‘ಶಿಕ್ಷಣ ಸಂಸ್ಥೆಯಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲದು’
Team Udayavani, Jun 20, 2018, 12:07 PM IST
ಹಳೆಯಂಗಡಿ: ಶಿಕ್ಷಣ ಸಂಸ್ಥೆಗಳಲ್ಲಿ ರಾಜಕೀಯ ಹಸ್ತಕ್ಷೇಪವನ್ನು ಸಹಿಸುವುದಿಲ್ಲ. ಶೈಕ್ಷಣಿಕ ಸಂಸ್ಥೆಗಳು ಉತ್ತಮ ಪರಿಸರ, ಫಲಿತಾಂಶ, ಶಿಸ್ತಿಗೆ ವಿಶೇಷ ಮಹತ್ವ ನೀಡಬೇಕು, ಮೂಲಸೌಕರ್ಯಕ್ಕೆ ಅಗತ್ಯವಿರುವ ಸರಕಾರಿ ಸವಲತ್ತುಗಳನ್ನು ಒದಗಿಸಲು ಪ್ರಯತ್ನ ನಡೆಸಿ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಹಳೆಯಂಗಡಿಯ ಇಂದಿರಾನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಜೂ. 19ರಂದು ಭೇಟಿ ನೀಡಿದ ಅವರು ಶಿಕ್ಷಕರ ವಿಶೇಷ ಸಭೆಯನ್ನು ನಡೆಸಿ ಅವರು ಮಾತನಾಡಿದರು. ನಿಕಟಪೂರ್ವ ಪ್ರಾಂಶುಪಾಲ ಪ್ರೊ| ವಿಶ್ವನಾಥ ಭಟ್ ಹಾಗೂ ಪ್ರಾಂಶುಪಾಲ ಡಾ| ಪಿ.ಬಿ. ಪ್ರಸನ್ನ ಅವರು ಕಾಲೇಜಿನ ಕಟ್ಟಡದ ನಿರ್ವಹಣೆ, ಬಳಕೆಯಾಗುತ್ತಿರುವ ಅನುದಾನ ಮತ್ತು ಶೈಕ್ಷಣಿಕವಾಗಿ ಕೈಗೊಳ್ಳುವ ಕ್ರಮಗಳನ್ನು ವಿವರಿಸಿದರು. ಶಾಸಕರು ನಿರ್ಮಾಣ ಹಂತದಲ್ಲಿರುವ ಕೊಠಡಿಯ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ಜಿ.ಪಂ. ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ತಾ. ಪಂ. ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು, ಹಳೆಯಂಗಡಿ ಗ್ರಾ. ಪಂ. ಸದಸ್ಯರಾದ ಸುಕೇಶ್ ಪಾವಂಜೆ, ಚಿತ್ರಾ ಸುಕೇಶ್, ಪಡುಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನ್‌ದಾಸ್, ಪಡುಪಣಂಬೂರು ವ್ಯ. ಸೇ. ಸ. ಸಂ. ಅಧ್ಯಕ್ಷ ಎಸ್.ಎಸ್. ಸತೀಶ್ ಭಟ್ ಕೊಳು ವೈಲು, ನಿರ್ದೇಶಕ ಹಿಮಕರ್ ಕದಿಕೆ, ಎಚ್. ರಾಮಚಂದ್ರ ಶೆಣೈ, ಮನೋಜ್ ಕುಮಾರ್, ರವಿಕಿರಣ್, ದಿನೇಶ್ ಹರಿಪಾದೆ, ರಾಕೇಶ್, ವಿಶ್ವನಾಥ್, ಶಂಕರ್ ಹಾಗೂ ಉಪನ್ಯಾಸಕ ವೃಂದದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರಾಜಕೀಯ ಹಸ್ತಕ್ಷೇಪ
ಜಿಲ್ಲೆಯಲ್ಲಿ ಉತ್ತಮ ಹೆಸರನ್ನು ಹೊಂದಿರುವ ಹಳೆಯಂಗಡಿ ಸರಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆಯು ಗಣನೀಯವಾಗಿದೆ. ಇಲ್ಲಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಉಪನ್ಯಾಸಕರ ಉತ್ತಮ ಸ್ಪಂದನೆಯಿಂದ ಸಾಧ್ಯವಾಗಿದೆ. ಆಡಳಿತ ವ್ಯವಸ್ಥೆಯಲ್ಲಿ ರಾಜಕೀಯ ಹಸ್ತಕ್ಷೇಪ ಇರುವುದರಿಂದ ಇದನ್ನು ಮುಂದಿನ ದಿನದಲ್ಲಿ ಸರಿದೂಗಿಸಿಕೊಂಡು ಸಾಗಬೇಕು.
- ಉಮಾನಾಥ ಕೋಟ್ಯಾನ್
ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.