ತುಳುನಾಡ ಸಂಸ್ಕೃತಿ, ಸೊಬಗು ಹೊಂದಿರುವ ಶ್ರೀ ಮಂಗಳಾದೇವಿ ದೇವಸ್ಥಾನ
Team Udayavani, Sep 22, 2017, 2:45 PM IST
ಮಹಾನಗರ : ಕರಾವಳಿಯ ಪವಿತ್ರ ಕ್ಷೇತ್ರಗಳಲ್ಲೊಂದಾದ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನವು ಪುರಾತನ ಇತಿಹಾಸ ಮತ್ತು ತುಳುನಾಡಿನ ಸಂಸ್ಕೃತಿ ಸೊಬಗನ್ನು ಹೊಂದಿರುವ ಕ್ಷೇತ್ರ. ಇಲ್ಲಿಯೂ ನವರಾತ್ರಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.
ಹಿನ್ನೆಲೆ
ಅಳುಪ ವಂಶದ ಅರಸರಲ್ಲಿ ಅತ್ಯಂತ ಪ್ರಸಿದ್ಧಿಯಾದ ಕುಂದವರ್ಮನು ಮಂಗಳಾಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ತುಳುನಾಡನ್ನು ಆಳುತ್ತಿದ್ದನು. ಅದೇ ಸಮಯ ಉತ್ತರ ನೇಪಾಳ ದೇಶದಿಂದ ಮಚ್ಚೇಂದ್ರನಾಥ ಗೋರಕನಾಥರೆಂಬ ಯೋಗಿದ್ವಯರು ತಮ್ಮ ಶಿಷ್ಯ ಗಣದೊಂದಿಗೆ ನೇತ್ರಾವತಿ ನದಿಯನ್ನು ದಾಟಿ, ಮಂಗಳಾಪುರಕ್ಕೆ ಬಂದರು. ಅವರನ್ನು ಕುಂದವರ್ಮ ಭೇಟಿಯಾಗಿ ಆದರಿಸಿದ. ಈ ನೆಲ ದಲ್ಲಿ ಮಂಗಳಾಂಬೆಯ ಪೂಜೆ ಶುಭ ದಾಯಕ ಎನ್ನುವ ಯೋಗಿಗಳ ಮಾತಿನಂತೆ ಶಿಲ್ಪಿಗಳನ್ನು ಕರೆಯಿಸಿ ಶ್ರೀ ಮಂಗಳಾದೇವಿಗೆ ಮಂದಿರವನ್ನು ನಿರ್ಮಿಸಿ ಲಿಂಗರೂಪದ ಬಿಂಬವನ್ನು ಪುನರ್ ಪ್ರತಿಷ್ಠಾಪಿಸಿದ. ಈ ಕಾರ್ಯಕ್ರಮ ದಲ್ಲಿ ಮಚ್ಚೇಂದ್ರನಾಥರ ಶಿಷ್ಯರಾದ ಗೋರಕನಾಥರು ಉಪಸ್ಥಿತರಿದ್ದು ಮಾತ್ರವಲ್ಲದೆ ಶ್ರೀ ಮಂಗಳಾದೇವಿಗೆ ಪಟ್ಟೆ ವಸ್ತ್ರವನ್ನು ಅರ್ಪಿಸಿ ಪೂಜಿಸಿದರು. ಅದರ ಕುರುಹಾಗಿ ಇಂದಿಗೂ ಕದ್ರಿ ಮಠದ ಯೋಗಿರಾಜರು ಕದ್ರಿ ಉತ್ಸವದ ಮೊದಲ ದಿನ ಶ್ರೀ ಮಂಗಳಾದೇವಿ ದೇವ ಸ್ಥಾನಕ್ಕೆ ಬಂದು ಶ್ರೀ ದೇವಿಗೆ ಪೀತಾಂಬರ ಅರ್ಪಿಸಿ ಪುಜೆ ಒಪ್ಪಿಸುವ ಕ್ರಮವಿದೆ.
ವೈಶಿಷ್ಟ್ಯ
ಕಂಕಣ ಬಲ ಕೂಡಿ ಬರದ ಕನ್ಯೆ ಶ್ರೀದೇವಿಯ ಸನ್ನಿಧಿಯಲ್ಲಿ ಸ್ವಯಂವರ ಪಾರ್ವತಿ ವ್ರತವನ್ನಾಚರಿಸಿದರೆ ಆಕೆಗೆ ಯೋಗ್ಯ ವರನು ಲಭಿಸಿ, ಸಂಸಾರ ಸುಖಕರವಾಗುವುದು. ಈ ಸ್ವಯಂವರ ಪೂಜೆಯು ರಾತ್ರಿ ಮಹಾಪೂಜೆಯಂದು ದಿನ ನಡೆಯುವುದು. ಕ್ಷೇತ್ರದಲ್ಲಿ ವಿವಾಹವಾದರೆ ಅವರ ಜೀವನ ಸುಖ ಮಯವಾಗುವುದೆನ್ನುವ ಪ್ರತೀತಿಯೂ ಇದೆ.
ದೇವಸ್ಥಾನದ ಮತ್ತೂಂದು ವಿಶೇಷತೆ ಎಂದರೆ ಬಿಂಬರೂಪದ ಲಿಂಗ. ಇದರ ಲ್ಲಿನ ಆಕೃತಿಯು ಸ್ತ್ರೀ ರೂಪವನ್ನು ಹೋಲುತ್ತಿದ್ದು, ಶಿವಶಕ್ತಿ ರೂಪದ ಲಿಂಗವೆಂದು ಆರಾಧಿಸಲ್ಪಡುತ್ತದೆ. ಲಿಂಗದ ಮೇಲ್ಭಾಗದಲ್ಲಿ ಧಾರಾಪಾತ್ರೆ ಇದೆ. ಶಿವನ ಲಿಂಗದ ಮೇಲೆ ಧಾರಾ ಪಾತ್ರೆ ಇಡುವುದು ಕ್ರಮವಾದರೆ, ಇಲ್ಲಿ ದೇವಿಯ ಬಿಂಬದ ಮೇಲೆ ಇರುವುದು ವಿಶೇಷ. ಗರ್ಭಗುಡಿಯು ಪೂರ್ವಕ್ಕೆ ಮುಖ ಮಾಡಿದ್ದು, ಬಲಕ್ಕೆ ವಿಘ್ನೇಶ್ವರನ ಗುಡಿಯಿದೆ. ರಕ್ತೇಶ್ವರಿ, ನಂದಿಕೋಣ, ಗುಳಿಗ ಈ ಕ್ಷೇತ್ರದ ಮೂರು ಆರಾಧ್ಯ ದೈವಗಳಾಗಿವೆ. ವರ್ಷಂಪ್ರತಿ ಈ ದೈವಗಳಿಗೆ ನೇಮೋತ್ಸವ ನಡೆಯುತ್ತದೆ.
ದಾರಿ
ಶ್ರೀ ಮಂಗಳಾದೇವಿ ದೇವಸ್ಥಾನವು ನಗರದ ಹೃದಯ ಭಾಗದಲ್ಲಿದ್ದು, ವಿವಿಧೆಡೆಗಳಿಂದಲೂ ದೇವಸ್ಥಾನಕ್ಕೆ ತಲುಪಲು ಉತ್ತಮವಾದ ಖಾಸಗಿ ನಗರ ಸಾರಿಗೆಯ ಬಸ್ ಸೌಲಭ್ಯವಿದೆ. ದೇವಸ್ಥಾನವು ನಗರದಿಂದ ಸುಮಾರು 1 ಕಿ.ಮೀ. ದೂರದಲ್ಲಿದೆ.
ಅ.1ರವರೆಗೆ ನವರಾತ್ರಿ ಉತ್ಸವ ದೇವಸ್ಥಾನದಲ್ಲಿ ಸೆ.21 ರಿಂದ ಅ.1 ರವರೆಗೆ ನವರಾತ್ರಿ ಮಹೋತ್ಸವ ನಡೆಯಲಿದೆ. ಸೆ.25ರಂದು ಲಲಿತಾ ಪಂಚಮಿ, ಸೆ.27ರಂದು ಮೂಲಾ ನಕ್ಷತ್ರ ರಾತ್ರಿ ಉತ್ಸವಾರಂಭ, ಸೆ.29ರಂದು ಮಹಾನವಮಿ, ಚಂಡಿಕಾ ಹೋಮ, ರಾತ್ರಿದೊಡ್ಡರಂಗ ಪೂಜೆ, ಸಣ್ಣರಥೋತ್ಸವ. ಸೆ.30ರಂದು ವಿಜಯದಶಮಿ, ವಿದ್ಯಾರಂಭ, ತುಲಾಭಾರ ಮಧ್ಯಾಹ್ನ ರಥಾರೋಹಣ, ರಾತ್ರಿ 7.30ಕ್ಕೆ ರಥೋತ್ಸವ ಅ.1ರಂದು ಅವಭೃತ ಮಂಗಳ ಸ್ನಾನ, ಅ.2 ರಂದು ಸಾರ್ವಜನಿಕ ಸತ್ಯನಾರಾಯಣ ಪೂಜೆ ಹಾಗೂ ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿರುವುದು ಎಂದು ದೇಗುಲದ ಆಡಳಿತ ಮೊಕ್ತೇಸರ ಪಿ.ರಮಾನಾಥ ಹೆಗ್ಡೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
MUST WATCH
ಹೊಸ ಸೇರ್ಪಡೆ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.