ಬೀದಿ ಬದಿ ವಲಯದಲ್ಲಿ ವ್ಯಾಪಾರ ಆರಂಭ
Team Udayavani, Oct 25, 2017, 10:18 AM IST
ಸ್ಟೇಟ್‌ಬ್ಯಾಂಕ್: ನಗರದ ಬೀದಿ ಬದಿ ವ್ಯಾಪಾರಿಗಳ ಬೇಡಿಕೆಯ ಹಿನ್ನೆಲೆಯಲ್ಲಿ ಪಾಲಿಕೆಯು ಪುರಭವನದ ಹಿಂಭಾಗದಲ್ಲಿ ಪ್ರಾರಂಭಿಸಿದ ಬೀದಿ ಬದಿ ವ್ಯಾಪಾರಿಗಳ ವಲಯದೊಳಗೆ ಮಂಗಳವಾರ ವ್ಯಾಪಾರ ಆರಂಭವಾಗಿದ್ದು, ನನೆಗುದಿಗೆ ಬಿದ್ದು, ಬಿಕೋ ಎನ್ನುತ್ತಿದ್ದ ಈ ವಲಯಕ್ಕೆ ಜೀವಕಳೆ ಬಂದಂತಾಗಿದೆ.
ಸೆಂಟ್ರಲ್ ಮಾರುಕಟ್ಟೆ ಮುಂಭಾಗ ತರಕಾರಿ ವ್ಯಾಪಾರ ನಡೆಸುತ್ತಿರುವ ಸುಮಾರು 50 ರೈತ ಮಹಿಳೆಯರು ಸಾಮಾಜಿಕ ಕಾರ್ಯಕರ್ತೆ ರೀಟಾ ನೊರೋನ್ಹಾ ನೇತೃತ್ವದಲ್ಲಿ ಬೀದಿ ಬದಿ ವ್ಯಾಪಾರಿ ವಲಯದೊಳಗೆ ಮಂಗಳವಾರ ವ್ಯಾಪಾರ ಆರಂಭಿಸಿದ್ದಾರೆ. ಸಾರ್ವಜನಿಕರಿಗೆ ಸೂಕ್ತ ಮಾಹಿತಿ ಇರದ ಕಾರಣ ಮೊದಲ ದಿನದ ವ್ಯಾಪಾರ ಕಡಿಮೆಯಾಗಿತ್ತು.
ಮೊದಲ ದಿನ; ಬಿಸಿಲಿನ ಪೆಟ್ಟು!
ಇಲ್ಲಿನ ವ್ಯಾಪಾರಿಗಳು ಮೊದಲ ದಿನವೇ ಬಿಸಿಲಿನ ಪೆಟ್ಟಿಗೆ ಕಂಗಾಲಾದರು. ವಲಯದೊಳಗೆ ಒಂದು ವಾರ ಕುಳಿತು ವ್ಯಾಪಾರ ಮಾಡಿದರೆ, ಎಲ್ಲ ಅಗತ್ಯ ವ್ಯವಸ್ಥೆ, ಬಿಸಿಲಿನಿಂದ ಮುಕ್ತಿ ನೀಡುವ ಸೌಕರ್ಯವನ್ನು ಕಲ್ಪಿಸುವುದಾಗಿ ಪಾಲಿಕೆ ತಿಳಿಸಿದೆಯಾದರೂ, ಒಂದು ವಾರದವರೆಗೆ ಬಿಸಿಲಿನಲ್ಲಿ ಹೇಗೆ ವ್ಯಾಪಾರ ನಡೆಸುವುದು ಎಂಬ ಪ್ರಶ್ನೆಯಲ್ಲಿದ್ದಾರೆ. ಜತೆಗೆ ವಲಯದ ಸುತ್ತಲೂ ಕಾಂಪೌಂಡ್ ಇರುವುದರಿಂದ ಹೊರಭಾಗದ ಸಾರ್ವಜನಿಕರಿಗೆ ವಲಯದ ಬಗ್ಗೆ ಗೊತ್ತಾಗುತ್ತಿಲ್ಲ. ಹೀಗಾಗಿ ವ್ಯಾಪಾರ ಆಗುತ್ತಿಲ್ಲ ಎಂಬ ಆರೋಪವೂ ಕೇಳಿ ಬಂತು. ಬುಧವಾರ ನಗರದ ಬೀದಿ ಬದಿ ವ್ಯಾಪಾರಿಗಳು ಇದೇ ವಲಯದೊಳಗೆ ವ್ಯಾಪಾರ ಆರಂಭಿಸುವ ನಿರೀಕ್ಷೆ ಇದೆ.
ಈ ವಲಯದಲ್ಲಿ ಸುಮಾರು 1 ಎಕರೆಗಿಂತಲೂ ಅಧಿಕ ಸ್ಥಳವಿದ್ದು, 250 ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಅವಕಾಶವಿದೆ. ಪ್ರಸ್ತುತ ಪಾಲಿಕೆ ವತಿಯಿಂದ ಗುರುತು ಚೀಟಿ ನೀಡಲಾದ 208 ಬೀದಿ ಬದಿ ವ್ಯಾಪಾರಿಗಳ ಸಂಘದ ಸದಸ್ಯರಿಗೆ ಇಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ.
ಕಳೆದ ವರ್ಷ ಡಿ.9ರಂದು ಇದರ ಉದ್ಘಾಟನೆ ನೆರವೇರಿಸಿ, ವ್ಯಾಪಾರಿಗಳಿಗೆ ಪ್ರವೇಶ ನೀಡಲಾಗಿತ್ತು. ಹಲವು ದಿನಗಳ ಬಳಿಕ ಕೆಲವು ವ್ಯಾಪಾರಿಗಳು ಇಲ್ಲಿ ವ್ಯಾಪಾರಕ್ಕೂ ಮುಂದಾದರೂ ವಿವಿಧ ಕಾರಣಗಳಿಂದಾಗಿ ಮತ್ತೆ ಬೀದಿ ಬದಿಯಲ್ಲಿ ವ್ಯಾಪಾರ ಶುರು ಮಾಡಿದ್ದರು. ಬಳಿಕ ಪಾಲಿಕೆ ಬೀದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆಯನ್ನು ನಡೆಸಿತ್ತು. ಜತೆಗೆ ಪಾಲಿಕೆ ವತಿಯಿಂದ ಮೇಯರ್ ಕವಿತಾ ಸನಿಲ್ ನೇತೃತ್ವದಲ್ಲಿ ಗುರುತಿನ ಚೀಟಿ ನೀಡುವ ಕೆಲಸ ನಡೆಸಲಾಗಿತ್ತು.
‘ವಾರದೊಳಗೆ ಮೂಲಸೌಲಭ್ಯ’
ಸ್ಟೇಟ್‌ಬ್ಯಾಂಕ್‌ನ ಬೀದಿ ಬದಿ ವ್ಯಾಪಾರಿ ವಲಯದೊಳಗೆ ಗುರುತಿನ ಚೀಟಿ ಪಡೆದುಕೊಂಡವರ ಪೈಕಿ ಮಂಗಳವಾರ ಕೆಲವು ಮಹಿಳೆಯರು ವ್ಯಾಪಾರ ಆರಂಭಿಸಿದ ಬಗ್ಗೆ ತಿಳಿದಿದೆ. ಇದೇ ರೀತಿ ಗುರುತಿನ ಚೀಟಿ ಪಡೆದುಕೊಂಡವರು ಇಲ್ಲಿ ವ್ಯಾಪಾರ ನಡೆಸಿದರೆ, ಒಂದು ವಾರದೊಳಗೆ ಎಲ್ಲ ರೀತಿಯ ಮೂಲಸೌಲಭ್ಯಗಳನ್ನು ಕಲ್ಪಿಸುತ್ತೇವೆ. ವ್ಯಾಪಾರಿಗಳಿಗೆ ಬಿಸಿಲಿನಿಂದ ರಕ್ಷಣೆ ಹಾಗೂ ಎದುರಿನ ಕಾಂಪೌಂಡ್ ತೆರವು ಮಾಡಲಾಗುವುದು.
– ಕವಿತಾ ಸನಿಲ್, ಮೇಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.