ಮಾತಿನ ಮತ, ಸಂದರ್ಶನ:
Team Udayavani, Apr 4, 2018, 2:12 PM IST
ನೆಮ್ಮದಿಯ ನಾಳೆಗೆ ಬಿಜೆಪಿ
2004ರಲ್ಲಿ ಬಿಜೆಪಿ ಪ್ರವೇಶಿಸಿದಾಕ್ಷಣ ಕೆ.ಪಿ. ಜಗದೀಶ ಅಧಿಕಾರಿ ಅವರಿಗೆ ಲಭಿಸಿದ್ದು ಮಂಡಲಾಧ್ಯಕ್ಷತೆ. ಅವಧಿ ಮುಗಿದ ಕೂಡಲೇ ಜಿಲ್ಲಾ ಉಪಾಧ್ಯಕ್ಷತೆ ಪ್ರಾಪ್ತಿ. ಈ ಹುದ್ದೆಯಲ್ಲಿ ನಿರಂತರ ಮೂರನೇ ಅವಧಿಯಲ್ಲಿ ಮುಂದುವರಿಕೆ. 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಕೆ. ಅಭಯಚಂದ್ರ ಅವರಿಗೆ ತೀವ್ರ ಸ್ಪರ್ಧೆ ನೀಡಿದರು. ಕಾಂಗ್ರೆಸ್ ಮೂಲದವರಾದರೂ ಬಿಜೆಪಿಗೆ ಪ್ರವೇಶವಾದ ಬಳಿಕ ಪಕ್ಷಕ್ಕೆ ಬಲತಂದು ಕೊಟ್ಟವರು.
ನೀವು ಈ ಬಾರಿ ಟಿಕೆಟ್ ಆಕಾಂಕ್ಷಿಯೇ?
ಪಕ್ಷದಲ್ಲಿ ಹಿರಿಯರೊಂದಿಗೆ, ಒಡನಾಡಿಗಳೊಂದಿಗೆ ಶ್ರದ್ಧಾ ಪೂರ್ವಕ ದುಡಿದವನು ನಾನು. ಸಹಜವಾಗಿ ನಾನೂ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿ.
ನೀವು ಬರುವ ಮೊದಲು ಬಿಜೆಪಿ ಹೇಗಿತ್ತು? ಮತ್ತೆ ಏನೇನಾಗಿದೆ?
2004ರ ಮೊದಲಿಗೂ ಈಗಿನ ಸ್ಥಿತಿಗೂ ಅಜಗಜಾಂತರವಿದೆ. ಬಹುತೇಕ ಪಂಚಾಯತ್‌ಗಳಲ್ಲಿ ಆಡಳಿತ ಹಿಡಿದಿದ್ದೇವೆ, ಎಲ್ಲ 5 ಜಿ.ಪಂ. ಕ್ಷೇತ್ರಗಳೂ ಬಿಜೆಪಿ ಪಾಲಾಗಿವೆ. ಮೂಡಬಿದಿರೆ ಪುರಸಭೆಯಲ್ಲಿ ಶೂನ್ಯದಿಂದ 4 ಸೀಟು ಬರುವಂತಾಯಿತು. ಮೂಲ್ಕಿ ನ.ಪಂ.ನಲ್ಲಿ ಒಂದೇ ಸ್ಥಾನ ಇತ್ತು. ಈಗ ಬಿಜೆಪಿಯದೇ ಆಡಳಿತ. ವಿಧಾನಸಭಾ ಚುನಾವಣೆಗಳಲ್ಲಿ ಮೂರನೇ ಸ್ಥಾನದಲ್ಲಿದ್ದ ಬಿಜೆಪಿ 2008ರಲ್ಲಿ ಕಾಂಗ್ರೆಸ್‌ನೆದುರು 6,000 ಮತಗಳಿಂದ, ಮತ್ತು 2013ರಲ್ಲಿ ಉಮಾನಾಥ ಕೋಟ್ಯಾನ್ ಸ್ಪರ್ಧಿಸಿದಾಗ 4,000 ಮತಗಳ ಅಂತರದಿಂದ ಎರಡನೇ ಸ್ಥಾನಕ್ಕೆ ಬಂದಿದೆ. ಸಂಸತ್ ಚುನಾವಣೆಯಲ್ಲಿ ವಿಜೇತ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್‌ಗೆ 76,000 ಮತ ಬಿದ್ದದ್ದು ಮೂಡಬಿದಿರೆ ಕ್ಷೇತ್ರದಲ್ಲಿ. ಹೀಗೆ ಪಕ್ಷದ ಮಂಡಲಾಧ್ಯಕ್ಷ, ಜಿಲ್ಲಾ ಉಪಾಧ್ಯಕ್ಷನಾಗಿ ಚೆನ್ನಾಗಿ ಕೆಲಸ ಮಾಡಿರುವ ತೃಪ್ತಿ ಇದೆ.
ಈ ಬಾರಿಯ ಫಲಿತಾಂಶದ ಬಗ್ಗೆ ನಿಮ್ಮ ನಿರೀಕ್ಷೆ?
ಕ್ಷೇತ್ರದ ಒಳಗಿನ ಅಭ್ಯರ್ಥಿ, ಓಡಾಟ, ಒಡನಾಟ ಇರುವ, ಜಾತಿಮತ ಭೇದವಿಲ್ಲದ ಅಭ್ಯರ್ಥಿ ನಿಲ್ಲುವಂತಾದರೆ ಹಿಂದುತ್ವದ ಆಧಾರದಲ್ಲಿ, ಅಭಿವೃದ್ಧಿಯ ನೆಲೆಯಲ್ಲಿ ಶೇ. 100 ಗೆಲುವು ನಮ್ಮದೇ. ಕೇಂದ್ರದ ಬಿಜೆಪಿ ಸರಕಾರದ ಬಗ್ಗೆ ಜನರ ಒಲವು ಇದೆ. ರಾಜ್ಯ ಸರಕಾರದ ಆಡಳಿತದ ಬಗ್ಗೆ ವಿರೋಧವಿದೆ.
ಕಾಂಗ್ರೆಸ್‌ಗೆ ಮತ ಹಾಕಿದರೆ ಬಿಜೆಪಿ ಗೆಲ್ಲುತ್ತದೆ ಎಂದು ಜೆಡಿಎಸ್ ನಾಯಕ ಅಮರನಾಥ ಶೆಟ್ಟಿ ಹೇಳಿದ್ದಾರಲ್ಲ?
ಸ್ಪಷ್ಟ ಹೇಳ್ತೇನೆ. ಅಂಥ ಬೆಳವಣಿಗೆ ಖಂಡಿತ ಇಲ್ಲ. ಬಿಜೆಪಿಯದೇ ಓಟ್ ಬ್ಯಾಂಕ್ ನಿರ್ಮಾಣ ಆಗಿದೆ. ಬಿಜೆಪಿ ಸ್ವಂತ ಬಲದಲ್ಲಿ ಗೆಲ್ಲುತ್ತದೆ. ಜನ ಭ್ರಷ್ಟಾಚಾರ ನೋಡಿ ನೋಡಿ ಬೇಸತ್ತು ಹೋಗಿದ್ದಾರೆ. ನೆಮ್ಮದಿಯ, ಅಭಿವೃದ್ಧಿ ಪರವಾದ ಸರಕಾರ ಬೇಕಾದರೆ ಬಿಜೆಪಿ ಬೇಕು ಎಂದು
ಎಲ್ಲರೂ ಬಯಸಿದ್ದಾರೆ.
ಧನಂಜಯ ಮೂಡಬಿದಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸವದತ್ತಿ:ರೈಲು ಮಾರ್ಗ- ಸವದತ್ತಿಗೇ ಜಾಸ್ತಿ ಲಾಭ! ಆರ್ಥಿಕ ಅಭಿವೃದ್ಧಿಗೆ ನೆರವು…
Putturu: ಠಾಣೆ ಮುಂಭಾಗದಲ್ಲಿ ಜನರ ಆಕ್ರೋಶ; ಶಾಸಕ ಅಶೋಕ್ ಕುಮಾರ್ ರೈ ಭೇಟಿ
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.