Shibaruru ಶ್ರೀ ಕೊಡಮಣಿತ್ತಾಯ ಕ್ಷೇತ್ರ: ಡಿ. 16 – 23: ವಾರ್ಷಿಕ ಉತ್ಸವ, ಬೋಟಿಂಗ್
Team Udayavani, Dec 12, 2023, 11:47 PM IST
ಮಂಗಳೂರು: ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದ ವರ್ಷಾವಧಿ ಉತ್ಸವ ಡಿ. 16ರಿಂದ 23ರ ವರೆಗೆ ನಡೆಯಲಿದ್ದು, ಡಿ. 17ರಂದು “ತಿಬರಾಯನ’ ಜರಗಲಿದೆ.
ಡಿ. 16ರಂದು ಸಂಜೆ ನವಕ ಪ್ರಧಾನ ಕಲಶಾಭಿಷೇಕ, ಮಹಾಪೂಜೆ, ರಾತ್ರಿ 9ಕ್ಕೆ ಧ್ವಜಾರೋಹಣ, ಡಿ. 17ರ ಬೆಳಗ್ಗೆ 7.30ರಿಂದ 9ರ ವರೆಗೆ ತುಲಾಭಾರ, 10ಕ್ಕೆ ಶ್ರೀ ಉಳ್ಳಾಯ ದೈವದ ನೇಮ, ಉರುಳು ಸೇವೆ, ಕಂಚೀಲು ಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ 11ಕ್ಕೆ ಕೊಡಮಣಿತ್ತಾಯ ದೈವದ ನೇಮ ಹಾಗೂ ರಥೋತ್ಸವ ನಡೆಯಲಿದೆ.
ಡಿ. 18ರಂದು ರಾತ್ರಿ ಶ್ರೀಕಾಂತೇರಿ ಧೂಮಾವತಿ ದೈವದ ನೇಮ, ಡಿ. 19ರಂದು ರಾತ್ರಿ ಶ್ರೀಸರಳ ಧೂಮಾವತಿ ದೈವದ ನೇಮ, ಡಿ. 20ರಂದು ಶ್ರೀ ಜಾರಂದಾಯ ದೈವದ ನೇಮ, ಡಿ. 21ರಂದು ರಾತ್ರಿ ಶ್ರೀ ಕೈಯ್ಯೂರು ಧೂಮಾವತಿ ದೈವದ ನೇಮ, ಡಿ. 22ರಂದು ರಾತ್ರಿ ಶ್ರೀ ಪಿಲಿಚಾಮುಂಡಿ ದೈವದ ನೇಮ ನಡೆಯಲಿದೆ. ಡಿ. 23ರಂದು ಬೆಳಗ್ಗೆ 9 ಕ್ಕೆ ತುಲಾಭಾರ ಸೇವೆಯ ಬಳಿಕ ಧ್ವಜಾವರೋಹಣ ನಡೆಯಲಿದೆ.
ಉತ್ಸವದ 8 ದಿವಸ ಹಾಗೂ ಸಂಕ್ರಮಣದಂದು ಮಧ್ಯಾಹ್ನ 2ರಿಂದ 4ರ ತನಕ ಅನ್ನಸಂತರ್ಪಣೆ ನಡೆಯುತ್ತದೆ ಎಂದು ಪ್ರಕಟನೆ ತಿಳಿಸಿದೆ.
ಬೋಟಿಂಗ್ ಆಕರ್ಷಣೆ
ತಿಬರಾಯನ ಪ್ರಯುಕ್ತ ಡಿ. 16ರಿಂದ 23ರ ವರೆಗೆ ಸಮೀಪದಲ್ಲೇ ಹರಿಯುವ ನಂದಿನಿ ನದಿಯಲ್ಲಿ ಬೋಟಿಂಗ್ ಇರಲಿದೆ. ಪೆಡಲಿಂಗ್, ಸ್ಪೀಡ್ ಬೋಟ್, ಜೆಟ್ ಸ್ಕಿ, ಫ್ಯಾಮಿಲಿ ರೈಡ್, ಕಯಾಕಿಂಗ್ ಸೇರಿದಂತೆ ಜಲಕ್ರೀಡೆಗೆ ಒತ್ತು ನೀಡಲಾಗಿದೆ. ಪ್ರವೇಶ ಶುಲ್ಕ ಸ್ಥಳದಲ್ಲೇ ಪಾವತಿಸುವ ವ್ಯವಸ್ಥೆ ಮಾಡಲಾಗಿದೆ.
ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ಸಾಗುತ್ತಿದ್ದು, ಮುಂದಿನ ಎ. 26ರಂದು ಶ್ರೀ ಉಳ್ಳಾಯ, ಶ್ರೀ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳಿಗೆ ಬ್ರಹ್ಮಕುಂಭಾಭಿಷೇಕ ಮತ್ತು ಶ್ರೀ ನಾಗದೇವರಿಗೆ ನಾಗಮಂಡಲ ಸೇವೆ ಜರಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thirthahalli: ನದಿಗೆ ಹಾರಿ ಕಾಲೇಜು ವಿದ್ಯಾರ್ಥಿ ಮೃತ್ಯು
Aranthodu: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ಪ್ರಯಾಣಿಕರಿಗೆ ಗಾಯ
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್ ರಂಗಮಂದಿರ ನಿರುಪಯುಕ್ತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.