ಮಾತಿನಮತ,ಸಂದರ್ಶನ :ಕೆ.ಅಮರನಾಥ ಶೆಟ್ಟಿ,ಮಾಜಿ ಶಾಸಕ,ಮೂಡಬಿದಿರೆಕ್ಷೇತ್ರ
Team Udayavani, Mar 5, 2018, 2:12 PM IST
ಅಭಿವೃದ್ಧಿ – ಶಾಸಕರೊಂದಿಗೆ ಸಂಸದರೂ ಗಮನಹರಿಸಲಿ
ಮೂರು ಬಾರಿ ಸಚಿವರಾಗಿದ್ದಿರಿ. ಕ್ಷೇತ್ರಕ್ಕೆ ತಮ್ಮ ಕೊಡುಗೆ…?
ಮೂಡಬಿದಿರೆ, ಮೂಲ್ಕಿ ಎರಡೂ ಕಡೆಗಳಲ್ಲಿ ನಾಡಕಚೇರಿ, ಕೈಗಾರಿಕಾ ಪ್ರಾಂಗಣ, ಸಬ್ ಟ್ರೆಶರಿ, ಮೊರಾರ್ಜಿ ದೇಸಾಯಿ ಶಾಲೆ, ಪ್ರತಿ ಗ್ರಾಮದಲ್ಲೂ ನಜೀರ್ ಸಾಬ್ ಕಾಲದಲ್ಲಿ ಬೋರ್‌ವೆಲ್, ಓವರ್‌ಹೆಡ್ ಟ್ಯಾಂಕ್, ಮೂಡಬಿದಿರೆಗೆ ಪುಚ್ಚಮೊಗರು ಫಲ್ಗುಣಿ ಹೊಳೆಯಿಂದ ನೀರು ಪೂರೈಕೆ, ಅಶ್ವತ್ಥಪುರ ಕಿಜನಬೆಟ್ಟು , ಶಿರ್ತಾಡಿ-ಪೆರಾಡಿ, ಮಾನಂಪಾಡಿ, ಇರುವೈಲು ಸೇತುವೆಗಳು, ವೆಂಟೆಡ್ ಡ್ಯಾಂ …. ಹೀಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ.
ಕಳೆದ 2 ದಶಕಗಳಲ್ಲಿ ಶಾಸಕರಾಗಿದ್ದವರ ಸಾಧನೆ ಬಗ್ಗೆ …?
ಸಾಕಷ್ಟು ಕೆಲಸ ಆಗಿದೆ, ಇಲ್ಲವೆಂದಲ್ಲ. ಆದರೆ ಬಹುಕಾಲದಿಂದ ನಿರೀಕ್ಷಿಸುತ್ತಿರುವ, ಮೂಡಬಿದಿರೆಯ ಒಳಚರಂಡಿ ಯೋಜನೆ ಇನ್ನೂ ಸರ್ವೇ ಹಂತದಲ್ಲಿ ಉಳಿದಿದೆ. ಯಾವತ್ತೋ ಆಗಬೇಕಿತ್ತು. ಮಾರುಕಟ್ಟೆ ನಿರ್ಮಾಣಕ್ಕೆ ನಾನು ಅಧ್ಯಕ್ಷನಾಗಿರುವ ಮೂಡಬಿದಿರೆ ಸರ್ವಿಸ್ ಕೋ-ಆಪರೇಟಿವ್ ಬ್ಯಾಂಕ್‌ನಿಂದ 5 ಕೋ.ರೂ. ವರೆಗೆ ಸಾಲ ಕೊಡುವ ಪ್ರಸ್ತಾವನೆಗೆ ಶಾಸಕ ಅಭಯಚಂದ್ರ ಒಮ್ಮೆ ಒಪ್ಪಿದ್ದರೂ ಮುಂದಿನ ಬೆಳವಣಿಗೆಯಲ್ಲಿ ಖಾಸಗಿ ವಲಯದಿಂದ ನಿರ್ಮಾಣವಾಗುವ ಹಂತಕ್ಕೆ ಹೋಯಿತು. ಬೈಪಾಸ್‌ಗೆಂದು ಗುರುತಿಸಿದ ಜಾಗದಲ್ಲಿ ರಿಂಗ್ ರೋಡ್ ಆಗಿದೆ. ವಿದ್ಯಾಗಿರಿಯ ಹಿಂಭಾಗದಿಂದ ಹೊರಡು ಅಲಂಗಾರು ಸೇರುವ ಹೊಸದಾದ ಬೈಪಾಸ್ ರಚನೆಯ ಕುರಿತಾದ ಪ್ರಸ್ತಾವ ಅಸ್ಪಷ್ಟವಾಗಿ ಉಳಿದುಕೊಂಡಿದೆ; ಶಾಸಕರೊಂದಿಗೆ ಸಂಸದರೂ ಈ ಬಗ್ಗೆ ಗಮನಹರಿಸಬೇಕು.
ಮೂಡಬಿದಿರೆ ತಾಲೂಕು ರಚನೆ ?
– ವಿವಿಧ ಸಮಿತಿಗಳ ಮುಂದೆ ಈ ಅಹವಾಲಿಗೆ ಬೇಕಾದ ಸಮರ್ಥನೆಗಳನ್ನು ಮಂಡಿಸಿದ್ದೆ. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಾಲೂಕು ಘೋಷಿಸಿದರು. ಹಣ ಇಡಲಿಲ್ಲ. ಮುಂದೆ ಸಿದ್ದರಾಮಯ್ಯ ಘೋಷಿಸಿದರು. ಒಂದೊಂದು ತಾಲೂಕು ರಚನೆಗೆ 10 ಕೋಟಿ ರೂ. ಬೇಕಾದೀತು. ಆದರೆ ಈ ಬಾರಿಯ ಬಜೆಟ್‌ನಲ್ಲಿ ಏನೂ ಮೊತ್ತ ಇರಿಸಿಲ್ಲ. ನಿರಾಶೆಯಾಗಿದೆ.
ರಾಜಕೀಯ – ಸಹಕಾರಿ ರಂಗ ಎರಡನ್ನೂ ಹೇಗೆ ನಿಭಾಯಿಸುತ್ತ ಇದ್ದೀರಿ.
ಸಹಕಾರಿ ರಂಗದಲ್ಲಿ ಪಕ್ಷ ರಾಜಕೀಯ ತಂದಿಲ್ಲ. ಮೂಡಬಿದಿರೆ ಸೊಸೈಟಿ ಬ್ಯಾಂಕಲ್ಲಿ ಕಳೆದ 50 ವರ್ಷಗಳಿಂದ ಸಕ್ರಿಯನಾಗಿ, ಸುದೀರ್ಘ ಕಾಲ ಅಧ್ಯಕ್ಷನಾಗಿದ್ದುಕೊಂಡು, ಇದನ್ನು ಬ್ಯಾಂಕಾಗಿಯೇ ಉಳಿಸಿಕೊಂಡು ರಾಜ್ಯದಲ್ಲಿ ಪ್ರತಿಷ್ಠಿತ ಸ್ಥಾನಮಾನ ಗಳಿಸುವಲ್ಲಿ ಪರಿಶ್ರಮಿಸಿದ್ದೇನೆ.
ಈ ಬಾರಿ ಓಟಿಗೆ ನಿಲ್ಲುವಿರಾ ?
ಇನ್ನೂ ನಿರ್ಧಾರ ಆಗಿಲ್ಲ. ಏನಿದ್ದರೂ ನಮ್ಮ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ.
ಧನಂಜಯ ಮೂಡಬಿದಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್ ಗಂಡು ಸಿಂಹ’ ಆಗಮನ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
MUST WATCH
ಹೊಸ ಸೇರ್ಪಡೆ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.