Congress ಜನರ ಬದುಕು ಬದಲಿಸಿದ ರಾಜ್ಯ ಸರಕಾರ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘದ ರಾಜ್ಯ ಮಹಾ ಸಮ್ಮೇಳನ
Team Udayavani, Jan 25, 2024, 12:20 AM IST
ಮಂಗಳೂರು: ದೇಶದಲ್ಲಿ ಭಾವನೆಯ ಮೇಲೆ ರಾಜಕಾರಣವನ್ನು ಕೇಂದ್ರದ ಒಂದು ರಾಜಕೀಯ ಪಕ್ಷ ಮಾಡುತ್ತಿದ್ದರೆ, ನಾವು ಬದುಕಿನ ಮೇಲೆ ಬದಲಾವಣೆ ತರುವ ಮೂಲಕ ಶಕ್ತಿ ನೀಡುವ ಕಾರ್ಯವನ್ನು ನಡೆಸುತ್ತಿದ್ದೇವೆ. ರಾಜ್ಯ ಸರಕಾರದಿಂದಾಗಿ ಜನರ ಬದುಕಿನಲ್ಲಿ ಬದಲಾವಣೆ ಆಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ಎಸ್‌ವೈಎಸ್) 30 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಅಡ್ಯಾರ್‌ನ ಷಾ ಗಾರ್ಡನ್ (ಎನ್‌ಆರ್‌ಸಿ) ಮೈದಾನದಲ್ಲಿ ಬುಧವಾರ ಸಂಜೆ ನಡೆದ ಎಸ್‌ವೈಎಸ್ ರಾಜ್ಯ ಮಹಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮ ಯಾವುದಾದರೂ ತಣ್ತೀ ಒಂದೇ. ಪೂಜೆ ಯಾವುದಾದರೂ ಭಕ್ತಿ ಒಂದೇ. ಕರ್ಮ ಹಲವಾದರೂ ನಿಷ್ಠೆ ಒಂದೇ. ದೇವನೊಬ್ಬ ನಾಮ ಹಲವು ಎಂಬುದನ್ನು ನಾವು ಒಪ್ಪಿಕೊಳ್ಳಬೇಕು. ಗಾಳಿ, ಸೂರ್ಯ, ಚಂದ್ರ, ನೀರಿಗೆ ಯಾವುದೇ ಜಾತಿ, ಧರ್ಮ ಭೇದ ಇಲ್ಲ. ಅದಿಲ್ಲದೆ ನಾವು ಯಾರೂ ಬದುಕಲು ಸಾಧ್ಯವಿಲ್ಲ. ಹಾಗಾಗಿ ಮಾನವೀಯತೆಯಲ್ಲಿ ಬದುಕಬೇಕಿದೆ ಎಂದರು.
ಯುವಕರು ದೇಶದ ಆಸ್ತಿ. ತಾವು ಸಂಸ್ಕೃತಿ, ಧರ್ಮವನ್ನು ಕಾಪಾಡುವ ಕಾರ್ಯವನ್ನು ನಡೆಸಬೇಕು. ಧರ್ಮ, ಆಚಾರ-ವಿಚಾರದ ವಿಷಯದಲ್ಲಿ ನಾವು ಯಾರೂ ಮಧ್ಯಪ್ರವೇಶಿಸಬಾರದು. ನಿಮ್ಮ ಪರವಾಗಿ ನಿಂತು ನಿಮಗೆ ರಕ್ಷಣೆ ನೀಡುವ ಸಿದ್ದರಾಮಯ್ಯ ನೇತೃತ್ವದ ಸರಕಾರ ರಾಜ್ಯದಲ್ಲಿ ಇದೆ ಎಂದರು.
ಟೀಕೆಗೆ ಹೆದರೆನು: ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು, ಹುಬ್ಬಳ್ಳಿ ಧಾರವಾಡದಲ್ಲಿ ಆಗಿರುವ ಘಟನೆ ಬಗ್ಗೆ ತಿಳಿದಿದ್ದೇವೆ. ಮಾನಸಿಕವಾಗಿ ನಮಗೆ ನೋವಿದೆ. ನನ್ನ ಮೇಲೆಯೂ ದೂಷಣೆ ಆಯಿತು. ಆದರೆ ನಾನು ಯಾವುದಕ್ಕೂ ಹೆದರಲಿಲ್ಲ. ಮುಸ್ಲಿಂ ಬಾಂಧವರು ನನ್ನ ಸಹೋದರರು ಎಂದು ಹೇಳಿದ್ದಕ್ಕೆ ದೊಡ್ಡ ಟೀಕೆ ಆಯಿತು. ಇದಕ್ಕೆ ಡಿ.ಕೆ. ಶಿವಕುಮಾರ್, ಕನಕಪುರದ ಬಂಡೆ ಹೆದರುವವನಲ್ಲ ಎಂದು ಹೇಳಿದರು.
ವಿದ್ವಾಂಸ, ಭಾರತದ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ವಿಶೇಷ ಸಂದೇಶವಿತ್ತರು.
ವಿಧಾನ ಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್, ಸಚಿವ ರಹೀಂ ಖಾನ್, ಪ್ರಮುಖರಾದ ಸಲೀಂ ಅಹಮ್ಮದ್, ಬಿ.ಎಂ. ಫಾರೂಕ್, ಕೆ.ಎಸ್.ಮಹಮ್ಮದ್ ಮಸೂದ್, ರೋಜಿ ಜಾನ್, ಇನಾಯತ್ ಅಲಿ, ಸಹಿತ ರಾಜಕೀಯ ನಾಯಕರು, ವಿದ್ವಾಂಸರು, ವೇದಿಕೆಯಲ್ಲಿದ್ದರು. ಎಸ್‌ವೈಎಸ್ ರಾಜ್ಯಾಧ್ಯಕ್ಷ ಅಬ್ದುಲ್ ಹಫೀಲ್ ಸಅದಿ ಕೊಳಕೇರಿ ಉಪಸ್ಥಿತರಿದ್ದರು.ಬಿ.ಎಂ. ಮುಮ್ತಾಝ್ ಅಲಿ ಸ್ವಾಗತಿಸಿದರು.
ಶೆಟ್ಟರ್ ಬಿಜೆಪಿಗೆ ಮರಳುವುದು ಸುಳ್ಳು
ಮಂಗಳೂರು: ಹಿರಿಯ ನಾಯಕ ಜಗದೀಶ್ ಶೆಟ್ಟರ್‌ಬಿಜೆಪಿಗೆ ವಾಪಸ್ ಆಗುವುದು ಸುಳ್ಳು, ಆದರೆ ಬಿಜೆಪಿಯವರು ಪ್ರಯತ್ನ ಮಾಡುತ್ತಿದ್ದಾರೆ. ಶೆಟ್ಟರ್ ಅವರನ್ನು ಕರೆಯುತ್ತಾರೆ, ಹಾಗೆಂದು ಕರೆದ ಕೂಡಲೇ ಹೋಗಲು ಶೆಟ್ಟರ್ ದಡ್ಡರಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೆಟ್ಟರ್ ಅವರನ್ನು ಬಿಜೆಪಿಯ ವರು ಸುಮ್ಮನೆ ಕರೆಯುತ್ತಿದ್ದಾರೆ. ಅವರ ಮೇಲೆ ಅನುಮಾನ ಬರಬೇಕು ಎಂದು ಮಾಡುತ್ತಿರುವ ಸಂಚು ಅದು. ಆದರೆ ಅದು ಫಲಿಸದು ಎಂದರು. ಶೆಟ್ಟರ್ ಅವರು ನಮ್ಮ ಪಕ್ಷದ ಹಿರಿಯ ನಾಯಕರು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.