75 ವಜ್ರ ಮಹೋತ್ಸವ ಸಂಭ್ರಮ: ಮಂಗಳೂರಿನ ಸೈಂಟ್ ಜಾರ್ಜ್ ಹೋಮಿಯೋಪತಿ
Team Udayavani, Jun 29, 2020, 3:21 AM IST
ಹೋಮಿಯೋಪತಿ ಮೆಡಿಸಿನ್ ಉತ್ಪಾದನೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಮಂಗಳೂರಿನ ‘ಸೈಂಟ್ ಜಾರ್ಜ್ ಹೋಮಿಯೋಪತಿ’ ಖ್ಯಾತ ಹೋಮಿಯೋಪತಿ ವೈದ್ಯ ಡಾ| ಜೋಸೆಫ್ ಝಕಾರಿಯಾಸ್ ಅವರಿಂದ 1945ರಲ್ಲಿ ಸ್ಥಾಪನೆಗೊಂಡಿತು. ತಮ್ಮ ಸಂಶೋಧನೆ, ಬದ್ಧತೆ, ಉತ್ಕೃಷ್ಟ ಗುಣಮಟ್ಟ ಮತ್ತು ಗ್ರಾಹಕ ಸೇವಾ ಮನೋಭಾವನೆಯಿಂದಾಗಿ ಬೆಳೆಯುತ್ತಾ ಬಂದಿರುವ ಸಂಸ್ಥೆ ಈಗ ಅಮೃತ ಮಹೋತ್ಸವ ವರ್ಷಾಚರಣೆಯಲ್ಲಿದೆ. ದೇಶದ ಪ್ರಮುಖ ಜಿಎಂಪಿ ಸರ್ಟಿಫೈಡ್ ಯುನಿಟ್ ಎಂಬ ಹೆಗ್ಗಳಿಕೆ ಪಡೆದಿದೆ.
ಹೋಮಿಯೋಪತಿ ಚಿಕಿತ್ಸಾ ಪದ್ಧತಿ ಜರ್ಮನಿಯಲ್ಲಿ ಆರಂಭಗೊಂಡಿತು. ಡಾ| ಸ್ಯಾಮುವೆಲ್ ಹಹ್ನೆಮನ್ (1755 -1843) ಅವರನ್ನು ಹೋಮಿಯೋಪತಿಯ ಪಿತಾಮಹ ಎಂದು ಗುರುತಿಸಲಾಗಿದೆ. ಹೋಮಿಯೋಪತಿ ಚಿಕಿತ್ಸೆ ಇಂದು ಯುರೋಪ್ ರಾಷ್ಟ್ರಗಳು, ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಪ್ರಸಿದ್ಧಿಯಾಗಿದೆ.
ಪರಿಣಾಮಕಾರಿ ಮತ್ತು ಸುರಕ್ಷಿತ ಚಿಕಿತ್ಸಾ ವಿಧಾನವೆಂದು ಗುರುತಿಸಲ್ಪಟ್ಟಿದೆ. ಇದಕ್ಕೆ ಪೂರಕವಾಗಿ ಹೋಮಿಯೋಪತಿ ಔಷಧಿಗಳು ಕೂಡ ಆಲೋಪತಿಯಂತೆಯೇ ಅತ್ಯುತ್ತಮ ಗುಣಮಟ್ಟದಲ್ಲಿ ಉತ್ಪಾದಿಸಲ್ಪಡುತ್ತಿವೆ. ಇಂತಹ ಉತ್ಪಾದನಾ ಸಂಸ್ಥೆಗಳ ಸಾಲಿನಲ್ಲಿ ಮಂಗಳೂರಿನ ಸೈಂಟ್ ಜಾರ್ಜ್‌ಸ್ ಹೋಮಿಯೋಪತಿ ಕೂಡ ಅಗ್ರ ಸಾಲಿನಲ್ಲಿದೆ.
ಆರೋಗ್ಯ ಸೇವೆಯಲ್ಲಿ ಉದಾತ್ತ ಸೇವೆಯ ಪವಿತ್ರ ಸಂದೇಶದೊಂದಿಗೆ ಡಾ| ಜೋಸೆಫ್ ಝಕಾರಿಯಾಸ್ ಮತ್ತು ಡಾ| ಮೇರಿ ಝಕಾರಿಯಾಸ್ ದಂಪತಿಯಿಂದ 1945ರಲ್ಲಿ ಸ್ಥಾಪನೆಗೊಂಡಿರುವ ಸೈಂಟ್ ಜಾರ್ಜ್ ಹೋಮಿಯೋಪತಿ ಸಾರ್ಥಕತೆಯ ಧನ್ಯತಾ ಭಾವದೊಂದಿಗೆ ಮುನ್ನಡೆದುಕೊಂಡು ಬಂದಿರುವ ಸಂಸ್ಥೆ. ಕರಾವಳಿ ಕರ್ನಾಟಕ ವಲಯದಲ್ಲಿ ಪರ್ಯಾಯ ಔಷಧ ಪದ್ಧತಿಯ ಮೂಲಕ ರೋಗಗಳಿಂದ ಗುಣಮುಖರಾಗುವ ಅವಕಾಶವನ್ನು ಕಲ್ಪಿಸಿಕೊಟ್ಟಿರುವ ಅನನ್ಯತೆ ಅವರದ್ದಾಗಿದೆ.
ಹೋಮಿಯೋಪತಿ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಖ್ಯಾತಿಯನ್ನು ಪಡೆದಿರುವ ಡಾ| ಅಬ್ರಹಾಂ ಝಕಾರಿಯಾಸ್ ಹಾಗೂ ಡಾ| ಸೋಫಿಯಾ ಝಕಾರಿಯಾಸ್ ಅವರು ಹಿರಿಯರ ಉದಾತ್ತ ಉದ್ದೇಶ ಹಾಗೂ ವಿಶ್ವಾಸಾರ್ಹ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಡಾ| ಅಬ್ರಹಾಂ ಝಕಾರಿಯಾಸ್ ಅವರು ಉತ್ಕೃಷ್ಠ ಪರಿಣತಿಯೊಂದಿಗೆ ಹೋಮಿಯೋಪತಿ ಕ್ಷೇತ್ರದಲ್ಲಿ ಮಾಡಿರುವ ಅನನ್ಯ ಸಾಧನೆ ಹೋಮಿಯೋ ಪತಿ ವೈದ್ಯಕೀಯ ಬಳಗಕ್ಕೆ ಹೆಮ್ಮೆ ತಂದು ಕೊಟ್ಟಿದೆ ಮಾತ್ರವಲ್ಲದೆ ಪರ್ಯಾಯ ವೈದ್ಯಕೀಯ ಚಿಕಿತ್ಸಾ ಪರಿಕಲ್ಪನೆ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ನೀಡುವವರ ಧ್ವನಿಯನ್ನು ಅಡಗಿಸುವಂತೆ ಮಾಡಿದೆ.
ಡಾ| ಸೋಫಿಯಾ ಝಕಾರಿಯಾಸ್ ಅವರು ಗುಣಮಟ್ಟದ ಬಗ್ಗೆ ವಹಿಸುತ್ತಿರುವ ಕಟ್ಟುನಿಟ್ಟಿನ ನಿಗಾದೊಂದಿಗೆ ಸೈಂಟ್ ಜಾರ್ಜ್ ಅನ್ನು ಜಿಎಂಪಿ ಉತ್ಪನ್ನ ಘಟಕವಾಗಿ ಮೂಡಿಬರುವಲ್ಲಿ ಕಾರಣೀ ಭೂತರಾಗಿದ್ದಾರೆ. ತಮ್ಮ ಪೋಷಕರ ಹಾದಿಯಲ್ಲೆ ಮುನ್ನಡೆಯುತ್ತಿರುವ ನೀಲ್ ಝಕಾರಿಯಾಸ್ ಅವರು ಸೈಂಟ್ ಜಾರ್ಜ್ ಹೆಸರನ್ನು ದೇಶದ ಮೂಲೆಮೂಲೆಗಳಿಗೆ ಪಸರಿಸುವಲ್ಲಿ ವಿಶೇಷ ಶ್ರಮ ವಹಿಸುತ್ತಿದ್ದಾರೆ.
ಉತ್ಕೃಷ್ಠ ಉತ್ಪನ್ನಗಳ ಘಟಕ
ಮಂಗಳೂರಿನ ಪಡೀಲ್‌ನಲ್ಲಿ 2006ರಲ್ಲಿ ಸ್ಥಾಪನೆಯಾಗಿರುವ, ಕರ್ನಾಟಕದಲ್ಲೇ ಪ್ರಥಮ ಜಿಎಂಪಿ ಅವಶ್ಯಕತೆಗಳನ್ನು ಪೂರೈಸುವ ಹೋಮಿಯೋಪತಿ ಘಟಕ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಸೈಂಟ್ ಜಾರ್ಜ್ ಸಂಸ್ಥೆ ಹೋಮಿಯೋಪತಿ ವಿವಿಧ ಔಷಧಗಳು, ಮದರ್ ಟಿಂಚರ್, ಹೋಮಿಯೋಪತಿ ಹುಡಿ ಔಷಧಗಳು, ಬ್ಯಾಚ್ ಫ್ಲವರ್ ಪರಿಹಾರಗಳು ಹಾಗೂ ಇತರ ಸ್ಪೆಷಾಲಿಟಿಸ್‌ಗಳನ್ನು ಪರಿಶುದ್ಧತೆ ಹಾಗೂ ಉತ್ಕೃಷ್ಠ ಗುಣಮಟ್ಟದೊಂದಿಗೆ ಉತ್ಪಾದಿಸುತ್ತಿದೆ. ಸಂಸ್ಥೆ ಬೆಂಜನಪದವಿನಲ್ಲಿ ಎರಡನೆ ಜಿಎಂಪಿ ದೃಢೀಕೃತ ಘಟಕವನ್ನು ಹೊಂದಿದ್ದು ಬಯೋಕೆಮಿಕ್ ಮಾತ್ರೆಗಳು, ಮುಲಾಮುಗಳು, ಹುಡಿಗಳು ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಿದೆ.
ಹೋಮಿಯೋಪತಿ ಪರ್ಯಾಯ ವೈದ್ಯಕೀಯ ಪದ್ಧತಿಯಲ್ಲಿ ದೇಶದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ. ಇದರ ಸಮಗ್ರ ಚಿಕಿತ್ಸೆ ವೈದ್ಯಕೀಯ ಕ್ಷೇತ್ರದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿದೆ. ಸೈಂಟ್ ಜಾರ್ಜ್ ಹೋಮಿಯೋಪತಿ ಇಂದು ಕೇವಲ ಮಂಗಳೂರಿನಲ್ಲಿ ಮಾತ್ರ ಪ್ರಸಿದ್ಧಿಯನ್ನು ಪಡೆದುಕೊಂಡಿಲ್ಲ. ದೇಶ ಉದ್ದಗಲಕ್ಕೂ ಇದರ ಖ್ಯಾತಿ ಹರಡಿದೆ. ಆಯುಷ್ ಸಚಿವಾಲಯದ ಮಾನ್ಯತೆಯೊಂದಿಗೆ ಕೋವಿಡ್-19 ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಔಷಧಗಳನ್ನು ಸರಬರಾಜು ಮಾಡುವ ಸಂಸ್ಥೆಗಳಲ್ಲೊಂದಾಗಿ ಗುರುತಿಸಿಕೊಂಡಿದೆ. ಮಹಾಮಾರಿ ಕೋವಿಡ್ 19 ಸೋಂಕಿನ ವಿರುದ್ಧ ಹೋರಾಟಕ್ಕೆ ಭಾರತದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಎಲ್ಲರೂ ಕೈಜೋಡಿಸೋಣ .
ದೂರದೃಷ್ಟಿ, ಉತ್ತಮ ಆಡಳಿತ
ಸಂಸ್ಥೆಯ ಬೆಳವಣಿಗೆಗೆ ಉತ್ತಮ, ದೂರದೃಷ್ಟಿಯ ಆಡಳಿತವೂ ಪ್ರಮುಖ ಕಾರಣ. ಡಾ| ಅಬ್ರಹಾಂ ಝಕಾರಿಯಾಸ್ ಅವರ ಜತೆ ಪತ್ನಿ ಡಾ| ಸೋಫಿಯಾ ಝಕಾರಿಯಾಸ್ ಹಾಗೂ ಪುತ್ರ ನೀಲ್ ಝಕಾರಿಯಾಸ್ ಅವರು ಸಂಸ್ಥೆಯ ಅಭ್ಯುದಯದಲ್ಲಿ ಕೈ ಜೋಡಿಸಿದ್ದಾರೆ. ಹೋಮಿಯೋಪತಿಕ್ ವೈದ್ಯೆ ಡಾ| ಸೋಫಿಯಾ ಝಕಾರಿಯಾಸ್ ಸೈಂಟ್ ಜಾರ್ಜ್ ಸಂಸ್ಥೆಯ ಉತ್ಪಾದನಾ ವಿಭಾಗದ ಬೆಳವಣಿಗೆಗೆ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದಾರೆ.
ಅವರ ಆಡಳಿತ ಕೌಶಲ್ಯ, ದೂರದೃಷ್ಟಿ ಮತ್ತು ಅಗಾಧ ಜ್ಞಾನ ಸಂಸ್ಥೆಗೆ ಮತ್ತಷ್ಟು ಪ್ರಸಿದ್ಧಿ ತಂದಿದೆ. ಇಂದು ಹೋಮಿಯೋಪತಿಕ್ ಮೆಡಿಸಿನ್ ಉತ್ಪಾದನೆಯಲ್ಲಿ ದೇಶದಲ್ಲೇ ಮುಂಚೂಣಿಯ ಸ್ಥಾನವನ್ನು ಸೈಂಟ್ ಜಾರ್ಜ್ ಸಂಸ್ಥೆ ಹೊಂದಿದೆ. ಡಾ| ಸೋಫಿಯಾ ಝಕಾರಿಯಾಸ್ ಅವರು 1975ರಲ್ಲಿ ಕೇರಳ ವಿವಿಯಿಂದ ಹೋಮಿಯೋಪತಿಕ್ ಪದವಿ ಪೂರ್ಣಗೊಳಿಸಿದರು. 1979ರಲ್ಲಿ ವಿವಾಹವಾದ ಅನಂತರ ಹೋಮಿಯೋಪತಿ ಉತ್ಪಾದನಾ ಘಟಕದಲ್ಲಿ ತೊಡಗಿಸಿಕೊಂಡರು.
ಅಪಾರ ಅನುಭವದ ತಜ್ಞ ವೈದ್ಯ ಡಾ| ಅಬ್ರಹಾಂ ಝಕಾರಿಯಾಸ್
ಡಾ| ಜೋಸೆಫ್ ಝಕಾರಿಯಾಸ್ ಅವರ ಪುತ್ರ ಡಾ| ಅಬ್ರಹಾಂ ಝಕಾರಿಯಾಸ್ ಅವರು ಹೋಮಿಯೋಪತಿ ಚಿಕಿತ್ಸೆಯಲ್ಲಿ ಕರಾವಳಿ ಭಾಗದಲ್ಲಿ ಮಾತ್ರವಲ್ಲದೆ ರಾಜ್ಯದಲ್ಲಿ ಪ್ರಸಿದ್ಧರು. ಮಂಗಳೂರಿನಲ್ಲಿ ಹೋಮಿಯೋಪತಿ ಕ್ಲಿನಿಕ್ ಆರಂಭಿಸಿ ಜನರಿಗೆ ನಿರಂತರವಾಗಿ ಉತ್ತಮ ಚಿಕಿತ್ಸೆ ಒದಗಿಸಿ ಜನಪ್ರಿಯರಾಗಿರುವ ಡಾ| ಅಬ್ರಹಾಂ ಝಕಾರಿಯಾಸ್ ಅವರು ಮಂಗಳೂರಿನ ಮೊದಲ ಹೋಮಿಯೋಪತಿ ಪದವಿ ಪಡೆದ ವೈದ್ಯರು. 1975ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಹೋಮಿಯೋಪತಿಯಲ್ಲಿ ವೈದ್ಯಕೀಯ ಪದವಿಯನ್ನು ಪಡೆದರು.
ಶಿಕ್ಷಣ ಪೂರೈಸಿದ ಅನಂತರ ತಮ್ಮ ತಂದೆ ಡಾ| ಜೋಸೆಫ್ ಝಕಾರಿಯಾಸ್ ಅವರಿಂದ ಹೆಚ್ಚಿನ ಹೋಮಿಯೋಪತಿ ಚಿಕಿತ್ಸಾ ಜ್ಞಾನ ಪಡೆದುಕೊಂಡರು. 1976ರಲ್ಲಿ ಖಾಸಗಿಯಾಗಿ ಮಂಗಳೂರಿನ ಬಲ್ಮಠದಲ್ಲಿ ಹೋಮಿಯೋಪತಿ ಚಿಕಿತ್ಸೆ ಆರಂಭಿಸಿದರು. ಅನಂತರ ಔಷಧ ಉತ್ಪಾದನಾ ಸಂಸ್ಥೆ ಆರಂಭಿಸಿದರು. ಹೋಮಿಯೋಪತಿ ಮೆಡಿಸಿನ್ ಉತ್ಪಾದನೆ ಕ್ಷೇತ್ರದಲ್ಲಿ 15 ವರ್ಷಗಳ ಹಾಗೂ ಹೋಮಿಯೋಪತಿ ಚಿಕಿತ್ಸೆಯಲ್ಲಿ 45 ವರ್ಷಗಳ ಅನುಭವ ಹೊಂದಿದ್ದಾರೆ. ಇವರು ಕರ್ನಾಟಕ ಹೋಮಿಯೋಪತಿ ಬೋರ್ಡ್‌ನ ಸದಸ್ಯರೂ ಆಗಿದ್ದರು.
ಡಾ| ಅಬ್ರಹಾಂ ಝಕಾರಿಯಾಸ್ ಮತ್ತು ಡಾ| ಸೋಫಿಯಾ ಅವರ ಪುತ್ರ ನೀಲ್ ಝಕಾರಿಯಾಸ್ ಅವರು ಇಂಜಿನಿಯರಿಂಗ್ ಮತ್ತು ಎಂಬಿಎ ಪದವೀಧರರಾಗಿದ್ದು ಪಾಲುದಾರರಾಗಿ ಹಾಗೂ ಬ್ಯುಸಿನೆಸ್ ಡೆವಲಪ್‌ಮೆಂಟ್ ಮ್ಯಾನೇಜರ್ ಆಗಿ ಸಂಸ್ಥೆಗೆ ಸೇರ್ಪಡೆಯಾದರು. ಹೊಸ ತಲೆಮಾರಿನ ಸೇರ್ಪಡೆಯೊಂದಿಗೆ ಸಂಸ್ಥೆ ಮತ್ತಷ್ಟು ಬೆಳೆಯಲಾರಂಭಿಸಿತು. ಸಂಸ್ಥೆಯ ಹೆಸರನ್ನು ಸೈಂಟ್ ಜಾರ್ಜ್‌ಸ್ ಹೋಮಿಯೋಪತಿ ಎಂದು ನಾಮಕರಣ ಮಾಡಲಾಯಿತು.
ವಿಶ್ವಾಸ, ಬದ್ಧತೆಯಿಂದ ಪ್ರಗತಿ
ಸೈಂಟ್ ಜಾರ್ಜ್ ಹೋಮಿಯೋಪತಿ ಸಂಸ್ಥೆ ದೇಶದಾದ್ಯಂತ ಮಾರುಕಟ್ಟೆಯನ್ನು ಹೊಂದಿದ್ದು ಸಂಸ್ಥೆಯ ಉತ್ಪನ್ನಗಳಿಗೆ ಅಪಾರ ಬೇಡಿಕೆ ಇದೆ. ಇಲ್ಲಿ ಔಷಧಗಳ ಉತ್ಪಾದನೆಗೆ ಬಳಕೆ ಮಾಡುವ ಕಚ್ಚಾ ವಸ್ತುಗಳಿಂದ ಹಿಡಿದು ಕಟ್ಟಕಡೆಯ ಗ್ರಾಹಕರಿಗೆ ಔಷಧವನ್ನು ತಲುಪಿಸುವವರೆಗೆ ಪ್ರತೀ ಹಂತದಲ್ಲಿಯೂ ಬದ್ಧತೆಗೆ ಮಹತ್ವ ನೀಡಲಾಗುತ್ತದೆ.
ಉನ್ನತ ಮಟ್ಟದ ಗುಣಮಟ್ಟವನ್ನು ಕಾಪಾಡಿಕೊಂಡು ಬರಲಾಗುತ್ತದೆ. ಸಂಸ್ಥೆಯು ನೈತಿಕತೆ, ಸಂಪ್ರದಾಯ ಮತ್ತು ಭಾರತೀಯ ಸಂಸ್ಕೃತಿಯ ಮೌಲ್ಯಗಳ ಮೇಲೆ ನಿಂತಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಅಳವಡಿಸಿಕೊಂಡು ಬೆಳೆಯುತ್ತಿದೆ. ಮೆಡಿಸಿನ್‌ನ ಶುದ್ಧತೆ ಮತ್ತು ಗುಣಮಟ್ಟದಲ್ಲಿ ರಾಜಿ ಇರುವುದಿಲ್ಲ. ವ್ಯವಹಾರದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲಾಗುತ್ತಿದೆ.
ಇದರಿಂದಾಗಿ ಕಳೆದ 75 ವರ್ಷಗಳಿಂದ ದೇಶದಾದ್ಯಂತ ವೈದ್ಯರು ಮತ್ತು ಸಾರ್ವಜನಿಕರ ವಿಶ್ವಾಸಕ್ಕೆ ಪಾತ್ರವಾಗಿದೆ. ಅವರ ವಿಶ್ವಾಸವೇ ನಮ್ಮ ಬೆಳವಣಿಗೆಗೆ ಪ್ರಮುಖ ಕಾರಣ. ಇದೇ ವಿಶ್ವಾಸವನ್ನು ಮುಂದೆಯೂ ನಿರೀಕ್ಷಿಸುತ್ತಾ ಮಾನವೀಯತೆ ಮತ್ತು ಸಾಮಾಜಿಕ ಬದ್ಧತೆಯೊಂದಿಗೆ ನಮ್ಮ ಸೇವೆ ಮುಂದುವರಿಸುತ್ತೇವೆ. ದೇಶದ ಜನತೆಯ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನಾವೆಲ್ಲರೂ ಕೈ ಜೋಡಿಸೋಣ.
– ಡಾ| ಸೋಫಿಯಾ ಝಕಾರಿಯಾಸ್, ಸಿಇಒ ಮತ್ತು ಆಡಳಿತ ಪಾಲುದಾರರು
ಇಮ್ಯುನಿಟಿ ಬೂಸ್ಟರ್ ‘ಆರ್ಸೆನಿಕ್ ಆಲ್ಬಂ 30′
ಸೈಂಟ್ ಜಾರ್ಜ್ ಹೋಮಿಯೋಪಥಿ ಸಂಸ್ಥೆ ತಯಾರಿಸುವ ‘ಇಮ್ಯುನಿಟಿ ಬೂಸ್ಟರ್’ ಆರ್ಸೆನಿಕಂ ಆಲ್ಬಂ 30 ಹೋಮಿಯೋಪಥಿ ಔಷಧ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ ಯಾಗಿದೆ. ಕೇಂದ್ರ ಆಯುಷ್ ಇಲಾಖೆಯೂ ಸಹ ಆರ್ಸೆನಿಕ್ ಆಲ್ಬಂ 30 ಶಿಫಾರಸು ಮಾಡಿದೆ. ಗುಳಿಗೆ ಮತ್ತು ದ್ರಾವಣ ರೂಪದಲ್ಲಿ ಬರುವ ಈ ಮಾತ್ರೆಗಳನ್ನು ವೈದ್ಯರ ಸಲಹೆಯಂತೆ ಸೇವಿಸಿದರೆ, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಸಬಹುದು.
ಪ್ರಸ್ತುತ ಕೋವಿಡ್ 19 ಸೋಂಕು ಸಾಂಕ್ರಾಮಿಕ ಸಂದರ್ಭದಲ್ಲಿಯೂ ಮುನ್ನೆಚ್ಚರಿಕಾ ಕ್ರಮವಾಗಿ ಈ ಔಷಧವನ್ನು ಸೇವಿಸಲಾಗುತ್ತಿದೆ. ದೇಶದ ವಿವಿಧೆಡೆಗಳಿಗೆ ಔಷಧ ಸರಬರಾಜಾಗುತ್ತಿದೆ. ‘ಆರ್ಸೆನಿಕಂ ಆಲ್ಬಂ 30′ ಸೇವನೆ ಶ್ವಾಸಕೋಶವನ್ನು ಬಲಗೊಳಿಸುವುದರ ಜತೆಗೆ ದೇಹದಲ್ಲಿ ಆಮ್ಲಜನಕವನ್ನು ಹೆಚ್ಚಿಸಿ, ದೇಹದ ಕಶ್ಮಲಗಳನ್ನು ಹೊರ ಹಾಕುತ್ತದೆ ಎನ್ನುತ್ತಾರೆ ಸಂಸ್ಥೆಯ ಸಿಇಒ ಮತ್ತು ಆಡಳಿತ ಪಾಲುದಾರೆ ಡಾ| ಸೋಫಿಯಾ ಝಕಾರಿಯಾಸ್ ಮತ್ತು ತಜ್ಞ ವೈದ್ಯ ಡಾ| ಅಬ್ರಹಾಂ ಜೆ. ಝಕಾರಿಯಾಸ್.
ಹೆಚ್ಚಿನ ಮಾಹಿತಿಗೆ ಮಂಗಳೂರಿನ ಮಿಲಾಗ್ರಿಸ್ ಕ್ರಾಸ್ ರಸ್ತೆಯಲ್ಲಿರುವ ಸೇಂಟ್ ಜಾರ್ಜ್ ಹೋಮಿಯೋಪಥಿ ಮಳಿಗೆ ಅಥವಾ ಅಧಿಕೃತ ವಿತರಕರಾದ ಕರಂಗಲಪಾಡಿ ಕುದ್ಮುಲ್ ರಂಗರಾವ್ ರಸ್ತೆಯಲ್ಲಿರುವ ಸುಶೀಲ್ ಫಾರ್ಮಾ ಸಂಸ್ಥೆಯನ್ನು ಸಂಪರ್ಕಿಸಬಹುದು. ಜತೆಗೆ ಎಲ್ಲ ಮೆಡಿಕಲ್ ಸ್ಟೋರ್‌ಗಳಲ್ಲಿಯೂ ಇದು ಲಭ್ಯವಿದೆ.
ಸೇವಿಸುವ ವಿಧಾನ
ಆರ್ಸೆನಿಕಂ ಆಲ್ಬಂ 30 ಗುಳಿಗೆಯನ್ನು ದೊಡ್ಡವರು ದಿನದಲ್ಲಿ ಎರಡು ಬಾರಿ ಬರೀ ಹೊಟ್ಟೆಯಲ್ಲಿ ತಲಾ 6 ಮಾತ್ರೆ ಸೇವಿಸಬೇಕು. ಮಕ್ಕಳಿಗೆ 4 ಮಾತ್ರೆ. 5 ದಿನ ನಿರಂತರ ಸೇವಿಸಿ, 15 ದಿನದ ಬಳಿಕ ಪುನರಾವರ್ತಿಸಬೇಕು. ದ್ರವ ರೂಪದಲ್ಲಿರುವ ಔಷಧವನ್ನು (ಇಮ್ಯುನೈಜ್ ಡ್ರಾಪ್) 20 ಎಂಎಲ್ ನೀರಿಗೆ (2 ಚಮಚ) 2-3 ಹನಿಗಳನ್ನು ಹಾಕಿ ಖಾಲಿ ಹೊಟ್ಟೆಗೆ ದಿನಕ್ಕೆರಡು ಬಾರಿಯಂತೆ 5 ದಿನ ಸೇವಿಸ ಬೇಕು. 15 ದಿನಗಳ ಬಳಿಕ ಪುನರಾವರ್ತಿಸಬೇಕು.
ಕೋವಿಡ್ ನಿಯಂತ್ರಣಕ್ಕೆ ಸಹಕಾರ : ಸ್ಯಾನಿಟೈಸರ್ ಉತ್ಪಾದನೆಯಲ್ಲಿಯೂ ಪ್ರಥಮ
ಸೈಂಟ್ ಜಾರ್ಜ್ ಹೋಮಿಯೋಪತಿ ಸಂಸ್ಥೆಯ ಉತ್ಪನ್ನಗಳಲ್ಲಿ ಸ್ಯಾನಿಟೈಸರ್ ಕೂಡ ಪ್ರಮುಖವಾದುದು. ಕೋವಿಡ್-19 ಅನಂತರ ಹ್ಯಾಂಡ್ ಸ್ಯಾನಿಟೈಸರ್‌ಗಳು ಅತ್ಯಂತ ಅಗತ್ಯದ ಉತ್ಪನ್ನಗಳಾಗಿವೆ. ಅನೇಕ ಸಂಸ್ಥೆಗಳು ಸ್ಯಾನಿಟೈಸರ್‌ನ ಉತ್ಪಾದನೆಯನ್ನೂ ಆರಂಭಿಸಿವೆ. ಆದರೆ ಸೈಂಟ್ ಜಾರ್ಜ್ ಹೋಮಿಯೋಪತಿ ಸಂಸ್ಥೆ ಕಳೆದ 5 ವರ್ಷಗಳ ಹಿಂದೆಯೇ ಸ್ಯಾನಿಟೈಸರ್‌ನ್ನು ಕೂಡ ಉತ್ಪಾದಿಸಿ ದೇಶದ ವಿವಿಧಡೆಗೆ ಪೂರೈಕೆ ಮಾಡುತ್ತಿದೆ. ರಾಜ್ಯದಲ್ಲಿ, ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಪತ್ತೆಯಾದಾಗ ಸ್ಯಾನಿಟೈಸರ್‌ಗೆ ಏಕಾಏಕಿ ಬೇಡಿಕೆ ಅಧಿಕವಾಯಿತು. ಆಗ ಸ್ಯಾನಿಟೈಸರ್‌ನ ಬೇಡಿಕೆ ಈಡೇರಿಸಿದ್ದು ಇದೇ ಸಂಸ್ಥೆ.
ರಾಜ್ಯ ಸರಕಾರ, ಜಿಲ್ಲಾಡಳಿತದ ಸೂಚನೆ ಮೇರೆಗೆ ಅಗತ್ಯ ಸ್ಯಾನಿಟೈಸರ್‌ಗಳನ್ನು ಒದಗಿಸಿಕೊಟ್ಟು ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಕೈ ಜೋಡಿಸಿತು. ಕೋವಿಡ್ 19 ಸಂಕಷ್ಟದ ಕಾಲದಲ್ಲಿ ನೆರವಾಯಿತು. ಜಿಲ್ಲೆಯಲ್ಲಿ ಅಧಿಕ ಬೇಡಿಕೆ ಇದ್ದುದರಿಂದ ಜಿಲ್ಲಾಡಳಿತದ ಸೂಚನೆಯಂತೆ ಜಿಲ್ಲೆಯ ಹೊರಭಾಗಕ್ಕೆ ಸ್ಯಾನಿಟೈಸರ್ ಪೂರೈಕೆ ನಿಲ್ಲಿಸಿ ಜಿಲ್ಲೆಯಲ್ಲಿ ಮಾತ್ರ ಪೂರೈಕೆ ಮಾಡಿತ್ತು.
ಇದೀಗ ಮಂಗಳೂರು ಸಹಿತ ವಿವಿಧೆಡೆ ಸ್ಯಾನಿಟೈಸರ್ ಉತ್ಪಾದನೆ ನಡೆಯುತ್ತಿದ್ದರೂ ಸೈಂಟ್ ಜಾರ್ಜ್ ಹೋಮಿಯೋಪತಿ ಸಂಸ್ಥೆಯ ಹ್ಯಾಂಡ್ ಸ್ಯಾನಿಟೈಸರ್‌ಗಳಿಗೆ ಉತ್ತಮ ಬೇಡಿಕೆ ಇದೆ. ಹಲವು ವರ್ಷಗಳಿಂದ ಗುಣಮಟ್ಟಕ್ಕೆ ಆದ್ಯತೆ ನೀಡಿರುವುದರಿಂದ ಗ್ರಾಹಕರಿಂದ ಉತ್ತಮ ಸ್ಪಂದನೆ ಇದೆ.
ವೋಕಲ್ ಫಾರ್ ಲೋಕಲ್
ಸೈಂಟ್ ಜಾರ್ಜ್ ಹೋಮಿಯೋಪತಿ ಸಂಸ್ಥೆ 75 ವರ್ಷಗಳ ಹಿಂದೆ ಮಂಗಳೂರಿನಲ್ಲಿ ಸ್ಥಳೀಯ ಉದ್ಯಮವಾಗಿ ಬೆಳೆದು ಇಂದು ರಾಷ್ಟ್ರಮಟ್ಟದ ಪ್ರಮುಖ ಉದ್ಯಮವಾಗಿ ವಿಸ್ತರಣೆಯಾಗಿದೆ. ವೋಕಲ್ ಫಾರ್ ಲೋಕಲ್ ಮತ್ತು ಮೇಕ್ ಇಂಡಿಯಾ ಗ್ಲೋಬಲ್ ಧ್ಯೇಯವಾಕ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಪಡೀಲ್ ಮತ್ತು ಬಂಟ್ವಾಳದಲ್ಲಿ 25,000 ಚದರ ಅಡಿಗೂ ಅಧಿಕ ವಿಸ್ತೀರ್ಣದ ಸುಸಜ್ಜಿತ ಘಟಕಗಳನ್ನು ಹೊಂದಿದೆ.
ಸೈಂಟ್ ಜಾರ್ಜ್ ಸಂಸ್ಥೆ ಯು ರೋಗ ನಿರೋಧಕ ಶಕ್ತಿ ಹೆಚ್ಚಳ ಮಾಡುವ ‘ಇಮ್ಯುನೈಸ್ ಡ್ರಾಪ್ಸ್’ ಮೆಡಿಸಿನ್ ಉತ್ಪಾದಿಸುತ್ತಿದೆ.ಇದು ವೈರಲ್ ಸೋಂಕಿನ ವಿರುದ್ಧ ಮಾನವನ ದೇಹ ಹೋರಾಟ ಮಾಡುವ ಶಕ್ತಿಯನ್ನು ವೃದ್ಧಿಸುತ್ತದೆ.ಈ ಮೆಡಿಸಿನ್ ಔಷಧ ಇಲಾಖೆಯ ಮಾನ್ಯತೆ ಪಡೆದಿದೆ.
ನೀಲ್ ಝಕಾರಿಯಾಸ್ ಅವರು ಹೋಮಿಯೋಪತಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ 2014ರಲ್ಲಿ ಎನ್‌ಒಸಿಐಯ (ನ್ಯಾಷನಲ್ ಆರ್ಗನೈಜೇಷನ್ ಫಾರ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ) ನ್ಯಾಷನಲ್ ಸೆಮಿನಾರ್‌ನಲ್ಲಿ ರಾಷ್ಟ್ರೀಯ ಉದ್ಯೋಗ ರತ್ನ ಪ್ರಶಸ್ತಿ.
ಪ್ರಶಸ್ತಿ-ಸಾಧನೆ
ಕ್ವಾಲಿಟಿ : ಬ್ರಾಂಡ್ ಇಂಡಿಯಾ 2014-2016
ಉತ್ತಮ ಗುಣಮಟ್ಟದ ಸ್ಯಾನಿಟೈಸರ್ ಬಳಸಿ. ನಿಮ್ಮ ಕೈಗಳನ್ನು ಮತ್ತು ತ್ವಚೆಯನ್ನು ಸುರಕ್ಷಿತವಾಗಿಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.