ಸುಳ್ಯ: ದಕ್ಷಿಣ ಭಾರತದ ಅಪರೂಪದ ಹಾರುವ ಅಳಿಲು ಪತ್ತೆ
Team Udayavani, Oct 10, 2022, 3:54 PM IST
ಸುಳ್ಯ : ದಕ್ಷಿಣ ಭಾರತದ ಅಪರೂಪದ ಅಳಿಲು ಪ್ರಭೇದಗಳಲ್ಲಿ ಒಂದಾದ ಟ್ರಾವಂಕೂರು ಹಾರುವ ಅಳಿಲು (Travancore flying squirrel) ಸುಳ್ಯ ತಾಲೂಕಿನಲ್ಲಿ ಪತ್ತೆಯಾಗಿದೆ. ಇದು ನಿಶಾಚರಿ ಆಗಿದ್ದು ಅಪರೂಪಕ್ಕೆ ಕಾಣಸಿಗುತ್ತದೆ. ಪರಿಸರ ಸಂರಕ್ಷಕ ದೀಪಕ್ ಸುಳ್ಯ ಅವರ ತೋಟದಲ್ಲಿ ಇದು ಪತ್ತೆಯಾಗಿದೆ.
ಸ್ಥಳೀಯವಾಗಿ ಇದನ್ನು ದರಗು ಪಾಂಜ, ಚಿಕ್ಕ ಪಾಂಜ ಎಂದು ಕರೆಯುತ್ತಾರೆ. ಪಶ್ಚಿಮಘಟ್ಟದಲ್ಲಿ ಕಂಡುಬರುವ ಅಳಿವಿನಂಚಿನ ಪ್ರಾಣಿ ಪ್ರಭೇದಗಳಲ್ಲಿ ಇದೂ ಒಂದು. ಇದು ಸಾಮಾನ್ಯವಾಗಿ 32 ಸೆಂ.ಮೀ. ಉದ್ದ ಇರುತ್ತದೆ. ಮೃದುವಾದ, ಕೆಂಪು-ಕಂದು ಬಣ್ಣದ ಬೆನ್ನಿನ ತುಪ್ಪಳವನ್ನು ಹೊಂದಿರುತ್ತದೆ ಮತ್ತು ನಯ ಗೊಳಿಸಿದ ತಾಮ್ರದ ಬಣ್ಣವನ್ನು ಹೋಲುತ್ತದೆ. ಮುಂಗಾಲುಗಳು ರೆಕ್ಕೆಯ ಆಕಾರವನ್ನು ಹೊಂದಿರು ತ್ತವೆ ಎಂದು ಜೀವವೈವಿಧ್ಯ ಸಂಶೋಧಕರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಬ್ರಹ್ಮಗಿರಿ ಅಭಯಾರಣ್ಯ ಮತ್ತು ಕೊಡಗಿನ ಮಾಕುಟ್ಟ ಅರಣ್ಯ ಹಾಗೂ ತ.ನಾಡು, ಕೇರಳಗಳಲ್ಲಿ ಇದನ್ನು ಈ ಹಿಂದೆ ಪತ್ತೆಹಚ್ಚಲಾಗಿತ್ತು.
ಇದನ್ನೂ ಓದಿ : ಮಂಗಳೂರು : ಪಾಠದ ಜತೆಗೇ ಪದವಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.