ಶ್ರೀ ರಾಮನವಮಿ ಸಂಭ್ರಮ, ದೀಕ್ಷಾ ದಿವಸ್ ಆಚರಣೆ
Team Udayavani, Apr 16, 2019, 6:19 AM IST
ಮೂಡುಬಿದಿರೆ: ಕೋಟ್ಯಂತರ ವರ್ಷಗಳ ಬಳಿಕವೂ ಕೂಡ ಭಾರತೀ ಯರಲ್ಲಿ ರಾಮ ಸೀತೆ ಇವರ ವಂಶವಾಹಿ ನಿಯ ಪ್ರಭಾವ ಕಾಣುತ್ತಿದೆ. ಶ್ರೀರಾಮನ ಜೀವನ ಆದರ್ಶಗಳನ್ನು ಮುನ್ನಡೆ ಸಿ ಕೊಂಡು ಹೋಗಬೇಕಾಗಿದೆ ಎಂದು ಯೋಗಗುರು ಡಾ| ರವಿ ಕುಮಾರ್ ಹೇಳಿದರು.
ಅವರು ಮೂಡುಬಿದಿರೆಯ ಬ್ರಹ್ಮಶ್ರೀ ಗುರು ನಾರಾಯಣ ಸೇವಾ ಸಂಘದ ಕಾಮ ಧೇನು ಸಭಾಂಗಣದಲ್ಲಿ ರವಿವಾರ ಮೂಡು ಬಿದಿರೆ ತಾಲೂಕು ಪತಂಜಲಿ ಯೋಗ ಸಮಿತಿ, ಭಾರತ್ ಸ್ವಾಭಿ ಮಾನ್ ಟ್ರಸ್ಟ್ ವತಿಯಿಂದ ಜರಗಿದ ಶ್ರೀರಾಮ ನವಮಿ ಸಂಭ್ರಮ,ಯೋಗ ಗುರು ಬಾಬಾ ರಾಮದೇವ್‌ಜೀಯವರ ದೀಕ್ಷಾ ದಿವಸ್ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಯೋಗ ವಿಸ್ತಾರಕ ರಾಘವೇಂದ್ರ ಗುರೂಜಿ ಅವರು, ಸಂಸ್ಕಾರ, ಸಂಸ್ಕೃತಿಯ ಮಹತ್ವದ ಜತೆಗೆ ಇತ್ತೀಚೆಗೆ ಅಗಲಿದ ಯೋಗ ಬಂಧು ಆನಂದ ಕೋಟ್ಯಾನ್ ಅವರ ಕೊಡುಗೆ, ಸಾಧನೆಗಳನ್ನು ಸ್ಮರಿಸಿಕೊಂಡರು.
ಕೊಡ್ಯಡ್ಕ ಪುತ್ತಿಗೆ ಶ್ರೀಧರ್ಮಶಾಸ್ತಾ ಭಜನ ಮಂಡಳಿಯವರಿಂದ ಕುಣಿತ ಭಜನೆ, ಸಂಕೀರ್ತನ ಸೇವೆ ಜರಗಿತು.ಸ್ಥಾಪಕ ಪ್ರಮುಖ ರಾದ ಯತಿರಾಜ ಶೆಟ್ಟಿ , ಪ್ರೊ| ರವೀಶ್ ಕುಮಾರ್, ಪ್ರಕಾಶ್ ಅಮೀನ್, ಅನಿಲ್ ಕೋಟ್ಯಾನ್, ವಸಂತ ಸುವರ್ಣ, ಜಯಶ್ರೀ ಸುಧಾಕರ್, ಪ್ರಭಾವತಿ ಮತ್ತಿತರರು ಹಾಜರಿದ್ದರು. ಪ್ರಸಾದ್ ನಾಯಕ್ ಶ್ರೀ ರಾಮ ನಾಮ ಪಠನ, ಸಂಕೀ ರ್ತನೆ ನಡೆಸಿದರು.ಸಾಮೂಹಿಕ ಸೂರ್ಯ ನಮಸ್ಕಾರ, ಯೋಗ ತರಗತಿ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.