“ಶ್ರೀದೇವಿ ಸಂಭ್ರಮ- 2017′
Team Udayavani, Feb 23, 2017, 12:04 PM IST
ಮಂಗಳೂರು: ಕೆಂಜಾರಿನಲ್ಲಿರುವ ಶ್ರೀದೇವಿ ಶಿಕ್ಷಣ ಸಂಸ್ಥೆಯ ಘಟಕವಾಗಿರುವ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪದವಿ ವಿದ್ಯಾರ್ಥಿಗಳಿಗಾಗಿ “ಶ್ರೀದೇವಿ ಸಂಭ್ರಮ – 2017′ ಎಂಬ ರಾಷ್ಟ್ರೀಯ ಮಟ್ಟದ
ತಾಂತ್ರಿಕ ಹಾಗೂ ಸಾಂಸ್ಕೃತಿಕ ಉತ್ಸವವನ್ನು ಉದ್ಯಮಾಡಳಿ ತೋತ್ಸವವಾದ “ಎಕ್ಲೋನ್-17′, ಮಾಹಿತಿ ತಂತ್ರಜ್ಞಾನೋತ್ಸ ವವಾದ “ಮೇಧಾ-17’ರ ಸಹಯೋಗದೊಂದಿಗಿನ ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಯಿತು.
ಈ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ. ರಿಜಿಸ್ಟ್ರಾರ್ ಡಾ| ಸತೀಶ್ ಅಣ್ಣಿಗೇರಿ ಅವರು, ವಿದ್ಯಾರ್ಥಿಗಳಿಗೆ ವ್ಯಾಸಂಗ ಜೀವನದಲ್ಲಿ ಹೊಸ ವಿಚಾರಗಳನ್ನು ಕಲಿಯಲು ಹಾಗೂ ತಮ್ಮಲ್ಲಿರುವ ಪ್ರತಿಭೆ ಪ್ರದರ್ಶಿಸಲು ಇದೊಂದು ಸುಸಂದರ್ಭವಾಗಿದೆ ಎಂದರು.
ಜನಸೇವೆ ವೃತ್ತಿಯಾಗಲಿ
ಗೌರವ ಅತಿಥಿಯಾಗಿದ್ದ ಮಂಗಳೂರುಈ ನಗರದ ಪೊಲೀಸ್ ಇಲಾಖೆಯ ದಕ್ಷಿಣ ಉಪವಿಭಾಗದ ಅಸಿಸ್ಟೆಂಟ್
ಕಮಿಷನರ್ ಆಫ್ ಪೊಲೀಸ್ ಶ್ರುತಿ ಎನ್.ಎಸ್. ಮಾತನಾಡಿ, ಇಂದಿನ ಯುವಪೀಳಿಗೆ ಜನಸೇವೆಯನ್ನು ವೃತ್ತಿಯನ್ನಾಗಿಸಿಕೊಂಡಲ್ಲಿ ದೇಶಕ್ಕೆ ಕೊಡುಗೆಯಾಗಿದ್ದು, ಸರಕಾರಿ ಸೇವೆಯನ್ನು ಪ್ರವೃತ್ತಿಯನ್ನಾಗಿಸಿಕೊಂಡು ಜೀವನದ ಭಾಗವಾಗಿರುವ ಎಲ್ಲ ರೀತಿಯ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ಎಂದರು.
ಶ್ರೀದೇವಿ ಸಂಭ್ರಮ-17 ಉತ್ಸವದಲ್ಲಿ ವಿದ್ಯಾರ್ಥಿಗಳ ತಾಂತ್ರಿಕ ಪರಿಣತಿ ಹಾಗೂ ಸಾಂಸ್ಕೃತಿಕ ಪ್ರತಿಭೆಯನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ತಾಂತ್ರಿಕ, ಸಂಬಂಧಿಸಿದ ಕೋಡಿಂಗ್, ಪೇಪರ್ ಪ್ರಸೆಂಟೇಶನ್, ಗೇಮ್ಸ್, ಕ್ವಿಜ್ ಸ್ಪರ್ಧೆ, ರೋಬೊವಾರ್, ವಾಟರ್ ರಾಕೇಟರಿ, ಸಾಲಿಡ್ ವೇಸ್ಟ್ ಮ್ಯಾನೇಜೆ¾ಂಟ್ ಸ್ಪರ್ಧಾತ್ಮಕವಾದ ಚಟುವಟಿಕೆಗಳನ್ನು ಏರ್ಪಡಿಸಲಾಗಿತ್ತು.
“ಎಕ್ಲೋನ್-17′ ಎಂಬ ಉದ್ಯಮಾಡಳಿತೋತ್ಸವದಲ್ಲಿ ವಿದ್ಯಾರ್ಥಿಗಳಲ್ಲಿ ಅಂತರ್ಗತವಾಗಿರುವ ಆಡಳಿತ ಮತ್ತು ನಿರ್ವಹಣಾ ಕೌಶಲಗಳನ್ನು ಉತ್ತೇಜಿಸುವ ಸಲುವಾಗಿ, ಅವರಲ್ಲಿನ ಹೊಸ ಯೋಜನೆಗಳನ್ನು ಬೆಳೆಸುವ ಸಲುವಾಗಿ ಐಸ್ ಬ್ರೇಕರ್,ಬೆಸ್ಟ್ ಮ್ಯಾನೇಜರ್, ಮೂರು ವಿಭಾಗಗಳ (ಸಂಪನ್ಮೂಲ, ಆರ್ಥಿಕ, ಮಾರುಕಟ್ಟೆ) ವಿವಿಧ ಹಂತಗಳ ಸ್ಪರ್ಧೆಗಳು, ಬಿಸಿನೆಸ್ ಕ್ವಿಜ್, ಸ್ಟ್ರೆಸ್ ಇಂಟರ್‌ವ್ಯೂವ್ ವಿವಿಧ ಹಂತಗಳ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಮೇಧಾ-2017 ಎಂಬ ಮಾಹಿತಿ ತಂತ್ರಜ್ಞಾನೋತ್ಸವವನ್ನು ವಿದ್ಯಾರ್ಥಿಗಳಲ್ಲಿನ ತಾಂತ್ರಿಕ ಕೌಶಲಗಳನ್ನು ಅಳವಡಿಸಿ, ನವೀನ ಮಾದರಿಯ ತಂತ್ರಜ್ಞಾನವನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಕಂಪ್ಯೂಟರ್ ಗೇಮ್ಸ್, ಐಟಿ ಕ್ವಿಜ್, ಗೂಗಲ್ ಇಟ್, ವರ್ಚುವಲ್ ಟ್ರೆಜರ್ ಹಂಟ್, ಐಟಿಡಿಬೇಟ್ – ಎಂಬ ವಿಭಾಗಗಳಲ್ಲಿನ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಾದ ಮ್ಯಾಡ್-ಆಡ್, ಅಂತಾಕ್ಷರಿ, ಫೋಟೊಗ್ರಾಫಿ ಕಂಟೆಸ್ಟ್, ಈಸ್ಟರ್ನ್ ಮತ್ತು ವೆಸ್ಟರ್ನ್ ಡಾನ್ಸ್, ಫೇಸ್ ಪೈಂಟಿಂಗ್, ಟ್ರೆಜರ್ ಹಂಟ್, ಮೈಮ್,ಸೊಲೋ ಸಿಂಗಿಂಗ್, ಟ್ಯಾಟೋ ಡಿಸೆ„ನ್, ಕಾರ್ಪೊರೇಟ್ ಫ್ಯಾಶನ್ ಶೋ ಮುಂತಾದ ಹಲವು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.
3,000 ಸ್ಪರ್ಧಿಗಳು: ಈ ವಾರ್ಷಿಕೋತ್ಸವದ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಲ್ಲಿನ ಸುಮಾರು 100 ಕಾಲೇಜುಗಳಿಂದ 3,000 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶ್ರೀದೇವಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ನಿಧೀಶ್ ಎಸ್. ಶೆಟ್ಟಿ, ಕಾರ್ಯದರ್ಶಿ ಮೈನಾ ಎಸ್. ಶೆಟ್ಟಿ, ಟ್ರಸ್ಟಿ ಪ್ರಿಯಾಂಕ ಎನ್. ಶೆಟ್ಟಿ ಉಪಸ್ಥಿತರಿದ್ದರು.
ಕಾಲೇಜಿನ ನಿರ್ದೇಶಕ ಡಾ| ಕೆ.ಇ. ಪ್ರಕಾಶ್ ಶ್ರೀದೇವಿ ಸಂಭ್ರಮ-2017ರ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಿದರು. ಕಾಲೇಜಿನ ಪ್ರಾಂಶುಪಾಲ ಡಾ| ದಿಲೀಪ್ ಕುಮಾರ್ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kinnigoli: ದ್ವಿಚಕ್ರ ವಾಹನಗಳ ಢಿಕ್ಕಿ; ಸವಾರ ಮೃತ್ಯು
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
MUST WATCH
ಹೊಸ ಸೇರ್ಪಡೆ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.