ಕ್ರೀಡಾ ಸಚಿವರಿಂದ ಸ್ಪಂದನೆ: ಕ್ರೀಡಾಂಗಣಕ್ಕೆ 14.5 ಕೋ.ರೂ. ಪ್ರಸ್ತಾವ


Team Udayavani, Mar 28, 2017, 11:41 AM IST

28-SUDINA-13.jpg

ಪುತ್ತೂರು: ತಾಲೂಕು ಮೈದಾನವನ್ನು ಅಂತಾರಾಷ್ಟ್ರೀಯ ದರ್ಜೆಯ ಕ್ರೀಡಾಂಗಣವನ್ನಾಗಿ ಪರಿವರ್ತಿಸಲು 14.5 ಕೋಟಿ ರೂ.ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಗೆ ಕ್ರೀಡಾ ಇಲಾಖೆಯಿಂದ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದ್ದು, ಬಹುನಿರೀಕ್ಷಿತ ಯೋಜನೆ ಅನುಷ್ಠಾನದ ಕನಸು ಗರಿಗೆದರಿದೆ.

ತಾಲೂಕು ಕ್ರೀಡಾಂಗಣ
ನಗರದ ಕೊಂಬೆಟ್ಟುವಿನಲ್ಲಿ ತಾಲೂಕು ಕ್ರೀಡಾಂಗಣವಿದೆ. 1991-92 ರ ಬಳಿಕ ಕೊಂಬೆಟ್ಟು ಡಿಸ್ಟ್ರಿಕ್ಟ್ ಶಾಲಾ ಅಧೀನದಲ್ಲಿದ್ದ ಈ ಮೈದಾನವನ್ನು ತಾಲೂಕು ಕ್ರೀಡಾಂಗಣವಾಗಿ ಯುವಜನ ಸೇವಾ ಇಲಾಖೆಯ ವ್ಯಾಪ್ತಿಗೆ ಸೇರಿಸಲಾಗಿತ್ತು. 400 ಮೀಟರ್‌ ಮಣ್ಣಿನ ಟ್ರ್ಯಾಕ್‌ ಹೊಂದಿರುವ ಇದರಲ್ಲಿ ಜಿಲ್ಲಾ, ರಾಜ್ಯಮಟ್ಟದ ಅನೇಕ ಕ್ರೀಡಾಕೂಟಗಳು ನಡೆದಿದೆ.

ಕ್ರೀಡಾಂಗಣ ಅಭಿವೃದ್ಧಿ
ಪುತ್ತೂರಿನ ಶಾಸಕರಾಗಿದ್ದ ವಿನಯ ಕುಮಾರ್‌ ಸೊರಕೆ, ಡಿ.ವಿ.ಸದಾನಂದ ಗೌಡ, ಮಲ್ಲಿಕಾ ಪ್ರಸಾದ್‌, ಶಕುಂತಳಾ ಟಿ.ಶೆಟ್ಟಿ ಮತ್ತಿತರರ ಅವಧಿಯಲ್ಲಿ ಕ್ರೀಡಾಂಗಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ನಡೆದಿದೆ. ಮಣ್ಣಿನ ಟ್ರ್ಯಾಕ್‌ ಮತ್ತು ಒಂದು ಬದಿಯ ಪೆವಿಲಿಯನ್‌ ನಿರ್ಮಾಣ, ಜಿಮ್‌ ಕೊಠಡಿ ಮೊದಲಾ ದವು ಗಳಿವೆ. ಈ ಹಿಂದೆ ಎರಡನೆ ಹಂತದ ಅಭಿವೃದ್ಧಿಗಾಗಿ 1.5 ಕೋ.ರೂ. ವೆಚ್ಚದ ಪ್ರಸ್ತಾವನೆಯನ್ನು ಕಳುಹಿಸಿದ್ದು, ಈಗ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ 14.5 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ.

ಪ್ರಸ್ತಾವನೆಯಲ್ಲಿ ಏನೇನಿದೆ?
6.5 ಕೋಟಿ ರೂ. ವೆಚ್ಚದಲ್ಲಿ 400 ಮೀ. ಸಿಂಥೆಟಿಕ್‌ ಟ್ರ್ಯಾಕ್‌, 8 ಕೋಟಿ ರೂ.ನಲ್ಲಿ ಒಳಾಂಗಣ- ಹೊರಾಂಗಣ ಕ್ರೀಡಾಂಗಣ, ಪೆವಿಲಿಯನ್‌, 60ಗಿ20 ಅಡಿ ಉದ್ದ-ಅಗಲದ 3 ಅಂತಸ್ತಿನ ಒಳಾಂಗಣ ಕ್ರೀಡಾಂಗಣವೂ ನಿರ್ಮಾಣಗೊಳ್ಳಲಿದೆ. ಈಗಾಗಲೇ ಎರಡು ಕಡೆ ಪೆವಿಲಿಯನ್‌ ಇದ್ದು, ಇನ್ನೊಂದು ಬದಿಯಲ್ಲಿ ಹೊಸ ಪೆವಿಲಿಯನ್‌ ನಿರ್ಮಾಣವಾಗಲಿದೆ. 

The stadiumThe stadium
ಅಂತಾರಾಷ್ಟ್ರೀಯ ಕ್ರೀಡಾಂಗಣ ರೂಪಿ ಸಲು ಹೊಸದಾಗಿ ರಚಿಸಲಾದ ಪುತ್ತೂರು ನ್ಪೋರ್ಟ್ಸ್ ಕ್ಲಬ್‌, ವಿವಿಧ ದೈಹಿಕ ಶಿಕ್ಷಣ ಶಿಕ್ಷಕರ ಉಪಸ್ಥಿತಿಯಲ್ಲಿ ಸಭೆ ನಡೆದಿದೆ. ಅನಂತರ ದಿಲ್ಲಿಯ ಶಿವನರೇಶ್‌  ನ್ಪೋರ್ಟ್ಸ್  ಕಂಪೆನಿಯ ತಾಂತ್ರಿಕ ಅಧಿಕಾರಿಗಳು ನೀಲ ನಕಾಶೆ ತಯಾರಿಸಿದ್ದಾರೆ. ವಾರದ ಹಿಂದೆ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಯುವಜನ ಕ್ರೀಡಾಧಿಕಾರಿ ಮೊದಲಾದವರು ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಅವರನ್ನು ಭೇಟಿ ಮಾಡಿ ಪ್ರಸ್ತಾವನೆ ಕುರಿತು ಚರ್ಚಿಸಿದ್ದಾರೆ. ಸಚಿವರಿಂದಲೂ ಸಕಾರಾತ್ಮಕ ಸ್ಪಂದನೆ ದೊರೆತಿದೆ.

ಕ್ರೀಡಾಂಗಣ ಕನಸು
ಪುತ್ತೂರಿನ ಮಾಜಿ ಮತ್ತು ಹಾಲಿ ಶಾಸಕರ ಅವಧಿಯಲ್ಲಿ ತಾ| ಕ್ರೀಡಾಂಗಣದ ಅಭಿವೃದ್ಧಿಗೆ ಅನೇಕ ಪ್ರಯತ್ನ ಆಗಿತ್ತು. ಇತ್ತೀ ಚೆಗೆ ಪುತ್ತೂರಿನಲ್ಲಿ ನಡೆದ ಸಭೆಯಲ್ಲಿ ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಶಾಸಕಿ ಕೋರಿಕೆ ಮೇರೆಗೆ ಪುತ್ತೂರಿಗೆ ಜಿಲ್ಲಾ ಕ್ರೀಡಾಂಗಣಕ್ಕೆ ಹೆಚ್ಚು ಅನುದಾನ ನೀಡುವು ದಾಗಿ ಹೇಳಿದ್ದರು. ಅನಂತರ ಸಮಿತಿ ರಚಿಸಿ, ಕ್ರೀಡಾಂಗಣ ರೂಪಿಸುವ ಹಲವು ಪ್ರಯತ್ನ ನಡೆದಿತ್ತು. ಈಗ ಕ್ರೀಡಾ ಸಚಿವರ ಭರವಸೆ ಹಿನ್ನೆಲೆಯಲ್ಲಿ ಕನಸು ಗರಿಗೆದರಿದೆ.

ಸಿಂಥೆಟಿಕ್‌ ಟ್ರ್ಯಾಕ್‌
ಮಂಗಳೂರು, ಮೂಡಬಿದಿರೆಯಲ್ಲಿ ಈಗಾಗಲೇ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಾಣವಾಗಿದೆ. ಜಿಲ್ಲಾ ಕೇಂದ್ರವಾಗಿ ರೂಪು ಗೊಳ್ಳಲು ಅರ್ಹತೆ ಹೊಂದಿರುವ ಪುತ್ತೂ ರಿಗೂ ಒಳಾಂಗಣ ಕ್ರೀಡಾಂಗಣ ಅಭಿವೃದ್ಧಿ ಮತ್ತು ಕ್ರೀಡಾಪಟುಗಳ ಹಿತದೃಷ್ಟಿಯಿಂದ ಸಿಂಥೆಟಿಕ್‌ ಟ್ರ್ಯಾಕ್‌ ಅಗತ್ಯವಾಗಿತ್ತು. 400 ಮೀ. ಮಣ್ಣಿನ ಟ್ರ್ಯಾಕ್‌ನಲ್ಲಿ ಓಡಿದ ಸ್ಪರ್ಧಿಗೆ ಸಿಂಥೆಟಿಕ್‌ ಟ್ರ್ಯಾಕ್‌ನಲ್ಲಿ ಓಡುವುದು ಅಷ್ಟು ಸುಲಭವಲ್ಲ. ಎತ್ತರ ಜಿಗಿತ ಸ್ಪರ್ಧೆಯಲ್ಲಿ ಹೊಯಿಗೆ ಮೇಲೆ ಹಾರಿದ ಸ್ಪರ್ಧಿಗೆ ಜಂಪ್ಸ್‌ಬೆಡ್‌ನ‌ಲ್ಲಿ ಹಾರುವುದು ಸಲೀಸಲ್ಲ. 

ಸಾಲು-ಸಾಲು ಸಾಧಕರು..!
ಪುತ್ತೂರಿನಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಬೇಟೆಯಾಡಿದ ಸಾವಿ ರಾರು ಸ್ಪರ್ಧಿಗಳು ಇದ್ದಾರೆ. ಈಗಿನ ಸಾಧ ಕರ ಪಟ್ಟಿ ಗಮನಿಸಿದರೆ, ಸರ್ಫಿಂಗ್‌ನಲ್ಲಿ ಅಂತಾರಾಷ್ಟ್ರೀಯ ಪದಕ ಪಡೆದ ಸಿಂಚನಾ, ಅನೀಶಾ ನಾಯಕ್‌, ಈಜು ಸ್ಪರ್ಧಿ ವೈಷ್ಣವ್‌ ಹೆಗ್ಡೆ, ಈಟಿ ಎಸೆತದಲ್ಲಿ ಕನ್ನಿಕಾ ಅಡಪ, ರೆಬೆಕಾ, ಪ್ರೋ ಕಬಡ್ಡಿ ಆಟಗಾರ ಪ್ರಶಾಂತ್‌ ರೈ, ತ್ರೋಬಾಲ್‌ನಲ್ಲಿ ಪೂರ್ಣಿಮಾ ಹೀಗೆ ಸಾಲು-ಸಾಲು ಸಾಧಕರು ಇಲ್ಲಿದ್ದಾರೆ.

ಐಪಿಎಲ್‌ ಕ್ರಿಕೆಟ್‌ ಮೈದಾನ
ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಪಂದ್ಯಾಟ ಆಯೋಜಿಸುವಂತ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು ತಾಲೂಕಿನ ಬೆಟ್ಟಂಪಾಡಿ ಬಳಿ ಸರಕಾರಿ ಜಾಗದ ಪರಿಶೀಲನೆ ನಡೆದಿದೆ. ಐಪಿಎಲ್‌, ರಣಜಿಯಂತಹ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ  ನಿರ್ಮಿಸಲು ಶಾಸಕರಾದಿ ಯಾಗಿ, ರಾಜ್ಯ ಕ್ರಿಕೆಟ್‌ ಬೋರ್ಡ್‌ ಅಧಿಕಾರಿಗಳು ಉತ್ಸುಕತೆ ಹೊಂದಿದ್ದು, ಸ್ಥಳ ಅಂತಿಮಗೊಳ್ಳಬೇಕಿದೆ.

ಸಕಾರಾತ್ಮಕ ಸ್ಪಂದನೆ
ಪುತ್ತೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ 14.5 ಕೋ.ರೂ.ವೆಚ್ಚದಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶಾಸಕರ ಉಪಸ್ಥಿತಿಯಲ್ಲಿ ಕ್ರೀಡಾ ಸಚಿವರಿಗೂ ಪ್ರಸ್ತಾವನೆ ಪ್ರತಿ ಸಲ್ಲಿಸಿದ್ದು, ಸಕಾರಾತ್ಮಕ ಸ್ಪಂದನೆ ದೊರೆತಿದೆ.
– ಮಾಮಚ್ಚನ್‌ ಎಂ., ಸಹಾಯಕ ಯುವಸಬಲೀಕರಣ ಮತ್ತು ಕ್ರೀಡಾಧಿಕಾರಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ

– ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-sid-male

Udupi; ಸಿದ್ದಾಪುರ ಪರಿಸರದಲ್ಲಿ ಮಳೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.