ಜನ ಮತ ದಾನ : ಇದು ಮೂಡಬಿದಿರೆ ವೃತ್ತಾಂತ
Team Udayavani, Apr 17, 2018, 8:45 AM IST
ಈ ಬಾರಿಯ ಚುನಾವಣಾ ಪೂರ್ವದಲ್ಲಿ ಅಂದರೆ ಒಂದು ವರ್ಷದ ಮೊದಲಿನಿಂದಲೇ ಸಾಕಷ್ಟು ಸುದ್ದಿಯಲ್ಲಿದೆ ಮೂಡಬಿದಿರೆ ವಿಧಾನಸಭಾ ಕ್ಷೇತ್ರ. ಜೈನಕಾಶಿ ಎಂದೇ ಪ್ರಸಿದ್ಧವಾಗಿರುವ ಮೂಡಬಿದಿರೆ 18 ಬಸದಿಗಳು, 18 ದೇವಸ್ಥಾನಗಳು, 18 ಪುಷ್ಕರಿಣಿಗಳ ಅಪೂರ್ವ ಕ್ಷೇತ್ರ. ಈಗ ಶಿಕ್ಷಣಕಾಶಿ ಎಂಬ ಬಿರುದೂ ಸೇರಿದೆ. ಜಗತ್ತಿನಲ್ಲಿಯೇ ಶಿಲ್ಪಕಲಾ ಅದ್ಭುತವೆಂದು ವ್ಯಾಖ್ಯಾನಿಸುವ ಸಾವಿರ ಕಂಬದ ಬಸದಿ ಎಂಬ ನಾಮಾಂಕಿತ ತ್ರಿಭುವನ ತಿಲಕ ಚೈತ್ಯಾಲಯ. ಚೌಟ ಅರಸು ಮನೆತನದವರು ಇಲ್ಲಿ ಸುದೀರ್ಘ ಕಾಲ ಆಳಿದರು. ಇದು ಮಹಾಕವಿ ರತ್ನಾಕರವರ್ಣಿಯ ನಾಡು. ಮೂಡಬಿದಿರೆ ಕ್ಷೇತ್ರವು ಮೂಲ್ಕಿಯ ಸಹಿತವಾಗಿದೆ. ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರೀ ಕ್ಷೇತ್ರದಿಂದ ವಿಶೇಷ ಪ್ರಸಿದ್ಧಿ. ಹೀಗೆ ಮೂಡಬಿದಿರೆ ಕ್ಷೇತ್ರವು ಕಡಲು – ಮಲೆನಾಡುಗಳ ಸಂಗಮ. ಕೃಷಿ ಮತ್ತು ಮೀನುಗಾರಿಕೆ ಇಲ್ಲಿದೆ. ಪಕ್ಕದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಸನ್ನಿಧಿ ಇದೆ.
ಮೂಲ್ಕಿ ಮೂಡಬಿದಿರೆ ಕ್ಷೇತ್ರದಲ್ಲಿ 1962 ಮತ್ತು 1967ರಲ್ಲಿ ಸ್ವತಂತ್ರ ಪಕ್ಷದ ಅಭ್ಯರ್ಥಿಗಳು ಗೆದ್ದರು. ಮತ್ತೆರಡು ಬಾರಿ ಕಾಂಗ್ರೆಸ್‌ಗೆ ಜಯ. 1983ರಲ್ಲಿ ಜನತಾ ಪಕ್ಷದಿಂದ ಕೆ. ಅಮರನಾಥ ಶೆಟ್ಟಿ ಜಯಿಸಿದರು. 1985ರಲ್ಲೂ ಜಯಿಸಿದರು. 1989ರಲ್ಲಿ ಕಾಂಗ್ರೆಸ್. 1994ರಲ್ಲಿ ಮತ್ತೆ ಅಮರನಾಥ ಶೆಟ್ಟಿ ಗೆದ್ದರು – ಈ ಬಾರಿ ಜಾತ್ಯತೀತ ಜನತಾ ದಳದಿಂದ. ಮುಂದೆ 1999, 2004, 2008, 2013ರಲ್ಲಿ- ಅಂದರೆ, ಸತತ 4 ಬಾರಿ ಜಯಿಸಿದವರು ಕಾಂಗ್ರೆಸ್‌ನ ಕೆ. ಅಭಯಚಂದ್ರ ಅವರು. ಇದು ಸತತ ಗೆಲುವಿನಲ್ಲಿ ಜಿಲ್ಲೆಯ ದಾಖಲೆಗಳಲ್ಲೊಂದಾಗಿದೆ. ಕೆ. ಅಮರನಾಥ ಶೆಟ್ಟಿ ಮತ್ತು ಕೆ. ಅಭಯಚಂದ್ರ ಅವರು ಕರ್ನಾಟಕ ಸರಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದವರು. ಹೀಗೆ ಇಬ್ಬರು ಸಚಿವರನ್ನು ನೀಡಿದ ಕ್ಷೇತ್ರವಿದು. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಎಂ. ವೀರಪ್ಪ ಮೊಯಿಲಿ ಅವರು ಮೂಡಬಿದಿರೆಯ ಮಾರ್ಪಾಡಿಯವರು.
ಅಂದ ಹಾಗೆ…
ಮೊದಲ ಎರಡು ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಈ ಕ್ಷೇತ್ರ ಈ ಹೆಸರಿನಲ್ಲಿ ಅಸ್ತಿತ್ವದಲ್ಲಿ ಇರಲಿಲ್ಲ. ಮೊದಲ ಚುನಾವಣೆಯಲ್ಲಿ ಇದು ಕಾರ್ಕಳದ ದ್ವಿಸದಸ್ಯ ಕ್ಷೇತ್ರಗಳಲ್ಲೊಂದಾಗಿತ್ತು. ಆಗ ಮದ್ರಾಸ್ ಪ್ರಾಂತ. ಮುಂದೆ ಮೂಲ್ಕಿ ಮೂಡಬಿದಿರೆ ಕ್ಷೇತ್ರಕ್ಕೇ ಎಂಬಂತೆ 1962ರಲ್ಲಿ ಚುನಾವಣೆ ನಡೆಯಿತು. ಆಗ ಸ್ವತಂತ್ರ ಪಕ್ಷದ (ರಾಜಾಜಿ ರೂಪಿತ) ಗೋಪಾಲ್ ಎಸ್. ಅವರು ಗೆದ್ದರು. ಮೊದಲ ಚುನಾವಣೆಯಲ್ಲಿ ಕಾರ್ಕಳದಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದ ಕಾಂಗ್ರೆಸ್‌ನ ಮಂಜಪ್ಪ ಉಳ್ಳಾಲ ನಿಕಟ ಸ್ಪರ್ಧಿ. ನಿಕಟ ಸ್ಪರ್ಧೆ ಯಲ್ಲಿ ಅನುಕ್ರಮವಾದ ಮತಗಳು
10,431 ಮತ್ತು 10,173.
— ಮನೋಹರ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!
Puttur: ಮಹಿಳೆಯ ಮಾನಭಂಗ ಯತ್ನ ಪ್ರಕರಣ; ಆರೋಪಿ ಖುಲಾಸೆ
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
ವಿದ್ಯುತ್ ದರ ಏರಿಕೆಯ ಸುಳಿವು ನೀಡಿದ ಮೆಸ್ಕಾಂ;ಯೂನಿಟ್‌ಗೆ 0.70 ರೂ. ದರ ಏರಿಕೆ ಪ್ರಸ್ತಾವನೆ
MUST WATCH
ಹೊಸ ಸೇರ್ಪಡೆ
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.