ದೈಹಿಕ, ಮಾನಸಿಕ ಸದೃಢತೆಗೆ ಕ್ರೀಡೆ ಪೂರಕ
Team Udayavani, Dec 15, 2017, 10:05 AM IST
ಕದ್ರಿ: ದೈಹಿಕ ಕ್ಷಮತೆ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆ ಪೂರಕ ಎಂದು ಬೆಳ್ತಂಗಡಿ ತಾಲೂಕು ಪಂಚಾಯತ್ ಸದಸ್ಯ ಶಶಿಧರ ಎಂ.ಕಲ್ಮಂಜ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘದ ವತಿಯಿಂದ ಜಿಲ್ಲಾ ಮಟ್ಟದ ವಾರ್ಷಿಕ ಕ್ರೀಡಾಕೂಟವನ್ನು ಇತ್ತೀಚೆಗೆ ಕದ್ರಿಹಿಲ್ಸ್‌ನಲ್ಲಿರುವ ಕೆಪಿಟಿ ಮೈದಾನಿನಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಸಮುದಾಯದ ಸಂಘಟನೆಯಲ್ಲೂ ಕ್ರೀಡೆ ಮಹತ್ತರ ಪಾತ್ರ ವಹಿಸುತ್ತದೆ. ಕ್ರೀಡೆಯಲ್ಲಿ ಗೆಲುವಿನ ಛಲ ಇರಬೇಕು. ಆದರೆ ಸೋತಾಗ ಹತಾಶರಾಗದೆ ಇದನ್ನೇ ಗೆಲುವಿಗೆ ಸೋಪಾನವಾಗಿಟ್ಟುಕೊಂಡು ಗುರಿ ಸಾಧಿಸಬೇಕು ಎಂದರು.
ಸಂಘದ ಸಲಹೆಗಾರ ಮೋನಪ್ಪ ಬಿಜೈ, ವಸಂತ ಕಾಯರ್‌ಮಾರ್, ಸುಮಂತ್ ಅತ್ತಾವರ, ಉಪಾಧ್ಯಕ್ಷ ಜಿನೇಂದ್ರ ಮಾಣಿ, ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಬೇಕಲ್, ಶಶಿಧರ್ ಕೊಂಡಾಣ, ಮೋಹನ ಕುಮಾರ್ ಅಳಪೆ, ರಾಜ ಎಂ. ಸಾಲ್ಯಾನ್, ಸುದರ್ಶನ್ ಸಾಲ್ಯಾನ್, ರಜಕ ಯೂತ್ಸ್ ಅಧ್ಯಕ್ಷ ಸಂಪತ್ ಕೊಂಡಾಣ, ಪ್ರದೀಪ್ ಸಾಲ್ಯಾನ್, ಕಸ್ತೂರಿ ಭಾಸ್ಕರ್ ಸಾಲ್ಯಾನ್, ಪ್ರೇಮಾ ಆಶೋಕ್ ಪೊಳಲಿ, ಆಶಾ ಜಿನೇಂದ್ರ, ತನುಜಾ ಪ್ರಕಾಶ್, ರಮಾ ಭಾಸ್ಕರ್ ಬೇಕಲ್, ಶ್ವೇತಾ ರವಿ ಕಕ್ಕೆಬೆಟ್ಟು , ಲತಾ ಪ್ರಕಾಶ್ ಸಾಲ್ಯಾನ್, ಅರುಣ್ ಕುಮಾರ್ ಕದ್ರಿ , ಅರುಣ್ ಸಾಲ್ಯಾನ್ ಸೊರಕೆ, ಸುಜಾತಾ ಪ್ರದೀಪ್ ಸಾಲ್ಯಾನ್, ರವೀಂದ್ರ ಎಂ.ಸಾಲ್ಯಾನ್ ಪಚ್ಚನಾಡಿ, ರಾಮ ಮಂಕುಡೆ , ಆನಂದ್ ಕೆ. ತೊಕ್ಕೊಟ್ಟು, ಬಿ.ಎಂ.ಸಾಲ್ಯಾನ್ ಮತ್ತಿತರರಿದ್ದರು. ಕ್ರೀಡಾ ಕಾರ್ಯದರ್ಶಿ ಆಶೋಕ್ ಪೊಳಲಿ ಸ್ವಾಗತಿಸಿ, ಭಾಸ್ಕರ್ ಬೇಕಲ್ ವಂದಿಸಿದರು.
ಸಹಕಾರ ಅಗತ್ಯ
ವರ್ಷಂಪ್ರತಿ ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಿ ನಡೆಯುತ್ತಾ ಬಂದಿದ್ದು ಇದಕ್ಕೆ ಸಹಕಾರ ನೀಡುತ್ತಿರುವ ಸಮುದಾಯದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಸಮಾಜ ಬಾಂಧವರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು.
– ಬಿ.ಎನ್. ಪ್ರಕಾಶ್, ಅಧ್ಯಕ್ಷರು,
ಜಿಲ್ಲಾ ಮಡಿವಾಳರ ಸಂಘ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ
ಮೂರು ದಿನವಾದರೂ ದಾಖಲಾಗದ ಎಫ್‌ಐಆರ್ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!
ಡಾ| ವೀರಪ್ಪ ಮೊಯ್ಲಿ ಕೃತಿ “ವಿಶ್ವ ಸಂಸ್ಕೃತಿಯ ಮಹಾಯಾನ’ ಭಾಗ-2 ನಾಳೆ ಬಿಡುಗಡೆ
Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಿಗೆ ನೈಸರ್ಗಿಕ ಅನಿಲ
Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.