ನಾಳೆ ವಿವಿಧೆಡೆ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ
Team Udayavani, Aug 3, 2017, 7:25 AM IST
ಬಾಯಂಬಾಡಿ ದೇವಸ್ಥಾನ
ಪುತ್ತೂರು: ಇಲ್ಲಿನ ಬಾಯಂಬಾಡಿ ಶ್ರೀ ಷಣ್ಮುಖದೇವ ದೇವಸ್ಥಾನದಲ್ಲಿ ಆ.4ರಂದು ಶ್ರೀ ವರಮಹಾಲಕ್ಷ್ಮೀ ಪೂಜೆ ನಡೆಯಲಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾರ್ಗದರ್ಶನದಲ್ಲಿ ಕೊಳ್ತಿಗೆ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಎ ಹಾಗೂ ಬಿ ಒಕ್ಕೂಟ, ಮಹಿಳಾ ಜ್ಞಾನವಿಕಾಸ ಕೇಂದ್ರಗಳ ಆಶ್ರಯದಲ್ಲಿ ಕಾರ್ಯಕ್ರಮ ಜರಗಲಿದೆ.
ಬೆಳಗ್ಗೆ ಧಾರ್ಮಿಕ ಸಭೆ ನಡೆಯಲಿದ್ದು, ವಿವೇಕಾನಂದ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ಡಾ| ಶ್ರೀಶಕುಮಾರ್ ಎಂ.ಕೆ. ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಬೀರಮಲೆ ವಿಶ್ವಕರ್ಮ ನಗರ
ಬೀರಮಲೆ: ಇಲ್ಲಿನ ವಿಶ್ವಕರ್ಮ ನಗರ ಶ್ರೀ ಗಾಯತ್ರಿ ಮಹಿಳಾ ಮಂಡಳಿ ವತಿಯಿಂದ 5ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆ ಆ.4ರಂದು ಬೀರಮಲೆ ವಿಶ್ವಕರ್ಮ ಮಂದಿರದಲ್ಲಿ ನಡೆಯಲಿದೆ.
ಬೆಳಗ್ಗೆ 9.30ಕ್ಕೆ ಕಲಶ ಪ್ರತಿಷ್ಠೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಜರಗಲಿದೆ. ಪುರೋಹಿತ ಪ್ರಕಾಶ್ಚಂದ್ರ ಶೌÅತಿ ಆಚಾರ್ಯತ್ವದಲ್ಲಿ ಪೂಜೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಮಜಲುಮಾರು ದೇವಸ್ಥಾನ
ಮುಕ್ವೆ: ಇಲ್ಲಿನ ಶ್ರೀ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ ಆ. 4ರಂದು ನಡೆಯಲಿದೆ. ಶ್ರೀ ವರಮಹಾಲಕ್ಷ್ಮೀ ಪೂಜಾ ಆಚರಣೆ ಸಮಿತಿ, ಮಜಲುಮಾರು ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ಕಾರ್ಯಕ್ರಮ ಸಂಘಟಿಸಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನರಿಮೊಗರು ಎ ಮತ್ತು ಬಿ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದ ಸಹಕಾರದಲ್ಲಿ ಪೂಜೆ ನಡೆಯಲಿದೆ.
ಕೆಮ್ಮಾಯಿ ದೇವಸ್ಥಾನ
ಕೆಮ್ಮಾಯಿ: ಇಲ್ಲಿನ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಶ್ರೀ ವಿಷ್ಣು ಮಂಟಪದಲ್ಲಿ ಆ. 4ರಂದು ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ನಡೆಯಲಿದೆ.
ಬೆಳಗ್ಗೆ ಕಲಶ ಸ್ಥಾಪನೆ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಕುಂಜೂರುಪಂಜ ದೇಗುಲ
ಇಲ್ಲಿನ ಶ್ರೀ ಲಕ್ಷ್ಮೀ ಮಹಿಳಾ ಸಂಘಟನೆ ಕುಂಜೂರುಪಂಜ, ವರ ಮಹಾಲಕ್ಷ್ಮೀ ಪೂಜಾ ಸಮಿತಿ ಕುಂಜೂರು ಪಂಜ ದೊಡ್ಡಡ್ಕ ಇವುಗಳ ಆಶ್ರಯದಲ್ಲಿ 10ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆ ಯು ವೇ| ಮೂ| ದಿನೇಶ್ ಮರಡಿತ್ತಾಯ ಗುಮ್ಮಟೆಗದ್ದೆ ಅವರ ನೇತೃತ್ವದಲ್ಲಿ ಆ. 4ರಂದು ಕುಂಜೂರುಪಂಜ ಶ್ರೀ ದುರ್ಗಾಪರಮೇಶ್ವರೀ ದೇವಾಲಯದಲ್ಲಿ ನಡೆಯಲಿದೆ.
ಪೂಜೆ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದ್ದು, ಮಧ್ಯಾಹ್ನ 12 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದೆ. ಸಭೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಸೀತಾ ರಾಮ ಶೆಟ್ಟಿ, ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಪದ್ಮನಾಭ ಶೆಟ್ಟಿ, ದೇವಾಲಯದ ಅಧ್ಯಕ್ಷ ಮಹಾಬಲ ರೈ, ಆರ್ಯಾಪು ಗ್ರಾ.ಪಂ. ಉಪಾಧ್ಯಕ್ಷ ವಸಂತ, ವರಮಹಾಲಕ್ಷ್ಮೀ ಪೂಜಾ ಸಮಿತಿಯ ಗೌರವಾಧ್ಯಕ್ಷೆ ವಸಂತಿ ಕೆ. ಆರ್. ಅತಿಥಿ ಗಳಾಗಿ ಭಾಗವಹಿಸಲಿರುವರು ಎಂದು ಮೇಲ್ವಿಚಾರಕಿ ಕವಿತಾ ವಸಂತ್ ತಿಳಿಸಿ¨ªಾರೆ.
ಮಂಜುನಾಥನಗರ
ಸವಣೂರು: ಅರುಂಧತಿ ಮಾತೃಮಂದಿರ ಮಂಜುನಾಥನಗರ, ಪಾಲ್ತಾಡಿ ಇದರ ವತಿಯಿಂದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ವೇ| ಮೂ| ಕೇಶವ ಕಲ್ಲೂರಾಯರ ನೇತೃತ್ವದಲ್ಲಿ ಮಂಜುನಾಥನಗರ ಸಿದ್ಧಿ ವಿನಾಯಕ ಭಜನ ಮಂದಿರದಲ್ಲಿ ಆ. 4ರಂದು ನಡೆಯಲಿದೆ.
ಬೆಳಗ್ಗೆ ವಿಷ್ಣು ಪ್ರಿಯಾ ಭಜನ ಮಂಡಳಿ ಬೆಳಂದೂರು ವಲಯ ಇದರ ವತಿಯಿಂದ ಭಜನೆ ಅನಂತರ ಧಾರ್ಮಿಕ ಸಭೆ ಜರಗಲಿದ್ದು ಸವಣೂರು ಪ.ಪೂ. ಕಾಲೇಜಿನ ಪ್ರಾಚಾರ್ಯ ಬಿ.ವಿ. ಸೂರ್ಯನಾರಾಯಣ ಅವರು ಉಪನ್ಯಾಸ ನೀಡುವರು.
ಚಾರ್ವಾಕ ದೇವಸ್ಥಾನ
ಸವಣೂರು: ಸಾಮೂಹಿಕ ವರಮಹಾಲಕ್ಷ್ಮೀ ವ್ರತ ಪೂಜಾ ಸಮಿತಿ ಚಾರ್ವಾಕ, ಪ್ರಗತಿ ಬಂಧು, ಸ್ವಸಹಾಯ ಸಂಘಗಳ ಒಕ್ಕೂಟ ಚಾರ್ವಾಕ ವಿಭಾಗ ಇವುಗಳ ಸಂಯಕ್ತ ಆಶ್ರಯದಲ್ಲಿ ಸಾಮೂ ಹಿಕ ವರಮಹಾಲಕ್ಷ್ಮೀ ಪೂಜೆ ಹಾಗೂ ಧಾರ್ಮಿಕ ಸಭೆ ಆ. 4ರಂದು ಚಾರ್ವಾಕ ಕಪಿಲೇಶ್ವರ ಸಮುದಾಯ ಭವನದಲ್ಲಿ ನಡೆ ಯಲಿದೆ.
ಬೆಳಗ್ಗೆ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ಆರಂಭವಾಗಲಿದ್ದು, 10 ಗಂಟೆಗೆ ಮಹಾಪೂಜೆ, ಬಳಿಕ ಧಾರ್ಮಿಕ ಸಭೆ ನಡೆಯಲಿದ್ದು, ಚಾರ್ವಾಕ ಸಾಮೂಹಿಕ ವರಮಹಾಲಕ್ಷ್ಮೀ ವ್ರತ ಪೂಜಾ ಸಮಿತಿ ಅಧ್ಯಕ್ಷೆ ಪಾರ್ವತಿ ಅಭಿಕಾರ ಅಧ್ಯಕ್ಷತೆ ವಹಿಸುವರು. ಮುರಳೀಕೃಷ್ಣ ಭಟ್ ಸೂಂತಾರು ಧಾರ್ಮಿಕ ಉಪನ್ಯಾಸ ನೀಡುವರು. ಅತಿಥಿಗಳಾಗಿ ಚಾರ್ವಾಕ ಕಪಿಲೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ| ಧರ್ಮಪಾಲ ಗೌಡ, ಕಾಣಿಯೂರು ಗ್ರಾ.ಪಂ. ಅಧ್ಯಕ್ಷೆ ಸೀತಮ್ಮ ಖಂಡಿಗ, ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಧನಂಜಯ ಗೌಡ ಕೇನಾಜೆ, ಚಾರ್ವಾಕ ಕಪಿಲೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಲಕ್ಷ್ಮಣ ಗೌಡ ಕರಂದ್ಲಾಜೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸವಣೂರು ವಲಯ ಮೇಲ್ವಿಚಾರಕಿ ಅಶ್ವಿನಿ, ವಲಯ ಅಧ್ಯಕ್ಷ ಕುಸುಮಾಧರ ಸಾಲ್ಯಾನ್ ಪಾಲ್ಗೊಳ್ಳುವರು.
ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ
ಸವಣೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು ಇದರ ಮಾರ್ಗದರ್ಶನದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಕುದ್ಮಾರು, ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಶಾಂತಿಮೊಗರು, ಪ್ರಗತಿ ಬಂಧು, ಸ್ವಸಹಾಯ ಸಂಘಗಳ ಒಕ್ಕೂಟ ಕುದ್ಮಾರು ಇವುಗಳ ಸಹಕಾರದೊಂದಿಗೆ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಸಭಾಭವನದಲ್ಲಿ ಆ. 4ರಂದು 5ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ಪರೋಹಿತ ಶ್ರೀ ನರಸಿಂಹಪ್ರಸಾದ್ ಪಾಂಗಣ್ಣಾಯರ ನೇತೃತ್ವದಲ್ಲಿ ಜರಗಲಿದೆ. ಬೆಳಗ್ಗೆ ಗಂಟೆ 9ರಿಂದ ವರಮಹಾಲಕ್ಷ್ಮೀ ಪೂಜೆ, 11.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಗಂಟೆ 1ರಿಂದ ಅನ್ನ ಸಂತರ್ಪಣೆ ನಡೆಯಲಿದೆ ಎಂದು ವರಮಹಾಲಕ್ಷ್ಮೀ ಪೂಜಾ ಸಮಿತಿ ಪ್ರಕಟನೆ ತಿಳಿಸಿದೆ.
ಪ್ರಿಯಕಾರಿಣಿ ಸಭಾಭವನ
ಸವಣೂರು: ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜಾ ಸಮಿತಿ ಸವಣೂರು ಮತ್ತು ಪುಣcಪ್ಪಾಡಿ, ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಸವಣೂರು ಮತ್ತು ಪುಣcಪ್ಪಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆ ಹಾಗೂ ಧಾರ್ಮಿಕ ಸಭೆ ಆ. 4ರಂದು ಸವಣೂರು ಪುದುವೆಟ್ಟು ಪ್ರಿಯಕಾರಿಣಿ ಸಭಾಭವನದಲ್ಲಿ ನಡೆಯಲಿದೆ.
ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜಾ ಸಮಿತಿ ಸವಣೂರು ಮತ್ತು ಪುಣcಪ್ಪಾಡಿ ಇದರ ಅಧ್ಯಕ್ಷೆ ಶೋಭಾ ಬರೆಮೇಲು ವಹಿಸುವರು. ಪುತ್ತೂರು ವಿವೇಕಾನಂದ ಕ.ಮಾ. ಶಾಲೆಯ ಶಿಕ್ಷಕಿ ವೀಣಾ ಸರಸ್ವತಿ ನಿಡ್ವಣ್ಣಾಯ ಧಾರ್ಮಿಕ ಉಪನ್ಯಾಸ ನೀಡುವರು. ಅತಿಥಿಗಳಾಗಿ ಶ್ರೀ ಕ್ಷೇ.ಧ.ಗ್ರಾ.ಯೋ.ಯ ಕೊಡಗು ಜಿಲ್ಲಾ ಯೋಜನಾಧಿಕಾರಿ ಪುಷ್ಪಾ, ಕುದ್ಮಾರು ಮಹಿಳಾ ಮಂಡಲದ ಗೌರವಾಧ್ಯಕ್ಷೆ ಸುಗುಣಾ ಭಟ್ ಪಾಲ್ಗೊಳ್ಳುವರು.
ಮುಗೇರು ದೇವಸ್ಥಾನ
ಸವಣೂರು: ಮುಗೇರು ಮಹಾವಿಷ್ಣುಮೂರ್ತಿ ದೇವಸ್ಥಾನ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ. ಸವಣೂರು ಒಕ್ಕೂಟ, ಜನಜಾಗೃತಿ ವೇದಿಕೆ ಸವಣೂರು ವಲಯ ಇವುಗಳ ವತಿಯಿಂದ ಆ. 4ರಂದು ಸಾಮೂಹಿಕ ವರಮಹಾಲಕ್ಷ್ಮೀ ಪೂಜೆಯು ಮುಗೇರು ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಲಿದೆ.
ಇರ್ದೆ ಶ್ರೀ ವಿಷ್ಣುಮೂರ್ತಿ ದೇಗುಲ
ಇರ್ದೆ: ಶ್ರೀ ವರಮಹಾಲಕ್ಷ್ಮೀ ವ್ರತ ಪೂಜಾ ಸಮಿತಿ ಬೆಟ್ಟಂಪಾಡಿ, ಶ್ರೀ ವಿಷ್ಣುಮೂರ್ತಿ ದೇವಾಲಯ ಇರ್ದೆ ಹಾಗೂ ವಿವಿದ ಸಂಘ ಸಂಸ್ಥೆಗಳ ಸಹಕಾ ರದೊಂದಿಗೆ ಸಾಮೂಹಿಕ ಶ್ರೀವÃ ಮಹಾಲಕ್ಷ್ಮೀ ವ್ರತ ಪೂಜೆ ಆ. 4ರಂದು ಜರಗಲಿದೆ. ಬೆಳಗ್ಗೆ 8 ಗಂಟೆಗೆ ಪೂಜೆ ಆರಂಭವಾಗಲಿದ್ದು, 11.30ಕ್ಕೆ ಧಾರ್ಮಿಕ ಸಭೆ ನಡೆಯಲಿದೆ. ಅನಂತರ ಮಧ್ಯಾಹ್ನ ಪ್ರಸಾದ ವಿತರಣೆ ಅನ್ನಸಂತರ್ಪಣೆ ನೆರವೇರಲಿದೆ ಎಂದು ಸಮಿತಿಯ ಅಧ್ಯಕ್ಷೆ ವಿಜಯಲಕ್ಷ್ಮೀ ಎಸ್. ರೈ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.