ಸಂಯೋಜನೆ ಗೊಂದಲದಲ್ಲಿ ನಲುಗಿದ ಮತ್ಸ್ಯ ಸಿರಿ; ಬಜೆಟ್‌ನಲ್ಲಿ ಘೋಷಣೆ ಬಳಿಕ ನನೆಗುದಿಗೆ;
ಮತ್ಸ್ಯಸಂಪದಕ್ಕೆ ಜೋಡಣೆ ಅನುಮೋದನೆಗೆ ಬಾಕಿ
Team Udayavani, Aug 24, 2022, 7:05 AM IST
ಮಂಗಳೂರು: ಕರಾವಳಿಯ ಆಳ ಸಮುದ್ರ ಮೀನುಗಾರರಿಗೆ ನೆರವಾಗಲು ರಾಜ್ಯ ಸರಕಾರ ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಿದ್ದಮತ್ಸ್ಯ ಸಿರಿ ಯೋಜನೆಯು ಮತ್ಸ್ಯಸಂಪದ ಯೋಜನೆಯ ಜತೆಗೆ ಸಂಯೋಜನೆಯಲ್ಲಿ
ಉಂಟಾಗಿರುವ ಗೊಂದಲ ದಿಂದಾಗಿ ಅನಿಶ್ಚಿತತೆಯ ಸುಳಿಯಲ್ಲಿ ಸಿಲುಕಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆ ಗಳಲ್ಲಿ ಆಳಸಮುದ್ರ ಮೀನುಗಾರಿಕೆ ದೋಣಿ ನಿರ್ಮಾಣಕ್ಕೆ ಕೇಂದ್ರ ಸರಕಾರದ ಮತ್ಸ್ಯ ಸಂಪದ ಯೋಜನೆಯ ಸಂಯೋಜನೆಯೊಂದಿಗೆ ನೆರವು ನೀಡುವ ಮತ್ಸ್ಯಸಿರಿ ಯೋಜನೆಯನ್ನು ಘೋಷಿಸಲಾಗಿತ್ತು. ಕೇಂದ್ರದ ನೆರವಿನ ಜತೆಗೆ ರಾಜ್ಯ ಸರಕಾರ ತಲಾ 15 ಲಕ್ಷ ರೂ. ಸೇರಿಸಿ 100 ದೋಣಿಗಳ ನಿರ್ಮಾಣಕ್ಕೆ ಸಹಾಯಧನ ನೀಡುವ ಯೋಜನೆ ಇದು. ಆದರೆ ಎರಡೂ ಯೋಜನೆ ಗಳನ್ನು ಸಂಯೋಜಿಸುವ ಪ್ರಸ್ತಾವ ರಾಜ್ಯ ಹಣಕಾಸು ಇಲಾಖೆಯಲ್ಲಿ ಅನು ಮೋದನೆಗೆ ಬಾಕಿಯಾಗಿದೆ.
ಮತ್ಸ್ಯ ಸಂಪದ ಯೋಜನೆಯಲ್ಲಿ ಆಳ ಸಮುದ್ರ ಮೀನುಗಾರಿಕೆ ಬೋಟುಗಳ ನಿರ್ಮಾಣಕ್ಕೆ ಘಟಕ ವೆಚ್ಚ 1.20 ಕೊ.àರೂ. ನಿಗದಿಪಡಿಸಿದ್ದು, ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಶೇ. 60 ಅಂದರೆ 72 ಲಕ್ಷ ರೂ. ಹಾಗೂ ಸಾಮಾನ್ಯ ವರ್ಗಕ್ಕೆ ಶೇ. 40 ಅಂದರೆ ಸುಮಾರು 48 ಲಕ್ಷ ರೂ. ಸಹಾಯಧನ ಇರುತ್ತದೆ. ಘಟಕ ವೆಚ್ಚವನ್ನು 1.5 ಕೋ.ರೂ.ಗೇರಿಸಿ ರಾಜ್ಯದ ಮತ್ಸ್ಯಸಿರಿ ಯೋಜನೆಯ 15 ಲಕ್ಷ ರೂ. ಸೇರಿಸಿ ನೀಡಲು ಉದ್ದೇಶಿಸಲಾಗಿತ್ತು.
ಲಾಂಗ್‌ಲೈನರ್,
ಗಿಲ್‌ನೆಟ್‌ಗಳಿಗೆ ಅನ್ವಯ
ಮತ್ಸ್ಯಸಂಪದ ಯೋಜನೆ ಗಿಲ್‌ನೆಟ್ ಮತ್ತು ಲಾಂಗ್‌ಲೈನರ್ ದೋಣಿಗಳಿಗೆ ಮಾತ್ರ ಅನ್ವಯವಾಗುತ್ತದೆ. ಟ್ರಾಲ್ ಮತ್ತು ಪರ್ಸಿನ್ ದೋಣಿಗಳಿಗೆ ಈ ಯೋಜನೆಯಿಂದ ಪ್ರಯೋ ಜನವಾಗುವುದಿಲ್ಲ. ಯೋಜನೆಯಡಿ ನೆರವು ಪಡೆಯಲಿಚ್ಛಿಸುವ ಟ್ರಾಲ್, ಪರ್ಸಿನ್ ಬೋಟು ಗಳನ್ನು ಹೊಂದಿರುವವರು ತಮ್ಮ ಮೊದಲಿನ ದೋಣಿಯನ್ನು ಗುಜರಿಗೆ ಹಾಕಿ ಅದರ ನೋಂದಣಿಯನ್ನು ರದ್ದುಪಡಿ ಸಬೇಕು. ಲಾಂಗ್‌ಲೈನರ್, ಗಿಲ್‌ನೆಟ್ ಬೋಟ್‌ಗಳಲ್ಲಿ ಆಳಸಮುದ್ರದಲ್ಲಿ ಗಾಳದ ಮೀನುಗಾರಿಕೆಗೆ ಮಾತ್ರ ಅವಕಾಶ. ಆಳಸಮುದ್ರದಲ್ಲಿ ಕೇದರ್‌ನಂತಹ ದೊಡ್ಡಗಾತ್ರದ ಮೀನುಗಳನ್ನು ಗುರಿಯಾಗಿಸಿಕೊಂಡು ಈ ಬೋಟುಗಳು ಮೀನುಗಾರಿಕೆ ನಡೆಸುತ್ತವೆ. ಫಿಶ್ ಸರ್ವೇ ಆಫ್ ಇಂಡಿಯಾ ಪ್ರಕಾರ ಆಳಸಮುದ್ರದಲ್ಲಿ ಈ ಮೀನುಗಾರಿಕೆಗೆ ವಿಪುಲ ಅವಕಾಶವಿದೆ. ತಮಿಳುನಾಡಿನವರು ಇದರಲ್ಲಿ ಪರಿಣತರು.
ಎಲ್ಲ ಮೀನುಗಾರರಿಗೂ ಅನುಕೂಲವಾಗಲಿ
ಯೋಜನೆಯಲ್ಲಿ ಪ್ರಸ್ತುತ ತಲೆದೋರಿರುವ ಅಡಚಣೆಗಳನ್ನು ನಿವಾರಿಸಿ, ಎಲ್ಲ ಮೀನು ಗಾರರಿಗೂ ಇದರ ಲಾಭ ಸಿಗುವಂತೆ ಪರಿ ಷ್ಕರಿಸಿ ಆದಷ್ಟು ಶೀಘ್ರ ಅನುಷ್ಠಾನಕ್ಕೆ ಬರ ಬೇಕು ಎಂಬುದು ನಮ್ಮ ಒತ್ತಾಯ ಎನ್ನುತ್ತಾರೆ ಮಂಗಳೂರು ಟ್ರಾಲ್‌ಬೋಟ್ ಮೀನು ಗಾರರ ಮುಖಂಡ ನಿತಿನ್ ಕುಮಾರ್. ಮತ್ಸ್ಯಸಿರಿ ಯೋಜನೆ ಘೋಷಣೆ ಬಿಟ್ಟರೆ ಉಳಿದಂತೆ ಯಾವುದೇ ಮಾಹಿತಿ ಇಲ್ಲ. ಆದರೆ ಅನು ಷ್ಠಾನದ ವೇಳೆ ಎಲ್ಲ ಮೀನುಗಾರರಿಗೆ ಇದರ ಪ್ರಯೋಜನ ಸಿಗಬೇಕು ಎನ್ನುತ್ತಾರೆ ಮೀನು ಗಾರರ ಮುಖಂಡ ಮೋಹನ್ ಬೆಂಗ್ರೆ
ಮತ್ಸ್ಯಸಂಪದ ಯೋಜನೆ
2020-21ರಲ್ಲಿ ಜಾರಿ
2024-25ರಲ್ಲಿ ಮುಕ್ತಾಯ
2021-22: ದಕ್ಷಿಣ ಕನ್ನಡದಲ್ಲಿ
2 ದೋಣಿಗಳಿಗೆ ನೆರವು
ದೋಣಿಗಳ ವಿನ್ಯಾಸ
ಮೀನುಗಾರಿಕೆ ಸಚಿವಾಲಯದ ವಿನ್ಯಾಸ ದಂತೆ ಬೋಟ್ ಸಿದ್ಧಪಡಿಸಬೇಕು. ಕೊಚ್ಚಿನ್‌ನ ಸಿಐಎಫ್‌ಟಿ ಇದರ ವಿನ್ಯಾಸ ಅಂತಿಮಗೊಳಿಸಿದೆ. ಇದ ರಂತೆ ದೋಣಿ ಗಳು 22.7 ಮೀ. ಉದ್ದ ಇರ ಬೇಕು, ಸ್ಟೀಲ್ ಬೋಟ್‌ಗಳಾಗಿದ್ದು, ಕ್ಯಾಬಿನ್ ಫೈಬರ್‌ನಿಂದ ನಿರ್ಮಿಸಬೇಕು. ಎದುರು ಭಾಗ ಅಗಲವಿರಬೇಕು. ಇವು ಗಳನ್ನು ಸರಕಾರ ಆಯ್ಕೆ ಮಾಡಿರುವ ಬೋಟು ನಿರ್ಮಾಣ ಯಾರ್ಡ್‌ಗಳಲ್ಲೇ ನಿರ್ಮಿಸಬೇಕು.
ಕೇಂದ್ರದ “ಮತ್ಸ್ಯಸಂಪದ’ದಡಿ ಹೊಸ ಬೋಟ್ ನಿರ್ಮಾಣಕ್ಕೆ ನೆರವು ನೀಡ ಲಾಗುತ್ತಿದೆ. ರಾಜ್ಯ ಸರ ಕಾರದಿಂದಲೂ ಮತ್ಸ್ಯಸಿರಿ ಯೋಜನೆ ರೂಪಿಸ ಲಾಗಿದ್ದು , ಕೇಂದ್ರದ ಯೋಜನೆ ಯೊಂದಿಗೆ ಜೋಡಿಸಿಕೊಂಡಿದೆ. ಅನುಷ್ಠಾನ ಪ್ರಕ್ರಿಯೆಗಳು ಚಾಲನೆಯಲ್ಲಿವೆ.
– ಎಸ್. ಅಂಗಾರ,
ಮೀನುಗಾರಿಕೆ ಮತ್ತು ಬಂದರು ಸಚಿವರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.