ಶ್ರೀನಿವಾಸ ವಿ.ವಿ.-ಐಟಿಸಿ ಅಕಾಡೆಮಿ ಒಪ್ಪಂದ
Team Udayavani, May 27, 2017, 12:28 PM IST
ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯ ಐಟಿಸಿ ಅಕಾಡೆಮಿ ಸಹಯೋಗ ದಿಂದ ಡಿಇಎಲ್‌ಎಲ್ ಇಎಂಸಿ ಶ್ರೇಷ್ಠತಾ ಕೇಂದ್ರವನ್ನು ಮೇ 26ರಂದು ಸ್ಥಾಪಿಸಿದೆ. ಇದೇ ಸಂದರ್ಭ ಶ್ರೀನಿವಾಸ ವಿಶ್ವ ವಿದ್ಯಾಲಯ ಐಟಿಸಿ ಅಕಾಡೆಮಿಯ ಸಾಂಸ್ಥಿಕ ಸದಸ್ಯತ್ವ ಪಡೆದುಕೊಂಡಿದೆ. ಇದರ ಫಲವಾಗಿ ಬೋಧಕರ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಅವಕಾಶ ಪಡೆಯಲಿದೆ.
ಸದಸ್ಯತ್ವ ಪ್ರಮಾಣಪತ್ರ ವಿನಿಮಯ ಕಾರ್ಯಕ್ರಮದಲ್ಲಿ ಶ್ರೀನಿವಾಸ ವಿ.ವಿ. ಕುಲಪತಿ ಹಾಗೂ ಎ. ಶಾಮರಾವ್ ಪ್ರತಿಷ್ಠಾನದ ಅಧ್ಯಕ್ಷ ಸಿಎ ಎ. ರಾಘವೇಂದ್ರ ರಾವ್ ಅವರು ಅಧ್ಯಕ್ಷತೆ ವಹಿಸಿದ್ದರು. ಶ್ರೀನಿವಾಸ ವಿ.ವಿ. ಹಾಗೂ ಎ. ಶಾಮರಾವ್ ಪ್ರತಿಷ್ಠಾನದ ಉಪಾಧ್ಯಕ್ಷ ಎ. ಶ್ರೀನಿವಾಸ ರಾವ್, ಮಂಡಳಿ ಸದಸ್ಯರಾದ ಡಾ| ಪಿ.ಎಸ್. ಐತಾಳ್, ಡಾ| ಶ್ರೀನಿವಾಸ ಮಯ್ಯ ಡಿ., ಡಾ| ಅನಿಲ್‌ಕುಮಾರ್ ಉಪಸ್ಥಿತರಿದ್ದರು. ಐಟಿಸಿ ಅಕಾಡೆಮಿಯ ಸಿಇಒ ಎಂ. ಶಿವಕುಮಾರ್ ಮೊದಲಾದವರು ಮುಖ್ಯ ಅತಿಥಿಗಳಾಗಿದ್ದರು.
ವಿದ್ಯಾರ್ಥಿಗಳಿಗೆ ಹಾಗೂ ಬೋಧಕ ವರ್ಗದವರಿಗೆ ತಾಂತ್ರಿಕ ಕೌಶಲ ನೀಡುವುದು ಈ ಸಂಯೋಜನೆಯ ಮುಖ್ಯ ಉದ್ದೇಶ. ಸಾಂಸ್ಥಿಕ ಸದಸ್ಯತ್ವ ಪ್ರಮಾಣಪತ್ರ ವಿನಿಮಯ ಕಾರ್ಯಕ್ರಮ ಕರ್ನಾಟಕದಲ್ಲಿ ಇದೇ ಮೊದಲನೆಯದ್ದಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.