ಸೋಮೇಶ್ವರ: ಸಹಸ್ರಾರು ಭಕ್ತ ರಿಂದ ಶ್ರಾವಣ ತೀರ್ಥಸ್ನಾನ


Team Udayavani, Aug 31, 2019, 5:50 AM IST

3008ULE6

ಉಳ್ಳಾಲ: ಶ್ರಾವಣ ಅಮಾವಾಸ್ಯೆ ಪ್ರಯುಕ್ತ ಸೋಮೇಶ್ವರದ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಸುಮಾರು ಶುಕ್ರವಾರ ಸಾವಿರಾರು ಭಕ್ತರು ಭಾಗವಹಿಸಿ ಶ್ರಾವಣ ತೀರ್ಥಸ್ನಾನವನ್ನು ನೆರವೇರಿಸಿದರು.

ಜಡಿಮಳೆಯಲ್ಲೇ ಶ್ರೀ ಕ್ಷೇತ್ರಕ್ಕೆ ಭಕ್ತರು ಬೆಳಗ್ಗೆ ನಾಲ್ಕು ಗಂಟೆಯಿಂದ ಆರಂಭಗೊಂಡು ಮಧ್ಯಾಹ್ನನದ ತನಕ ಆಗಮಿಸಿ ಕೆಲವರು ಮೊದಲು ಗದಾತೀರ್ಥದಲ್ಲಿ ಸ್ನಾನ ಮಾಡಿ ಅನಂತರ ಸಮುದ್ರ ಸ್ನಾನ ಮಾಡಿದರು. ಶ್ರಾವಣ ಅಮಾವಾಸ್ಯೆಯ ದಿನ ಸ್ನಾನ ಮಾಡುವಾಗ ನೀರಿನಲ್ಲಿ ಔಷಧೀಯ ಗುಣ ಇರುತ್ತದೆ ಎಂಬ ನಂಬಿಕೆಯಿಂದ ಭಕ್ತರು ಸಮುದ್ರದ ಉಪ್ಪುನೀರಿನ ತೀರ್ಥಸ್ನಾನಗೈದು ಪಾಪ ವಿಮೋಚನೆ ಮತ್ತು ಚರ್ಮರೋಗ, ಸಿಡುಬು, ಅಬುìದ, ಅಸ್ತಮಾ ಮೊದಲಾದ ರೋಗ ಬಾಧೆಗಳ ನಿವಾರಣೆಗೆ ಶ್ರೀ ಸೋಮನಾಥ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.

ವಿವಿಧಡೆಯಿಂದ ಭಕ್ತರ ಆಗಮನ
ತೀರ್ಥಸ್ನಾಕ್ಕೆ ದಕ್ಷಿಣಕನ್ನಡದ ವಿವಿಧ ಭಾಗ, ಕಾಸರಗೋಡು ಹಾಗೂ ಉಡುಪಿಯಿಂದಲೂ ಭಕ್ತರು ಆಗಮಿಸಿ ಸಮುದ್ರಸ್ನಾನ ಆರಂಭಿಸುವುದಕ್ಕೆ ಮುಂಚಿತವಾಗಿ ನಂಬಿಕೆ ಸಂಪ್ರದಾಯದ ಪ್ರಕಾರ ವೀಳ್ಯದೆಲೆ ಮತ್ತು ಅಡಕೆಯನ್ನು ಸಮುದ್ರಕ್ಕೆ ಸಮರ್ಪಿಸಿ ನಂತರ ತೀರ್ಥಸ್ನಾನಗೈದರು.

ಶ್ರಾವಣ ಅಮಾವಾಸ್ಯೆಯ ದಿನ ಸೋಮೇಶ್ವರ ದೇವಸ್ಥಾನದಲ್ಲಿ ತಿಲಹೋಮಕ್ಕೆ ಹೆಚ್ಚಿನ ಪ್ರಾಧ್ಯಾನ್ಯತೆ ಇಲ್ಲ. ಈ ದಿನ ಸುಮಾರು ಐದರಿಂದ ಹತ್ತರಷ್ಟು ತಿಲಹೋಮ ಪಿಂಡಪ್ರದಾನ ನಡೆದರೆ ಮಹಾಲಯ ಅಮಾವಾಸ್ಯೆ ಹಾಗೂ ಆಟಿ ಅಮಾವಾಸ್ಯೆಯಂದು ಸಾಧಾರಣ ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ತಿಲಹೋಮ ಪಿಂಡಪ್ರದಾನ ನಡೆಯುತ್ತದೆ. ತೀರ್ಥಸ್ನಾನಕ್ಕೆ ಕೃಷಿಕರು ಆಗಮಿಸುವುದರಿಂದ ಪ್ರತೀ ವರ್ಷದಂತೆ ಈ ಬಾರಿಯೂ ಕತ್ತಿ ಮಾರಾಟಗಾರರು ಆಗಮಿಸಿ ಮಳಿಗೆಗಳನ್ನು ಹಾಕಿದ್ದು ಈ ಬಾರಿ ಭಕ್ತರ ಸಂಖ್ಯೆ ಇಳಿಮುಖವಾಗಿರುವುದರಿಂದ ಕತ್ತಿ ಮಾರಾಟಗಾರರಿಗೆ ವ್ಯವಹಾರ ಕಡಿಮೆಯಾಗಿದೆ ಎಂದು ವ್ಯಾಪಾರಸ್ಥರೊಬ್ಬರು ತಿಳಿಸಿದರು.

ಸೂಕ್ತ ಭದ್ರತೆ
ಪ್ರತೀ ವರ್ಷದಂತೆ ಈ ಬಾರಿಯೂ ತೀರ್ಥಸ್ನಾನಕ್ಕೆ ವ್ಯವಸ್ಥೆಯನ್ನು ದೇವಸ್ಥಾನದ ವತಿಯಿಂದ ನಡೆಸಿದ್ದು, ರಕ್ಷಣೆ ವ್ಯವಸ್ಥೆ ಮತ್ತು ಪೊಲೀಸ್‌ ಇಲಾಖೆಯ ಸಹಕಾರದಿಂದ ಯಾವುದೇ ಅಡೆ ತಡೆಯಿಲ್ಲದೆ ಈ ಬಾರಿ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಸೋಮೇ ಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ ಅವರು ತಿಳಿಸಿದರು.

ಜೀವರಕ್ಷಕ ಈಜುಗಾರರಿಂದ
ಮುನ್ನೆಚ್ಚರಿಕೆ ಕಾರ್ಯ
20ವರ್ಷಗಳಿಂದ ಸೋಮೇಶ್ವರ ಶ್ರಾವಣ ತೀರ್ಥಸ್ನಾನಕ್ಕೆ ವಿಶೇಷವಾಗಿ ಉಳ್ಳಾಲ ಜೀವರಕ್ಷಕ ಈಜುಗಾರ ಸಂಘದ ಸದಸ್ಯರು ಭಕ್ತರಿಗೆ ರಕ್ಷಣೆ ಕಾರ್ಯವನ್ನು ನೆರವೇರಿಸುತ್ತಿದ್ದು ಈ ಬಾರಿಯೂ ರಕ್ಷಣೆ ಕಾರ್ಯದಲ್ಲಿ ಸುಮಾರು 14ಜೀವರಕ್ಷಕ ಈಜುಗಾರರು ತೊಡಗಿಸಿಕೊಂಡಿದ್ದಾರೆ.

ಟಾಪ್ ನ್ಯೂಸ್

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌

1

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

Smart water meters revolutionize water conservation

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

Viral Pics: ಡೇಟಿಂಗ್‌ ರೂಮರ್ಸ್‌ ನಡುವೆ ವಿಜಯ್‌ – ರಶ್ಮಿಕಾ ಸೀಕ್ರೆಟ್‌ ಲಂಚ್‌ ಡೇಟ್

Viral Pics: ಡೇಟಿಂಗ್‌ ರೂಮರ್ಸ್‌ ನಡುವೆ ವಿಜಯ್‌ – ರಶ್ಮಿಕಾ ಸೀಕ್ರೆಟ್‌ ಲಂಚ್‌ ಡೇಟ್

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

Dawwod-Arrest

Mangaluru: ಕುಖ್ಯಾತ ರೌಡಿಶೀಟರ್‌ ದಾವೂದ್‌ ಬಂಧಿಸಿದ ಸಿಸಿಬಿ ಪೊಲೀಸರು

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

8

Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌

Prabhutva movie review

Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ

1

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.