ವಿಶ್ವ ಜಿಗೀಷದ್ ಯಾಗ ಆರಂಭ
Team Udayavani, Apr 11, 2018, 10:03 AM IST
ಪಾವಂಜೆ: ಇಲ್ಲಿನ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಲೋಕ ಕಲ್ಯಾಣ ಹಾಗೂ ಭಾರತವನ್ನು ‘ವಿಶ್ವ ಗುರು’ವನ್ನಾಗಿಸುವ ಸಂಕಲ್ಪದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ವಿಶ್ವ ಜಿಗೀಷದ್ ಯಾಗದ ಪ್ರಕ್ರಿಯೆ ಆರಂಭಗೊಂಡಿದೆ.
ಎ. 9ರಂದು ಗೋಧೋಳಿ ಲಗ್ನದಲ್ಲಿ ಕಲಶ ಸ್ಥಾಪನೆ ಮಾಡಿ, ಗಂಗಾಪೂಜೆ ಕೈಗೊಂಡು, ಮುತ್ತೈದೆಯರು ವೇದ ಮಂತ್ರಗಳ ಘೋಷಣೆಯ ಜತೆಗೆ ಗಂಗಾ ಕಲಶವನ್ನು ದೇಗುಲದ ಶಾರಧ್ವತ ಯಜ್ಞಾಂಗಣಕ್ಕೆ ತಂದರು. ಯಜ್ಞಾಂಗಣದಲ್ಲಿ ಪ್ರತಿಷ್ಠಾಪನೆಗೊಂಡ ಗೌತಮೇಶ್ವರ ಶಿವಲಿಂಗಕ್ಕೆ ದೀಕ್ಷಾ ಬದ್ಧ ಹದಿನಾರು ದೀಕ್ಷಿತರು ಅಭಿಷೇಕ ಮಾಡಿ ಯಾಗ ಸಾಂಗತೆಯ ಸಂಕಲ್ಪ ಸ್ವೀಕರಿಸಿದರು.
ಎ.10ರಂದು ಮುಂಜಾನೆಯಿಂದ ಯಾಗದ ಅಗ್ನಿ ಕುಂಡವಾದ ಪ್ರಧಾನ ಕುಂಡ, ಸಂಘಪ್ರಾದ್ವ, ಋಷಿ ಸ್ವರ, ಕೃತವೇಶೀ, ಹಿಮರುಚಿ ಯಾಗದ ಕುಂಡದಲ್ಲಿ ವೈದಿಕರು ಮಂತ್ರೋಚ್ಛಾರದೊಂದಿಗೆ ಯಾಗದ ಪ್ರಕ್ರಿಯೆ ಆರಂಭಗೊಂಡಿತು. ಯಾಗದ ನಿರ್ದೇಶಕರಾದ ವೇದ ಕೃಷಿಕ ಕೆ.ಎಸ್. ನಿತ್ಯಾನಂದ ಅವರು ಯಾಗದ ಸ್ವರೂಪ ಹಾಗೂ ಮೂಲ ಉದ್ದೇಶಗಳನ್ನು ಉದ್ಗೋಷಿಸಿದರು. ಭಾರತ ಪರಿಕ್ರಮ ಯಾತ್ರೆ ಕೈಗೊಂಡ ಸೀತಾರಾಂ ಕೆದಿಲಾಯ ಅವರು ವಿಶೇಷವಾಗಿ ಯಾಗದ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.
ದೇಗುಲದ ಧರ್ಮದರ್ಶಿ ಡಾ| ಯಾಜಿ ನಿರಂಜನ್ ಭಟ್, ಮೊಕ್ತೇಸರ ಎಂ. ಶಶೀಂದ್ರ ಕುಮಾರ್, ಯಾಗದ ವಕ್ತಾರ ಡಾ| ಸೋಂದಾ ಭಾಸ್ಕರ ಭಟ್ ಕಟೀಲು, ಯಾಗ ಉಪ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು. ಬೆಳಗ್ಗೆ ಜಾತೂಕರ್ಣ ವೇದಿಕೆಯಲ್ಲಿ ಕಡಂಬೋಡಿ ಆಶ್ರಯ ಮಹಿಳಾ ಮಂಡಳಿಯಿಂದ ಭಜನ ಸಂಕೀರ್ತನೆ ನಡೆಯಿತು. ವಿವಿಧ ಸಂಘ- ಸಂಸ್ಥೆಗಳ ಪದಾ ಧಿಕಾರಿಗಳು ಸ್ವಯಂ ಸೇವಕರಾಗಿ ಅನ್ನಪ್ರಸಾದ ವಿತರಣೆಯಲ್ಲಿ ತೊಡಗಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Forest Department: ಇದ್ದಲ್ಲಿಯೇ ಅರಣ್ಯ ಅಪರಾಧಗಳ ದಾಖಲು: “ಗರುಡಾಕ್ಷಿ’ಗೆ ಚಾಲನೆ
Commission: 60 ಪರ್ಸೆಂಟ್ ಕಮಿಷನ್: ಎಚ್ಡಿಕೆ ವಿರುದ್ಧ ಮುಗಿಬಿದ್ದ ಆಡಳಿತ ಪಕ್ಷ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.