ಕೊಂಚಾಡಿ ಮಹಾಲಸಾ ನಾರಾಯಣಿ, ಶ್ರೀ ವೆಂಕಟ್ರಮಣ ದೇವಸ್ಥಾನ: ಸ್ವರ್ಣ ರಥೋತ್ಸವ
Team Udayavani, Apr 11, 2019, 6:15 AM IST
ಮಹಾನಗರ: ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಅವರಿಂದ ಪ್ರತಿಷ್ಠೆಯಾದ ಶ್ರೀ ಮಹಾಲಸಾ ನಾರಾಯಣೀ ದೇವಿಯ ಅನುಗ್ರಹದಿಂದ ಮತ್ತು ಶ್ರೀ ಕಾಶೀಮಠ ಸಂಸ್ಥಾನಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಆಶೀರ್ವಾದದಿಂದ ಈ ವರ್ಷದ ಕೊಂಚಾಡಿ ಶ್ರೀ ಮಹಾಲಸಾ ನಾರಾಯಣಿ ಹಾಗೂ ಶ್ರೀ ವೆಂಕಟ್ರಮಣ ದೇವಸ್ಥಾನದ ಬ್ರಹ್ಮರಥೋತ್ಸವದ 4 ದಿನಗಳ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು.
ವಿಜಯ ರಥಾರೂಢಳಾದ ಶ್ರೀ ಮಹಾಲಸಾ ದೇವಿಯ ಮೃಗಯಾತ್ರಾ ಮಹೋತ್ಸವವು ನಡೆದ ಬಳಿಕ ಸ್ವರ್ಣ ರಥೋತ್ಸವವು ಜರಗಿತು.
ಇಂದು ಬ್ರಹ್ಮರಥೋತ್ಸವ
ಎ. 11ರಂದು ಶ್ರೀ ವೆಂಕಟ್ರಮಣ ದೇವರ ಮತ್ತು ಶ್ರೀ ಮಹಾಲಸಾ ನಾರಾಯಣಿ ದೇವಿಯ ಬ್ರಹ್ಮ ರಥೋತ್ಸವ ನಡೆಯಲಿದೆ. ಬೆಳಗ್ಗೆ ಪ್ರಾರ್ಥನೆಯಿಂದ ಮೊದಲ್ಗೊಂಡು ಪಂಚಾಮೃತಾಭಿಷೇಕ, ಶತಕ ಲಶಾಭಿಷೇಕ, ಕನಕಾಭಿಷೇಕ, ಗಂಗಾಭಿಷೇಕ, ಮಹಾಪೂಜೆ ನಂತರ ಯಜ್ಞಮಂಟಪದಲ್ಲಿ ಪೂರ್ಣಾಹುತಿ, ಆರತಿ, ಮಹಾಬಲಿ, ಬಳಿಕ ರಥಪೂಜೆ ನಡೆಸಿ, ಶ್ರೀ ದೇವರು ಬ್ರಹ್ಮರಥದಲ್ಲಿ ವಿರಾಜಮಾನರಾಗಿ ವೈವಭದಲ್ಲಿ ಬ್ರಹ್ಮರಥೋತ್ಸವವು ಸಂಪನ್ನವಾಗಲಿದೆ.
ಎ. 12ರಂದು ಧ್ವಜಪೂಜೆ, ಚೂರ್ಣೋತ್ಸವ, ವಸಂತ ಪೂಜೆ, ಅವಭೃಥೋತ್ಸವ, ಧ್ವಜ ವಿಸರ್ಜನೆ, ಅಂಕುರ ಪ್ರಸಾದ ವಿತರಣೆ, ಸಂಪ್ರೋಕ್ಷಣೆ ಮತ್ತು ಮಹಾಪೂಜೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.