ಒಂದೇ ಮಳೆಗೆ ಹೆದ್ದಾರಿಯಲ್ಲಿ ನಿಂತ ನೀರು; ಆಗಬೇಕಿದೆ ತುರ್ತು ಕಾಮಗಾರಿ
ವಾಹನ ಸವಾರರಿಗೆ ಕೆಸರು ನೀರಿನ ಸಿಂಚನ
Team Udayavani, May 21, 2019, 6:00 AM IST
ತಡಂಬೈಲ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತಿರುವುದು.
ವಿಶೇಷ ವರದಿ-ಸುರತ್ಕಲ್: ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದೇ ಮಳೆಗೆ ಅಲ್ಲಲ್ಲಿ ನೀರು ನಿಂತು ನೈಜ ದರ್ಶನ ಆಗಿದೆ. ನೀರು ನಿಲ್ಲದಂತೆ ತೋಡುಗಳ ಹೂಳೆತ್ತುವ ಕಾರ್ಯವನ್ನು ಈ ಬಾರಿ ಇಲಾಖೆ ಮಳೆಗಾಲಕ್ಕೆ ಮುನ್ನವೇ ಆರಂಭ ಮಾಡಿದ್ದರೂ ಕೆಲವೆಡೆ ಬಾಕಿಯುಳಿದಿದೆ.
ಸುರತ್ಕಲ್, ತಡಂಬೈಲ್ ಪ್ರದೇಶದಲ್ಲಿ ರವಿವಾರ ಸುರಿದ ಮಳೆಗೆ ನೀರು ನಿಂತು ಸಮಸ್ಯೆಯಾಯಿತು. ಕಳೆದ ಬಾರಿ ತಗ್ಗು ಪ್ರದೇಶದ ಹೆದ್ದಾರಿ ಬದಿಗಳಲ್ಲಿ ನೀರು ನಿಂತು ವಾಹನ ಸವಾರರಿಗೆ ಕೆಸರು ನೀರಿನ ಸಿಂಚನವಾಗುತ್ತಿತ್ತು. ಈ ಬಾರಿ ಇಲಾಖೆ ಇದಕ್ಕೆ ಆಸ್ಪದ ಕೊಡದೆ ಕೆಸರು ತೆಗೆಯುವ ಕಾಮಗಾರಿ ಆರಂಭಿಸ ಬೇಕಿದೆ.
ಇನ್ನು ಎಲ್ಲೆಲ್ಲಿ ಆಗಬೇಕಿದೆ?
ಮುಖ್ಯವಾಗಿ ಇಲ್ಲಿನ ಪಣಂಬೂರು, ಬೈಕಂಪಾಡಿ, ಹೊಸಬೆಟ್ಟು, ಕೂಳೂರು ಮೇಲ್ಸೇತುವೆ ಬಳಿ ಹೂಳೆತ್ತುವಿಕೆ ಆಗಬೇಕಿದೆ. ಪ್ರತೀ ವರ್ಷ ಈ ಭಾಗದಲ್ಲಿ ಮಳೆ ನೀರು ನಿಂತು ಪ್ರಯಾಣಿಕರಿಗೂ ಸಮಸ್ಯೆಯಾಗುತ್ತಿದೆ. ಇಲಾಖೆ ಈಗಾಗಲೇ ಸುರತ್ಕಲ್ ವರೆಗೆ ಕಾಮಗಾರಿ ಮುಗಿಸಿದ್ದು ಡಿವೈಡರ್ ಮಧ್ಯದಲ್ಲಿನ ಮಣ್ಣು, ರಸ್ತೆಗಳ ಅಕ್ಕಪಕ್ಕದಲ್ಲಿ ಸಂಗ್ರಹವಾಗಿದ್ದ ಮರಳನ್ನು ತೆಗೆಯಬೇಕಿದೆ. ಚತುಷ್ಪಥ ರಸ್ತೆಯ ನೀರು ಸರಾಗವಾಗಿ ಹರಿದು ಹೋಗಲು ಡಿವೈಡರ್ ಮಧ್ಯದಲ್ಲಿನ ಕೊಳವೆಗಳನ್ನು ಸ್ವತ್ಛಗೊಳಿಸುವ ಕಾರ್ಯ ಕೆಲವೆಡೆ ಆಗಿದ್ದು ಸಂಪೂರ್ಣವಾಗಿಲ್ಲ.
ಪಣಂಬೂರು ರಸ್ತೆ ಇಕ್ಕೆಲಗಳಲ್ಲಿ ನೀರು
ಪಣಂಬೂರು ಚತುಷ್ಪಥ ರಸ್ತೆಯ ಇಕ್ಕೆಲಗಳಲ್ಲಿ ಪ್ರತೀ ವರ್ಷ ನೀರು ನಿಲ್ಲು ತ್ತಿದ್ದು ಸರಾಗವಾಗಿ ಹರಿದುಹೋಗಲು ವ್ಯವಸ್ಥೆಗಳಾಗ ಬೇಕಿದೆ.
ಮಲಿನ ನೀರು ರಸ್ತೆಗೆ
ಇಲ್ಲಿನ ಕುಳಾಯಿ, ಹೊನ್ನಕಟ್ಟೆ , ಹೊಸ ಬೆಟ್ಟು, ಬೈಕಂಪಾಡಿ ಮತ್ತಿತರೆಡೆ ಹೆದ್ದಾರಿ ಬದಿ ಒಳ ಚರಂಡಿ ವ್ಯವಸ್ಥೆ ಇಲ್ಲದೆ ಹೊಟೇಲ್ ನೀರು ಹರಿದು ದುರ್ವಾಸನೆ ಬರುವಂತಾಗಿದೆ.
ವಿವಿಧ ಫಲಾಹಾರ ಮಂದಿರಗಳು, ಡಾಬಾಗಳು ತಮ್ಮಲ್ಲಿ ಕಲುಷಿತ ನೀರನ್ನು ಬಿಡಲು ಸರಿಯಾದ ವ್ಯವಸ್ಥೆ ಮಾಡಿಕೊಳ್ಳದಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ.
ಸೊಳ್ಳೆ ಉತ್ಪತ್ತಿ ತಾಣ
ಬಳಸಿದ ನೀರು ನೇರವಾಗಿ ಅಲ್ಲಲ್ಲಿ ಇರುವ ಮಳೆ ನೀರು ಹರಿಯುವ ತೋಡುಗಳಲ್ಲಿ ನಿಲ್ಲುವುದರಿಂದ ದುರ್ವಾಸನೆಗೆ ಕಾರಣ ವಾಗುತ್ತಿದೆ ಮಾತ್ರವಲ್ಲ ಸೊಳ್ಳೆ ಉತ್ಪತ್ತಿ ತಾಣವಾಗಿ ಬದಲಾಗುತ್ತಿವೆ. ಇನ್ನು ಕೆಲವೆಡೆ ಮಾಂಸಾಹಾರ ಕ್ಯಾಂಟೀನ್‌ಗಳಿಂದ ಬರುವ ಕಲುಷಿತ ನೀರಿನ ವಾಸನೆಯಿಂದ ಪಾದಚಾರಿಗಳು ಮೂಗು ಮುಚ್ಚಿ ನಡೆಯುವಂತಾಗಿದೆ. ಈ ಪ್ರದೇಶಗಳು ಹೆದ್ದಾರಿ ಇಲಾಖೆಗೆ ಸೇರಿರುವುದರಿಂದ ಮಹಾನಗರ ಪಾಲಿಕೆ ತನ್ನ ಕಾರ್ಯವ್ಯಾಪ್ತಿ ಅಲ್ಲ ಎಂದು ಕೈ ಎತ್ತಿಬಿಡುತ್ತದೆ.
ಅಧಿಕಾರಿಗಳಿಗೆ ಸೂಚಿಸುವೆ
ಮಳೆಗಾಲಕ್ಕೆ ಹೆದ್ದಾರಿ ಸಹಿತ ಯಾವುದೇ ಭಾಗದಲ್ಲಿ ಕೃತಕ ನೆರೆ ಆಗದಂತೆ ಸೂಕ್ತ ಕ್ರಮವನ್ನು ಸಂಬಂಧ ಪಟ್ಟ ಇಲಾಖೆಗಳು ಕೈಗೊಳ್ಳ ಬೇಕಿದೆ. ಈ ಬಗ್ಗೆ ಎಲ್ಲ ಅ ಧಿಕಾರಿಗಳನ್ನು ಸಂಪರ್ಕಿಸಿ ವ್ಯವಸ್ಥೆ ಕೈಗೊಳ್ಳಲು ಬೇಕಾದ ಸೂಚನೆ ನೀಡುತ್ತೇನೆ.
– ಡಾ| ಭರತ್ ಶೆಟ್ಟಿ ವೈ.,
ಶಾಸಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
PM Modi: ಒಂದೂವರೆ ವರ್ಷದಲ್ಲಿ 10 ಲಕ್ಷ ಸರಕಾರಿ ಉದ್ಯೋಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.