ಕೃಷಿ ಸಂಸ್ಕೃತಿ, ಧಾರ್ಮಿಕತೆಗೆ ಸ್ಫೂರ್ತಿಯಾದ ಭತ್ತದ ನಾಟಿ


Team Udayavani, Jun 28, 2018, 2:20 AM IST

naati-27-6.jpg

ಸುಬ್ರಹ್ಮಣ್ಯ: ಕೃಷಿ ಸಂಸ್ಕೃತಿಯನ್ನೆ ಮರೆಯುತ್ತಿರುವ ಯುವಜನಾಂಗಕ್ಕೆ, ವಿದ್ಯಾರ್ಥಿಗಳಿಗೆ ಭತ್ತದ ಕೃಷಿ, ಭತ್ತದ ನಾಟಿ ವಿಧಾನ ಮತ್ತು ತಾವು ಉಣ್ಣುವ ಅಕ್ಕಿಯ ಮಹತ್ವ ಕುರಿತು ಅರಿವು ಮೂಡಿಸುವ ಹಂಬಲ. ಮತ್ತೂಂದೆಡೆ ದೇಗುಲದಲ್ಲಿ ಪೂರ್ವಶಿಷ್ಟ ಸಂಪ್ರದಾಯಕ್ಕೆ ಕದಿರಿನ ಕೊರತೆಯನ್ನೂ ನೀಗಿಸುವ ಪ್ರಯತ್ನ. ಈ ಎರಡು ಅಂಶಗಳ ಕಾರ್ಯಕ್ರಮ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ಸಮೀಪದ ದೇವರಗದ್ದೆಯಲ್ಲಿ ಬುಧವಾರ ಕಾಣಸಿಕ್ಕಿತು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದಲ್ಲಿ ಪೂರ್ವಶಿಷ್ಟ ಸಂಪ್ರದಾಯದಂತೆ ಪ್ರತಿವರ್ಷ ನವಾನ್ನ ನೈವೇದ್ಯ ಹಾಗೂ ಹೊಸ ಅಕ್ಕಿ ಭೋಜನ ಕಾರ್ಯಕ್ರಮ ನಡೆಯುತ್ತದೆ. ಇದಕ್ಕೆ ಮುಖ್ಯವಾಗಿ ಭತ್ತದ ಕದಿರಿನ ಆವಶ್ಯಕತೆ ಇದೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಭತ್ತದ ನಾಟಿ ಮರೆಗೆ ಸರಿದಿದೆ. ಹೀಗಾಗಿ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ನವಾನ್ನ ಭೋಜನಕ್ಕೆ ಭತ್ತದ ಕದಿರಿನ ಅಭಾವ ಕಂಡು ಬರುತ್ತಿತ್ತು. ಕದಿರು ಹೊರಗಿನಿಂದ ತರುವ ಅನಿವಾರ್ಯತೆ ಇತ್ತು. ಈ ಕೊರತೆ ನಿವಾರಿಸಲು ಈ ಭಾರಿ ವಿಶೇಷವಾಗಿ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಆಡಳಿತ ಮಂಡಳಿ ದೇವರಗದ್ದೆಯಲ್ಲಿ ಭತ್ತದ ನಾಟಿ ಸಸಿ ನೆಡುವ ಕಾರ್ಯಕ್ರಮ ಬುಧವಾರ ಹಮ್ಮಿಕೊಂಡಿತ್ತು. ದೇವರಗದ್ದೆಯಲ್ಲಿ ಭತ್ತದ ನಾಟಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ಇದನ್ನು ಮೊದಲ ಬಾರಿಗೆ ವಿಶಿಷ್ಟವಾಗಿ ನಡೆಸಿದ್ದು ಇನ್ನೊಂದು ವಿಶೇಷ.


ದೇಗುಲದ ಆಡಳಿತ ಮಂಡಳಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಆಸಕ್ತಿಯಿಂದ ಈ ಕಾರ್ಯಕ್ರಮ ನಡೆಯಿತು. ಭತ್ತದ ಕೃಷಿ ನಾಟಿ ಕಾರ್ಯಕ್ರಮದಲ್ಲಿ ಸ್ಥಳಿಯ KSS ಕಾಲೇಜು, ಪದವಿಪೂರ್ವ ಕಾಲೇಜು, ಶ್ರೀ ಕುಮಾರಸ್ವಾಮಿ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆ ಹಾಗೂ ಸ.ಮಾ.ಹಿ.ಪ್ರಾ. ಶಾಲೆಯ ಒಟ್ಟು 250ಕ್ಕೂ ಮಿಕ್ಕಿದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಉತ್ಸಾಹದಿಂದ ಪಾಲ್ಗೊಂಡರು. ಮಕ್ಕಳೆಲ್ಲರು ಹೊಲಕ್ಕೆ ಇಳಿದರು. ಮಕ್ಕಳ ಜತೆ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರವೀಂದ್ರ ಎಂ ಎಚ್‌., ವ್ಯವಸ್ಥಾಪನ ಸಮಿತಿ ಸದಸ್ಯರು, ದೇಗುಲದ ಸಿಬಂದಿ, ಶಿಕ್ಷಣ ಸಂಸ್ಥೆಗಳ ಮುಖ್ಯಶಿಕ್ಷಕರು, ಸಹಶಿಕ್ಷಕರು ಸ್ಥಳಿಯರು ಹೊಲಕ್ಕೆ ಇಳಿದರು. ಆರಂಭದಲ್ಲಿ ಹೊಲಕ್ಕೆ ಪೂಜೆ. ಗೋಮಯದ ಮೂಲಕ ಗದ್ದೆಯನ್ನು ಶುದ್ಧಗೊಳಿಸಲಾಯಿತು. ಬಳಿಕ ಕೆಸರು ತುಂಬಿದ ಗದ್ದೆಯ ಸುತ್ತಲೂ ಕಟ್ಟ ಕಟ್ಟಿ ಹಂತಹಂತವಾಗಿ ನೀರನ್ನು ಹೊರಕ್ಕೆ ಬಿಡಲಾಯಿತು. ಸಾಂಪ್ರದಾಯಿಕ ಗೊಬ್ಬರ ಹರಡಿದ ಬಳಿಕ ಹೊಲ ಹದಗೊಳಿಸುವ ಕೆಲಸ ನಡೆಸಲಾಯಿತು. ಯಂತ್ರದ ಮೂಲಕ ಉಳುಮೆ ಮಾಡಿ ಹೊಲ ಹದಗೊಳಿಸಿದ ಬಳಿಕ ಹಲಗೆ ಬಳಸಿ ಸಮತಟ್ಟುಗೊಳಿಸಿ, ಆರಂಭದಲ್ಲಿ ಸಾಂಪ್ರದಾಯಿಕವಾಗಿ ಭತ್ತದ ಸಸಿಗಳನ್ನು ನಾಟಿ ಮಾಡಲಾಯಿತು. ಮಕ್ಕಳು, ಸ್ಥಳೀಯರು ಓಬೇಲೆ ಹಾಡುಗಳನ್ನು ಹಾಡುತ್ತ ನಾಟಿ ಮಾಡಿದರು.

ವ್ಯವಸ್ಥಾಪನ ಸಮಿತಿ ಸದಸ್ಯರಾದ ಬಾಲಕೃಷ್ಣ ಬಳ್ಳೇರಿ, ಕೃಷ್ಣಮೂರ್ತಿ ಭಟ್‌, ರಾಜೀವ್‌ ರೈ ಆರ್‌., ಮಾಧವ ಡಿ., ಜಿಲ್ಲಾ ಧಾರ್ಮಿಕ ಪರಿಷತ್‌ ಸದಸ್ಯೆ ವಿಮಲಾ ರಂಗಯ್ಯ, ಕೆಎಸ್‌ಎಸ್‌ ಕಾಲೇಜು ಪ್ರಾಂಶುಪಾಲ ಪ್ರೊ| ರಂಗಯ್ಯ ಶೆಟ್ಟಿಗಾರ್‌, ಎಸ್‌ಎಸ್‌ಪಿಯು ಕಾಲೇಜು ಪ್ರಾಂಶುಪಾಲೆ ಎಸ್‌.ಎಸ್‌. ಸಾವಿತ್ರಿ, ಪ್ರೌ.ಶಾಲಾ ವಿಭಾಗ ಮುಖ್ಯ ಶಿಕ್ಷಕ ಯಶವಂತ ರೈ, ಮಾಸ್ಟರ್‌ ಪ್ಲಾನ್‌ ಸಮಿತಿ ಸದಸ್ಯ ಶಿವರಾಮ ರೈ, ಪ್ರಮುಖರಾದ ರವೀಂದ್ರ ರುದ್ರಪಾದ, ಮೋಹನದಾಸ್‌ ರೈ, ದೇಗುಲದ ಕಚೇರಿ ಮುಖ್ಯಸ್ಥರಾದ ಪದ್ಮನಾಭ ಶೆಟ್ಟಿಗಾರ್‌, ಬಾಲಸುಬ್ರಹ್ಮಣ್ಯ ಮಾರರ್‌, ಸುಬ್ರಹ್ಮಣ್ಯ ಶಬರಾಯ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಿಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಆಟದ ಜತೆ ಕೃಷಿ ಪಾಠ

ಮಕ್ಕಳ ಜತೆ ಹಿರಿಯರೂ ಕೂಡ ಗದ್ದೆಗೆ ಇಳಿದು ಕೆಸರಿನಲ್ಲಿ ಹೊಲ ಹದ ಮಾಡುವ ಸಸಿ ನಡೆಸುವ ಕಾರ್ಯದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಸುರಿವ ಮಳೆಯಲ್ಲೆ ನೆನೆದು ಸಂಭ್ರಮಿಸಿದರು. ಭತ್ತದ ನಾಟಿ ಮಾಡುವ ಮೂಲಕ ಹೊಸ ಅನುಭವ ಪಡೆದರು. ನಮ್ಮ ಹಿರಿಯರು ಗದ್ದೆಯಲ್ಲಿ ಎಷ್ಟು ಕಷ್ಟ ಪಡುತ್ತಿದ್ದರು ಎಂಬುದು ಪ್ರಾತ್ಯಕ್ಷಿಕೆ ಮೂಲಕ ಮಕ್ಕಳು ಅರಿತುಕೊಂಡರು. ಭತ್ತದ ಕೃಷಿಕರು ಪಡುವ ಕಷ್ಟದ ಕುರಿತು ಪತ್ರಿಕೆಗಳಲ್ಲಿ, ಟಿ.ವಿ.ಗಳಲ್ಲಿ ನೋಡಿ ತಿಳಿದುಕೊಂಡಿದ್ದ ನಮಗೆ ಅದರ ಪ್ರತ್ಯಕ್ಷ ಅನುಭವ ಆಯಿತು ಎಂದು ಮಕ್ಕಳು ಅನುಭವ ಹಂಚಿಕೊಂಡರು.

ಕೃಷಿ ಸಂಸ್ಕೃತಿಯ ಪರಿಚಯ
ಕೃಷಿ ಸಂಸ್ಕೃತಿ ಮರೆತು ಹೋಗುತ್ತಿರುವ ಕಾಲದಲ್ಲಿ ಅದನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ನಡೆಸಿದ್ದೇವೆ. ದೇಗುಲಕ್ಕೆ ಧಾರ್ಮಿಕವಾಗಿಯೂ ಮಹತ್ವವಾಗಿ ಭತ್ತದ ಕದಿರು ಆವಶ್ಯಕತೆಯಿಂದ ಎರಡನ್ನೂ ಇಲ್ಲಿ ಏಕಕಾಲದಲ್ಲಿ ನಡೆಸಲಾಗಿದೆ.
– ನಿತ್ಯಾನಂದ ಮುಂಡೋಡಿ. ವ್ಯವಸ್ಥಾಪನ ಸಮಿತಿ ಅಧ್ಯಕ್ಷರು

— ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Power-Cable

Bantwala: ಬಿ.ಸಿ.ರೋಡಿನಲ್ಲಿ ರೈಲ್ವೇಯ ವಿದ್ಯುತ್‌ ಕೇಬಲ್‌ ಕಳವು

Stock-liqer

Sulya: ಆರಂತೋಡು: ಚಿಕನ್‌ ಸೆಂಟರ್‌ಗೆ ದಾಳಿ; ಮದ್ಯ ಅಕ್ರಮ ದಾಸ್ತಾನು ಪತ್ತೆ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.