ಮಾತಿನ ಮತ, ಸಂದರ್ಶನ:ಉರಿಮಜಲು ಕೆ. ರಾಮ ಭಟ್‌,ಮಾಜಿ ಶಾಸಕರು, ಪುತ್ತೂರು


Team Udayavani, Mar 3, 2018, 2:11 PM IST

3-March-11.jpg

ನಿಮ್ಮ ರಾಜಕೀಯ ಪಯಣ ಹೇಗೆ ?
ಕಾಂಗ್ರೆಸ್‌ಗೆ ಎದುರಾಗಿ ಜನಸಂಘ ಬೆಳೆಯುತ್ತಿದ್ದ ಕಾಲ. ಜನಸಂಘದಿಂದ 1957, 62, 67, 72ರಲ್ಲಿ ಸ್ಪರ್ಧಿಸಿ ಸೋತಿದ್ದೇನೆ. ಜನತಾ ಪಾರ್ಟಿಯಿಂದ ಪ್ರಥಮ ಬಾರಿಗೆ ಕಾಂಗ್ರೆಸೇತರ ಶಾಸಕನಾಗಿ 1978 ಮತ್ತು 1983ರಲ್ಲಿ ಗೆದ್ದಿದ್ದೇನೆ. 1984ರಲ್ಲಿ ಲೋಕಸಭೆಗೆ ಸ್ಪರ್ಧಿಸಿ ಸೋತು, 1985 ರಲ್ಲಿ ವಿಧಾನಸಭೆಗೆ ಸ್ಪರ್ಧಿಸಿ ಸೋತಿದ್ದೇನೆ. ಬಳಿಕ ವಿರಾಮ ಪಡೆದು 1999ರಲ್ಲಿ ಲೋಕಸಭೆಗೆ ಸ್ಪರ್ಧಿಸಿ ಸೋತಿದ್ದೇನೆ.

ರಾಜಕೀಯ ಸವಾಲು ಮತ್ತು ಬೆಳವಣಿಗೆ ಹೇಗಿತ್ತು?
ಆ ಕಾಲದಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆಯ ಕಾಂಗ್ರೆಸೇತರ ಪಕ್ಷವನ್ನು ಬೆಳೆಸುವ ಪ್ರಮುಖ ಉದ್ದೇಶ ದಿಂದಲೇ ಅಷ್ಟೂ ಬಾರಿ ಸ್ಪರ್ಧಿಸಿದ್ದೆ. ಮಂಗಳೂರಿನಲ್ಲಿ ಪ್ರಬಲವಾಗುತ್ತಿದ್ದ ಕಮ್ಯೂನಿಸ್ಟ್‌ ಪಕ್ಷ, ಭೂ ಸುಧಾರಣೆಯ ಪರ -ವಿರೋಧ, ಜನಸಂಘವು ಬ್ರಾಹ್ಮಣರ ಪಕ್ಷ ಎನ್ನುವ ವಿರೋಧದ ನಡುವೆ ರಾಜಕೀಯ ಅಸ್ತಿತ್ವ, ಬೆಳವಣಿಗೆ ಸವಾಲಾಗಿತ್ತು. ಆಗ ಜನರ ಹೃದಯ ಪ್ರವೇಶಿಸಲು ಸಾಕಷ್ಟು ಪ್ರಯತ್ನ ನಡೆಸಬೇಕಿತ್ತು. ನಮ್ಮಂಥವರು ಹಳ್ಳಿಹಳ್ಳಿಗಳಲ್ಲಿ ನಡೆಸಿದ ಯತ್ನ ಇಂದು ಫಲ ನೀಡುತ್ತಿದೆ.

ಪ್ರಚಾರದ ವೈಖರಿ ಹೇಗಿತ್ತು ?
ಆಗಲೂ 10-15 ಸಾವಿರ ರೂ. ಖರ್ಚಾಗುತ್ತಿತ್ತು. ಸ್ಪರ್ಧಿಸುವ ಸಂದರ್ಭ ಹಿತಚಿಂತಕರೇ ಸಹಾಯ ಮಾಡುತ್ತಿದ್ದರು. ನನ್ನ ಕಾರನ್ನು ಪ್ರಚಾರಕ್ಕೆ, ಜನರ ಬಳಿಗೆ ಹೋಗಲು ಬಳಸುತ್ತಿದ್ದೆ. ಬಹಿರಂಗ ಸಾರ್ವಜನಿಕ ಸಭೆಯೂ ನಡೆಯುತ್ತಿತ್ತು.

ಆಗ ಈಗಕ್ಕೆ ಇರುವ ವ್ಯತ್ಯಾಸವೇನು ?
ಆಗ ರಾಜಕೀಯಕ್ಕೆ ಮತ್ತು ಸ್ಪರ್ಧಿಸುವವರಲ್ಲಿ ಒಂದು ಸಿದ್ಧಾಂತ ಇತ್ತು. ಜನಸಂಘ, ಜನತಾ ಪಕ್ಷ ಹಾಗೂ ಬಿಜೆಪಿ ಆ ನೆಲೆಯಲ್ಲಿ ಕಾರ್ಯನಿರ್ವಹಿಸಿದ್ದರಿಂದ ಮತ್ತು ಅಂದು ಅನೇಕ ಮುಖಂಡರು ತೋರಿದ ಶ್ರಮ ಇಂದು ಗೆಲುವಿನ ರೂಪದಲ್ಲಿದೆ. ಇಂದು ಒಟ್ಟು ರಾಜಕೀಯ ವ್ಯವಸ್ಥೆಯಲ್ಲಿ ಸ್ವಹಿತಾಸಕ್ತಿಗೆ ಹೆಚ್ಚಿನ ಪ್ರಾಮುಖ್ಯ ಇದೆ. ಇಡೀ ಸಮಾಜದಲ್ಲಿ ಮೌಲ್ಯಾಧಾರಿತ ರಾಜಕಾರಣ ಕಡಿಮೆಯಾಗುತ್ತಿದೆ.

ತಮ್ಮ ಅವಧಿಯಲ್ಲಿನ ಪ್ರಮುಖ ಅಭಿವೃದ್ಧಿ ಕಾರ್ಯ ?
ನಾನು ಶಾಸಕನಾಗಿದ್ದ ಸಮಯದಲ್ಲಿ ಸರಕಾರದಿಂದ ಸಾಕಷ್ಟು ಫಂಡ್‌ ಸಿಗುತ್ತಿರಲಿಲ್ಲ. ಆದರೂ ಅಭಿವೃದ್ಧಿಯ ದೃಷ್ಟಿಯಿಂದ ಅನೇಕ ಕಾಮಗಾರಿಗಳನ್ನು ನಡೆಸಿದ್ದೇನೆ. ಪುತ್ತೂರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವುದು ಇದರಲ್ಲಿ ಪ್ರಮುಖವಾದುದು.

ರಾಜಕೀಯ ಜೀವನದ ಬಗ್ಗೆ ತೃಪ್ತಿ ಇದೆಯೇ ?
ರಾಜಕೀಯದ ಎಲ್ಲ ಪಟ್ಟುಗಳಲ್ಲಿ ತೊಡಗಿಸಿಕೊಂಡು ನೈಜ ಜಾತ್ಯತೀತ ನೆಲೆಯಲ್ಲಿ ಕೆಲಸ ಮಾಡಿದ, ರಾಷ್ಟ್ರೀಯತೆಯ ಪರಿಕಲ್ಪನೆಗಾಗಿ ಹೋರಾಟ ನಡೆಸಿದ ಖುಷಿ ಇದೆ. ಈ ನಿಟ್ಟಿನಲ್ಲಿ ಹಂತ ಹಂತವಾಗಿ ಯಶಸ್ಸು ಪಡೆದ ತೃಪ್ತಿ ಇದೆ.

„ರಾಜೇಶ್‌ ಪಟ್ಟೆ

ಟಾಪ್ ನ್ಯೂಸ್

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

11

Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ

10

Sullia: ಬಸ್‌ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್‌, ಶೂ ಕಳವು

2(1

Kumbra ಜಂಕ್ಷನ್‌ನಲ್ಲಿ ಈಗ ಸೆಲ್ಫಿ ಪಾಯಿಂಟ್‌ ಆಕರ್ಷಣೆ!

1

Belthangady: ಕಾನನ ವಾಸಿಗಳಿಗೆ ಮೆಸ್ಕಾಂ ಬೆಳಕು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.