವಶ್ಯಕತೆ ಇದೆ. ಮೂವರು ಮಹಿಳಾ ಸಿಬಂದಿ ಇದ್ದು, ಇನ್ನೂ ನಾಲ್ಕು ಮಂದಿ ಮಹಿಳಾ ಸಿಬಂದಿಬೇಕು.

ಪ್ರತ್ಯೇಕ ವಾಸಕ್ಕೆ ವ್ಯವಸ್ಥೆ  
ಈ ಜೈಲಿನಲ್ಲಿ ಮುಸ್ಲಿಂ ಮತ್ತು ಮುಸ್ಲಿಂಯೇತರ ಕೈದಿಗಳೆಂಬುದಾಗಿ ವಿಂಗಡಿಸಿ ಪ್ರತ್ಯೇಕವಾಗಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಎ ಬ್ಲಾಕ್‌ನಲ್ಲಿ ಮುಸ್ಲಿಂ ಕೈದಿಗಳು ಮತ್ತು ಬಿ ಬ್ಲಾಕ್‌ ನಲ್ಲಿ ಮುಸ್ಲಿಮೇತರರನ್ನು ಇರಿಸಲಾಗಿದೆ. ರಾಜ್ಯದ ಬೇರೆ ಯಾವುದೇ ಜೈಲುಗಳಲ್ಲಿ ಈ ರೀತಿ ಕೈದಿಗಳನ್ನು ವಿಂಗಡಣೆ ಮಾಡಿಲ್ಲ; ಆದರೆ ಊಟ, ಉಪಹಾರಕ್ಕೆ  ಬರುವಾಗ ಒಂದೆಡೆ ಸೇರುತ್ತಾರೆ. ಹೀಗೆ ವ್ಯವಸ್ಥೆ ಕೂಡ ಕೈದಿಗಳ ಮಧ್ಯೆ ಸಂಘರ್ಷಕ್ಕೆ ಕಾರಣ ಎಂಬ ಮಾತುಗಳೂ ಕೇಳಿ ಬರುತ್ತವೆ. ಹೊಡೆದಾಟ ಬಿಡಿಸಲು ಹೋಗುವ ಜೈಲು ಸಿಬಂದಿ ಕೈದಿಗಳಿಂದ ಪೆಟ್ಟು ತಿನ್ನುವುದು ಒಂದೆಡೆಯಾದರೆ ಬಂಧೀಖಾನೆ ಇಲಾಖೆಯಿಂದ ವರ್ಗಾವಣೆಯಂತಹ ಶಿಕ್ಷೆ ಅನುಭವಿಸುವುದು ಇನ್ನೊಂದೆಡೆ. ಇದು ಜೈಲು ಸಿಬಂದಿಯ ಕೆಲಸದ ಉತ್ಸಾಹ ಕಳೆಗುಂದುವಂತೆ ಮಾಡುತ್ತದೆ.

ಮಾರಾಮಾರಿಗೆ ವರ್ಷಗಳ ಇತಿಹಾಸವಿದೆ
ಇಲ್ಲಿ ಕೈದಿಗಳಿಂದ ಜೈಲು ಸಿಬಂದಿ/ ಪೊಲೀಸರ  ಮೇಲೆ ನಡೆಯುತ್ತಿರುವ ಹಲ್ಲೆಗಳಿಗೆ ಹಲವು ವರ್ಷಗಳ ಇತಿಹಾಸವಿದೆ. 2012 ಅಕ್ಟೋಬರ್‌ 22ರಂದು ಕೈದಿಗಳ ಹೊಡೆದಾಟ ತಡೆಯಲು ಹೋಗಿದ್ದ ಜೈಲು ವಾರ್ಡನ್‌ ಪುಟ್ಟಣ್ಣ  ಮತ್ತು ಸಿಬಂದಿ ಶಿವ ಅವರ ಮೇಲೆ ಕೈದಿಗಳು ಹಲ್ಲೆ ನಡೆಸಿ ಅವರಿಬ್ಬರೂ ಗಾಯಗೊಂಡಿದ್ದರು. ಈ ಘಟನೆಯಲ್ಲಿ ವಾರ್ಡನ್‌ ಪುಟ್ಟಣ್ಣ ಅವರನ್ನು  ವರ್ಗಾವಣೆ ಮಾಡಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಂಧೀಖಾನೆ ಇಲಾಖೆಯು ಕೈದಿಗಳನ್ನು ಹೊಸ ಜೈಲು ಕಟ್ಟಡಕ್ಕೆ ಸ್ಥಳಾಂತರಿಸುವ ನಿರ್ಧಾರಿಸಿ ಅ. 31ರಂದು ಕೈದಿಗಳನ್ನು ಸ್ಥಳಾಂತರಿಸುವ ಕ್ರಮ ಕೈಗೊಂಡಿತ್ತು. ಸ್ಥಳಾಂತರಗೊಂಡರೂ ಹೊಡೆದಾಟ ನಿಂತಿಲ್ಲ. ಆಗಿಂದಾಗ್ಗೆ ಅದು ಮರುಕಳಿಸುತ್ತಲೇ ಇದೆ. ಕೆಲವು ಮಂದಿ ಕುಖ್ಯಾತ ಗೂಂಡಾಗಳೂ ವಿಚಾರಣಾಧೀನ ಕೈದಿಗಳಾಗಿ ಈ ಜಿಲ್ಲಾ  ಕಾರಾಗೃಹದಲ್ಲಿ  ಇರುವುದು ಇದಕ್ಕೆ ಮುಖ್ಯ ಕಾರಣ ಎಂದು ಮನಗಂಡು ಎ ಮತ್ತು ಬಿ ಎಂಬ ಪ್ರತ್ಯೇಕ ಬ್ಲಾಕ್‌ ಗಳನ್ನಾಗಿ ಮಾಡಿ ವಾಸ್ತವ್ಯಕ್ಕೆ ವ್ಯವಸ್ಥೆ  ಮಾಡಲಾಗಿತ್ತು. ಆದರೆ ಕೈದಿಗಳ ಮಾರಾಮಾರಿ ನಿಂತಿಲ್ಲ. ಊಟ/ ಉಪಹಾರಕ್ಕೆ ಬಿಡುವಾಗ, ಅಡುಗೆ ತಯಾರಿ ಮಾಡುವಾಗ, ಸ್ನಾನಕ್ಕೆ ಹೋಗುವಾಗ ಕೈದಿಗಳ ಮಧ್ಯೆ ಹೊಡೆದಾಟಗಳು ನಡೆಯುತ್ತಿವೆ.

2014 ಜೂನ್‌ 8ರಂದು ಇಬ್ಬರು ಕೈದಿಗಳನ್ನು ಧಾರವಾಡ ಜೈಲಿಗೆ ಸ್ಥಳಾಂತರಿಸುವ ಸಂದರ್ಭ ಕೈದಿಗಳು ಪೊಲೀಸರ ಮೇಲೆ ದಾಳಿ ನಡೆಸಿದ್ದು. ಆಗಿನ ಎಸಿಪಿ ತಿಲಕ್‌ಚಂದ್ರ ಸೇರಿದಂತೆ 20 ಮಂದಿ ಪೊಲೀಸರು ಗಾಯಗೊಂಡಿದ್ದರು. ಕ್ರಿಮಿನಲ್‌ ಆರೋಪಿಗಳಾದ ಫೈಝಲ್‌ ಮತ್ತು ತಲಾತ್‌ ಅವರನ್ನು ಸ್ಥಳಾಂತರಿಸಲು ಆದೇಶ ಬಂದ ಹಿನ್ನೆಲೆಯಲ್ಲಿ , ಸ್ಥಳಾಂತರಕ್ಕೆ ಸಮಯ ನಿಗದಿ ಪಡಿಸಿ ಬೆಳಗ್ಗೆ  10 ಗಂಟೆಗೆ ಪೊಲೀಸರು ಬಂದೋಬಸ್ತು ವ್ಯವಸ್ಥೆ ಮಾಡಿದ ಸಂದರ್ಭ ಈ ಹಲ್ಲೆ ನಡೆದಿತ್ತು. ಈ ಘಟನೆಯಲ್ಲಿ  ಪೊಲೀಸರು ಮಾತ್ರವಲ್ಲ 28 ಮಂದಿ ಕೈದಿಗಳೂ ಗಾಯಗೊಂಡಿದ್ದರು. ಈ ಘಟನೆಯ ಬಳಿಕ 2015 ನವೆಂಬರ್‌ 2ರಂದು ಜೈಲಿನಲ್ಲಿ  ಡಬಲ್‌ ಮರ್ಡರ್‌ ನಡೆದಿತ್ತು. ಪ್ರಕರಣದಲ್ಲಿ  ಕುಖ್ಯಾತ ಆರೋಪಿಗಳಾದ ಮಾಡೂರು ಯೂಸುಫ್‌, ಗಣೇಶ್‌ ಶೆಟ್ಟಿ  ಹತ್ಯೆಯಾಗಿದ್ದರು.

ಇತ್ತೀಚಿನ ಘಟನೆ
ಇದೇ ಮೇ 21ರಂದು ರಾತ್ರಿ 11.30ರ ವೇಳೆಗೆ ಜೈಲು ಸೂಪರಿಂಟೆಂಡೆಂಟ್‌ ಪರಮೇಶ್ವರ್‌ ಅವರು ಗಸ್ತು ತಿರುಗುತ್ತಿದ್ದಾಗ ಜೈಲಿನ ಎ ಬ್ಲಾಕ್‌ನಲ್ಲಿ ವಿಚಾರಣಾಧೀನ ಕೈದಿಗಳ ಎರಡು ತಂಡಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ, ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡು ಜಗಳ ನಡೆಯುತ್ತಿತ್ತು. ಇದನ್ನು ಗಮನಿಸಿದ ಜೈಲು ಅಧೀಕ್ಷಕರು ಮತ್ತು ಸಿಬಂದಿ ತತ್‌ ಕ್ಷಣ ಜೈಲಿನೊಳಗೆ ಹೋಗಿ ಜಗಳ ನಿಲ್ಲಿಸಲು ಪ್ರಯತ್ನಿಸಿದ್ದರು. ಇದರಿಂದ ಕೋಪಗೊಂಡ ವಿಚಾರಣಾಧೀನ ಕೈದಿಗಳ ತಂಡವೊಂದು ಅಧೀಕ್ಷರು, ವಾರ್ಡನ್‌ ಮತ್ತು ಇತರ ಸಿಬಂದಿ ಮೇಲೆ ದಾಳಿ ನಡೆಸಿತ್ತು. ಅಧೀಕ್ಷಕ ಪರಮೇಶ್ವರ್‌ ಅವರಿಗೆ ಕೈದಿಗಳು ಚೊಂಬಿನಿಂದ ಹಣೆಗೆ ಹೊಡೆದಿದ್ದರು. ವಾರ್ಡನ್‌ ಮುತ್ತಪ್ಪ ವಿರೂಪಾಕ್ಷಪ್ಪ, ಪೊಲೀಸ್‌ ರಮೇಶ್‌ ಸೇರಿದಂತೆ ಒಟ್ಟು ಆರು ಮಂದಿ ಗಾಯಗೊಂಡಿದ್ದರು. ಇದೇ ವೇಳೆ  ಜೈಲಿನ ಸಿಸಿಟಿವಿ ಕೆಮೆರಾ, ಟ್ಯೂಬ್‌ಲೈಟ್‌ ಸೇರಿದಂತೆ ಇತರ ಸೊತ್ತುಗಳಿಗೆ ಹಾನಿಯಾಗಿತ್ತು. ಇತರ ಸಿಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು. ಈ  ಹಲ್ಲೆ ಘಟನೆಗೆ ಸಂಬಂಧಿಸಿ ಬರ್ಕೆ ಪೊಲೀಸ್‌ ಠಾಣೆಯಲ್ಲಿ  ಕೇಸು ದಾಖಲಾಗಿದೆ. ಘಟನೆಯ ಬಗ್ಗೆ ಜೈಲಿನ ಅಧೀಕ್ಷಕರು ಬಂಧೀಖಾನೆ ಇಲಾಖೆಯ ಚೀಫ್‌ ಆಫೀಸರ್‌ ಗೂ ವರದಿ ಸಲ್ಲಿಸಿದ್ದಾರೆ. ಶೀಘ್ರದಲ್ಲಿಯೇ ಬೆಂಗಳೂರಿನಿಂದ ಹಿರಿಯ ಅಧಿಕಾರಿಗಳು ಜೈಲಿಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಕಾರಾಗೃಹದ ಮೂಲಗಳು ತಿಳಿಸಿವೆ. 

– ಹಿಲರಿ ಕ್ರಾಸ್ತಾ

ಟಾಪ್ ನ್ಯೂಸ್

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23 ಶಾಲೆಗೆ ಬಾಂಬ್ ಬೆದರಿಕೆ ಹಾಕಿದ 12ನೇ ತರಗತಿ ವಿದ್ಯಾರ್ಥಿ

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

6-kaup-3

Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

5-bng

Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!

ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ

Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: Bangladeshi national arrested for illegally residing in the city

Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ

vaman

Mangaluru: ವಾಮಂಜೂರು ಗುಂಡು ಹಾರಾಟ ಪ್ರಕರಣ: ಇಬ್ಬರು ಕುಖ್ಯಾತರ ಬಂಧನ

Mangaluru: ಹೈಡ್ರೋ ವೀಡ್‌ ಗಾಂಜಾ ಸಹಿತ ಓರ್ವನ ಬಂಧನ

Mangaluru: ಹೈಡ್ರೋ ವೀಡ್‌ ಗಾಂಜಾ ಸಹಿತ ಓರ್ವನ ಬಂಧನ

Mangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆMangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆ

Mangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆ

Kulai: ನೀರುಪಾಲಾದವರ ಶವ ಹಸ್ತಾಂತರ

Kulai: ನೀರುಪಾಲಾದವರ ಶವ ಹಸ್ತಾಂತರ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

2

Uppinangady: ನೇಜಿಕಾರ್‌ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ

8-ather

EV ದ್ವಿಚಕ್ರ ವಾಹನ ಮಾರಾಟ: ಏಥರ್‌ ಸಂಸ್ಥೆ ಪಾಲು ಶೇ.25

1(1

Sullia: ಮುಳುಗಿದ ಅಂಗನವಾಡಿಗೆ ಹೊಸ ಜಾಗ

7-aishwarya

Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್‌ ಸೂಚನೆ

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.