ಎಸೆಸೆಲ್ಸಿ ಫಲಿತಾಂಶ : ದಕ್ಷಿಣ ಕನ್ನಡ ಜಿಲ್ಲೆಗೆ “ಎ’ ಗ್ರೇಡ್
Team Udayavani, Aug 10, 2021, 3:10 AM IST
ಮಹಾನಗರ: ಕೊರೊನಾ ಮುನ್ನೆಚ್ಚರಿಕೆಯನ್ನು ಪಾಲಿಸಿಕೊಂಡು ಜು. 19, 22ರಂದು ನಡೆದ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟವಾಗಿದೆ. ದ.ಕ. ಜಿಲ್ಲೆ “ಎ’ ಗ್ರೇಡ್ ಪಡೆದುಕೊಂಡಿದೆ.
ಮಾರ್ಚ್ ಅಂತ್ಯದಲ್ಲೇ ಮುಗಿಯಬೇಕಾದ ಪರೀಕ್ಷೆ ಲಾಕ್‌ಡೌನ್‌ನಿಂದಾಗಿ ಜುಲೈ ಮಧ್ಯ ಭಾಗಕ್ಕೆ ಮುಂದೂಡಲ್ಪಟ್ಟಿತ್ತು. ದ್ವಿತೀಯ ಪಿಯು ಪರೀಕ್ಷೆ ನಡೆಸದ ಕಾರಣದಿಂದ ಎಸೆಸೆಲ್ಸಿ ಕೂಡ ಪರೀಕ್ಷೆ ಬೇಡ ಎಂಬ ಬಗ್ಗೆ ಚರ್ಚೆ ನಡೆದಿತ್ತು. ಆದರೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಸೆಸೆಲ್ಸಿ ಪರೀಕ್ಷೆ ನಡೆಯಲೇಬೇಕು ಎಂಬ ಶಿಕ್ಷಣ ಇಲಾಖೆ ಒತ್ತಾಸೆಯಿಂದಾಗಿ ಕೇವಲ ಎರಡೇ ದಿನದಲ್ಲಿ ಕೊರೊನಾ ನಿಯಮಾವಳಿ ಪಾಲಿಸಿಕೊಂಡು ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿತ್ತು.
2018-19ರಲ್ಲಿ ದ.ಕ. ಜಿಲ್ಲೆ ಶೇ.86.85 ಫಲಿತಾಂಶದೊಂದಿಗೆ 7ನೇ ಸ್ಥಾನದಲ್ಲಿತ್ತು. ಆದರೆ ಕಳೆದ ಬಾರಿ ಕೊರೊನಾ ಕಾರಣದಿಂದ ಶೇಕಡಾವಾರು ಫಲಿತಾಂಶದ ಬದಲು ಗ್ರೇಡ್ ನೀಡಲಾಗಿತ್ತು. ಹೀಗಾಗಿ ಕಳೆದ ಬಾರಿ ಜಿಲ್ಲೆಗೆ “ಬಿ’ ಗ್ರೇಡ್ ಲಭಿಸಿದ್ದರೆ ಈ ಬಾರಿ “ಎ’ ಗ್ರೇಡ್ ದೊರಕಿದೆ.
ಮೊಬೈಲ್‌ನಲ್ಲೇ ಫಲಿತಾಂಶ:
ಎಸೆಸೆಲ್ಸಿ ಫಲಿತಾಂಶ ಸೋಮವಾರ ಸಂಜೆ ಪ್ರಕಟವಾಗುತ್ತಿದ್ದಂತೆ ಮಂಗಳೂರು ನಗರ ಸಹಿತ ಜಿಲ್ಲೆಯ ಬಹುತೇಕ ವಿದ್ಯಾರ್ಥಿಗಳು ಮನೆಯಲ್ಲಿರುವ ಲ್ಯಾಪ್‌ಟಾಪ್, ಕಂಪ್ಯೂಟರ್‌ಗಳ ಮುಖಾಂತರವೇ ಫಲಿತಾಂಶ ಪಡೆದುಕೊಂಡರು. ಇನ್ನು ಕೆಲವು ಮಂದಿ ಸ್ನೇಹಿತರು, ಸಂಬಂಧಿಕರಿಗೆ ಪರೀಕ್ಷಾ ಸಂಖ್ಯೆಯನ್ನು ನೀಡಿ ಫಲಿತಾಂಶ ಪಡೆದುಕೊಂಡರು. ಕೊರೊನಾ ಕಾರಣದಿಂದ ವಿದ್ಯಾರ್ಥಿಗಳಿಗೆ ಶಾಲೆಗಳಿಗೆ ಆಗಮಿಸಲು ಸಾಧ್ಯವಾಗದ ಕಾರಣ ಈ ಬಾರಿ ವಿದ್ಯಾರ್ಥಿಗಳ ಹೆತ್ತವರ ಮೊಬೈಲ್‌ಗೇ ಫಲಿತಾಂಶ ಕಳುಹಿಸುವ ವ್ಯವಸ್ಥೆಯನ್ನು ಇಲಾಖೆ ಮಾಡಿತ್ತು. ಹೀಗಾಗಿ ವಿದ್ಯಾರ್ಥಿಗಳಿಗೆ ಫಲಿತಾಂಶ ವೀಕ್ಷಿಸಲು ಯಾವುದೇ ತೊಡಕಾಗಲಿಲ್ಲ.
ಶುಭಾಶಯ ವಿನಿಮಯ :
ಫಲಿತಾಂಶ ಬಂದ ಬಳಿಕ ವಿದ್ಯಾರ್ಥಿಗಳು ಸ್ನೇಹಿತರೊಂದಿಗೆ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಮನೆಮಂದಿ ಸಿಹಿ ಹಂಚಿ ಸಂಭ್ರಮಿಸಿದರು. ಈ ಬಾರಿ ಹೊಸ ಬಗೆಯ ಪರೀಕ್ಷೆ ನಡೆದ ಕಾರಣದಿಂದ ವಿದ್ಯಾರ್ಥಿಗಳು ಹಾಗೂ ಹೆತ್ತವರಿಗೆ ಫಲಿತಾಂಶದ ಬಗ್ಗೆ ಬಹು ನಿರೀಕ್ಷೆ ಹಾಗೂ ಕುತೂಹಲವಿತ್ತು. ಹೆತ್ತವರು ಕೂಡ ತಮ್ಮ ಮಕ್ಕಳು ಗಳಿಸಿದ ಅಂಕಕ್ಕೆ ಅನುಗುಣವಾಗಿ ಕಾಲೇಜು ಸೇರ್ಪಡೆ, ವಿಷಯ ಆಯ್ಕೆಯ ಬಗ್ಗೆ ಲೆಕ್ಕಾಚಾರ ಹಾಕಲು ಪ್ರಾರಂಭಿಸಿದ್ದಾರೆ.
ವರ್ಷಾವಾರು ಫಲಿತಾಂಶ
ವರ್ಷ ಶೇ. ಸ್ಥಾನ
2014-15 89.35 8
2015-16 88.12 3
2016-17 82.39 2
2017-18 85.61 4
2018-19 86.85 7
2019-20 “ಬಿ’ ಗ್ರೇಡ್ -
2020- 21 “ಎ’ ಗ್ರೇಡ್ –
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Bengaluru: ಟ್ಯೂಷನ್‌ಗೆ ಬರುತ್ತಿದ್ದ ಅಪ್ರಾಪ್ತ ಬಾಲಕಿ ಜೊತೆ ಶಿಕ್ಷಕ ಪರಾರಿ
Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್ ವಿರುದ್ಧ ವರ್ಮಾ
Divorce Rumours: ಚಹಾಲ್ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?
Aranthodu: ವ್ಯಕ್ತಿಯ ಮೇಲೆ ಕಾಡಾನೆ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.