ವಜ್ರಮಹೋತ್ಸವ: ಉಳ್ಳಾಲ ಬೀಚ್ ಉತ್ಸವ ಸಂಭ್ರಮ
Team Udayavani, Feb 12, 2018, 1:25 PM IST
ಉಳ್ಳಾಲ: ಮೊಗವೀರ ಹಿರಿಯ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿ ಸಂಘ, ಬ್ರದರ್ಸ್ ನ್ಪೋರ್ಟ್ಸ್ ಕ್ಲಬ್ ಮತ್ತು ಬ್ರದರ್ಸ್ ಯುವಕ ಮಂಡಲದ ವಜ್ರ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಕಾರ್ಯಕ್ರಮದ ಒಂದು ಅಂಗವಾಗಿ ಉಳ್ಳಾಲದಲ್ಲಿ ಬೀಚ್ ಉತ್ಸವ ರವಿವಾರ ಸಂಭ್ರಮದಿಂದ ನಡೆಯಿತು.
ಬೀಚ್ ಉತ್ಸವದ ಅಂಗವಾಗಿ ಬೆಳಗ್ಗಿನಿಂದಲೇ ಸ್ಪರ್ಧಾ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಸಮುದ್ರದಲ್ಲಿ ಈಜು ಸ್ಪರ್ಧೆ, ಬಲೆ ಬೀಸುವ ಸ್ಪರ್ಧೆ, ತ್ರೋಬಾಲ್, ದೋಣಿ ಸ್ಪರ್ಧೆಯಲ್ಲಿ ಸ್ಪರ್ಧಾಳುಗಳು ತೊಡಗಿಸಿಕೊಂಡರೆ, ಸ್ಪೀಡ್ ಬೋಟ್ ಜನರನ್ನು ರಂಜಿಸಿತು.
ಮರಳು ಶಿಲ್ಪದಲ್ಲಿ ಅಬ್ಬಕ್ಕ
ಬೀಚ್ ಉತ್ಸವದ ಅಂಗವಾಗಿ ಕಲಾವಿದರಾದ ಹರೀಶ್ ಆಚಾರ್ಯ, ಪ್ರಸಾದ್ ಮೂಲ್ಯ, ಅಯ್ಯಪ್ಪ ಮತ್ತು ಪ್ರೇಮ್ ಕುಲಾಲ್ ಮರಳಿನಲ್ಲಿ ಅಬ್ಬಕ್ಕನ ಶಿಲ್ಪವನ್ನು ರಚಿಸಿ ಮನಸೆಳೆದರು.
ದಣಿ ಸ್ಪರ್ಧೆಗೆ ಮೊಗವೀರ ಸಮಾಜದ ಹಿರಿಯ ಮುಖಂಡ ವಿಠಲ ಪುತ್ರನ್ ಚಾಲನೆ ನೀಡಿದರು. ಬಲೆ ಬೀಸಿ ಮೀನು
ಹಿಡಿಯುವ ಸ್ಪರ್ಧೆಗೆ ಮೊಗವೀರ ಹಿ.ಪ್ರಾ. ಶಾಲಾ ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ರಾಮದಾಸ ಅಮೀನ್ ಚಾಲನೆ ನೀಡಿದರು.
ತ್ರೋಬಾಲ್ ಪಂದ್ಯಾಟಕ್ಕೆ ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಉಳ್ಳಾಲ್ ಚಾಲನೆ ನೀಡಿದರು. ಪಣಂಬೂರು ಬೀಚ್ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಯತೀಶ್ ಬೈಕಂಪಾಡಿ ಸಹಿತ ವಜ್ರಮಹೋತ್ಸವದ ಹಾಗೂ ಮೊಗವೀರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kinnigoli: ದ್ವಿಚಕ್ರ ವಾಹನಗಳ ಢಿಕ್ಕಿ; ಸವಾರ ಮೃತ್ಯು
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.