ಓವರ್‌ಬ್ರಿಜ್ ಕೊರಗಜ್ಜ ಕಟ್ಟೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಕೆ
Team Udayavani, Apr 12, 2018, 11:24 AM IST
ಉಳ್ಳಾಲ: ಮುಂದಿನ ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದ ಶಾಸಕ ಹಾಗೂ ಸಚಿವ ಯು.ಟಿ. ಖಾದರ್ ಅವರ ಚುನಾವಣಾ ಪ್ರಚಾರ ಕಾರ್ಯ ನಿರ್ವಿಘ್ನವಾಗಿ ನಡೆಯಲಿ ಮತ್ತು ಕ್ಷೇತ್ರದಲ್ಲಿ ಅತ್ಯಧಿಕ ಮತಗಳಿಂದ ಜಯಿಸಲಿ ಎಂದು ತೊಕ್ಕೊಟ್ಟು ಓವರ್ ಬ್ರಿಜ್ ಕೊರಗಜ್ಜ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.
ಶ್ರೀ ಕ್ಷೇತ್ರದ ಗೌರವ ಸಲಹೆಗಾರ ರೋಹಿತ್ ಉಳ್ಳಾಲ ಮಾತನಾಡಿ, ಕೊರಗಜ್ಜ ಸೇವಾ ಸಮಿತಿಯ ಆಶ್ರಯದ ಈ ಸನ್ನಿಧಿಯ ಅಭಿವೃದ್ಧಿಯಲ್ಲಿ ಯು.ಟಿ. ಖಾದರ್ ಅವರ ಸಹಕಾರ ಮಹತ್ವದ್ದು, ಕಳೆದ ಬಾರಿ ಚುನಾವಣಾ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದು, ಸಚಿವರಾಗಿ ಆಯ್ಕೆಯಯಾಗಲಿ ಎಂದು ವಿಶೇಷ ಪ್ರಾರ್ಥನೆ ನಡೆಸಿದ್ದವು.
ಇದೀಗ ಚುನಾವಣೆ ಹಿನ್ನೆಲೆಯಲ್ಲಿ ಖಾದರ್ ಅವರ ಪ್ರಚಾರ ಕಾರ್ಯ ನಿರ್ವಿಘ್ನವಾಗಿ ನಡೆಯಲಿ ಎಂದ ಅವರು ಈ ಕ್ಷೇತ್ರಕ್ಕೆ ಸರ್ವಧರ್ಮದವರು ಬಂದು ಸೇವೆ ನೀಡುತ್ತಾರೆ. ಎಲ್ಲರಿಗೂ ಈ ಸಮಾನ ಆದ್ಯತೆ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಚಿವ ಯು.ಟಿ. ಖಾದರ್, ಉಮಾ ಮಹೇಶ್ವರೀ ದೇವಸ್ಥಾನದ ಮೊಕ್ತೇಸರ ಈಶ್ವರ ಉಳ್ಳಾಲ್ ಅವರು ಮಾತನಾಡಿ, ದೇವಸ್ಥಾನ, ದೈವಸ್ಥಾನಗಳಿಗೆ ಯು.ಟಿ. ಖಾದರ್ ಪ್ರವೇಶದ ವಿಚಾರದಲ್ಲಿ ಕೆಲವರು ನಿಂದನಾತ್ಮಕ ಹೇಳಿಕೆ ನೀಡುತ್ತಿರುವುದು ಖೇದನೀಯ ದೇವಸ್ಥಾನಗಳಲ್ಲಿ ಎಲ್ಲ ಧರ್ಮದವರಿಗೂ ಸಮಾನ ಪ್ರಾತಿನಿಧ್ಯವಿದೆ ಎಂದರು.
ಈ ಸಂದರ್ಭದಲ್ಲಿ ರವೀಂದ್ರ ಗುರಿಕಾರ, ಅಧ್ಯಕ್ಷ ಮೋಹನ್‌ದಾಸ್ ಕಾಪಿಕಾಡ್, ರವಿ ಎಸ್. ಗಾಂಧಿನಗರ, ಮುರಳಿ ಮೋಹನ್ ಸಾಲ್ಯಾನ್, ಬಾಝಿಲ್ ಡಿ’ಸೋಜಾ, ಉದಯ ಕುಮಾರ್, ವಸಂತ್ ಭಟ್ನಗರ, ಭಾಸ್ಕರ ತೊಕ್ಕೊಟ್ಟು ರಾಜೇಂದ್ರ ಬಂಡಸಾಲೆ, ಕಿಶೋರ್ ಕುಮಾರ್, ಉದಯ ಗಾಂಧಿನಗರ, ಚಂದ್ರಹಾಸ್, ವಸಂತ್ ಫ್ಲವರ್ , ಚಂದ್ರಹಾಸ್ ಗಣೇಶ್‌ನಗರ, ವಿಜಯ್, ಯಶೋಧರ ಭಟ್ನಗರ, ಸಚಿನ್, ಶರಣ್ ಹಂಸರಾಜ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.