ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಆರಂಭ
Team Udayavani, Sep 27, 2017, 4:44 PM IST
ಕಿನ್ನಿಗೋಳಿ : ಕಿನ್ನಿಗೋಳಿಯಿಂದ ಮೂಲ್ಕಿ ಕಾರ್ನಾಡ್ ತನಕದ ರಸ್ತೆಯನ್ನು 14.8 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡುವ ಕಾಮಗಾರಿ ಆರಂಭಗೊಂಡಿದೆ.
ರಾಜ್ಯಹೆದ್ದಾರಿ ಅಭಿವೃದ್ಧಿ ಯೋಜನೆಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಕಿನ್ನಿಗೋಳಿ ಮೂರು ಕಾವೇರಿಯ ಮಾರಿ ಗುಡಿಯಿಂದ ಕಾರ್ನಾಡ್ ಜಂಕ್ಷನ್ ತನಕ ಹೆದ್ದಾರಿಯ ಅಗಲವನ್ನು ಹಾಲಿ 5.5 ಮೀ.ಗಳಿಂದ 7 ಮೀಟರ್‌ಗೆ ವಿಸ್ತರಿಸಲಾಗುವುದು.
ಕಿನ್ನಿಗೋಳಿ ಪೇಟೆಯಲ್ಲಿ ಚರ್ಚ್ ಸಮೀಪದ ಕೆಳಭಾಗದಿಂದ ಭಟ್ಟಕೋಡಿಯ ತನಕ 500 ಮೀಟರ್ ರಸ್ತೆಯ ಇಕ್ಕೆಲಗಳಲ್ಲಿ ಕಾಂಕ್ರೀಟ್ ಚರಂಡಿ ನಿರ್ಮಾಣ ಮಾಡಿ, ಅದರ ಮೇಲೆ ಕಾಂಕ್ರೀಟ್ ಚಪ್ಪಡಿ ಹಾಸಿ ಫುಟ್‌ಪಾತ್ ನಿರ್ಮಾಣ ಮಾಡಲಾಗುವುದು. ಎರಡು ಕಡೆಗಳಲ್ಲೂ ಫುಟ್‌ಪಾತ್ ತನಕ ಡಾಮರು ಹಾಕಲಾಗುವುದು. ಪೇಟೆ ಭಾಗದಲ್ಲಿ ಸುಗಮ ಸಂಚಾರಕ್ಕೆ ಎರಡು ಅಥವಾ ಮೂರು ಕಡೆಗಳ ಬಸ್ ಬೇ ನಿರ್ಮಾಣ ಮಾಡುವ ಉದ್ದೇಶವಿದೆ.
ಬಸ್ ಬೇ ನಿರ್ಮಾಣ
ಕಾರ್ನಾಡ್, ಎಸ್.ಕೋಡಿ ಜಂಕ್ಷನ್‌ನಲ್ಲಿ ಅಗತ್ಯಕ್ಕೆ ತಕ್ಕಂತೆ ಬಸ್ ಬೇ ನಿರ್ಮಾಣ ಮಾಡಲಾಗುವುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ನೀರಿನ ಪೈಪ್ ಹಾಗೂ ದೂರವಾಣಿ ಕೇಬಲ್‌ಗಳಿಂದ ಕಾಮಗಾರಿಗೆ ಹೆಚ್ಚಿನ ತೊಡಕು ಉಂಟಾಗಿದೆ. ಅದರಲ್ಲೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್‌ಗ್ಳನ್ನು ಕೆಲವು ಕಡೆಗಳಲ್ಲಿ ಕೇವಲ ಒಂದು ಅಡಿ ಆಳದಲ್ಲಿ ಹಾಕಿರುವುದರಿಂದ ಸಮಸ್ಯೆ ಆಗಿದೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.
180 ವಿದ್ಯುತ್ ಕಂಬ ತೆರವು,
60 ಮರಗಳಿಗೆ ಕೊಡಲಿ
ಮೂರು ಕಾವೇರಿಯಿಂದ ಕಾರ್ನಾಡ್ ತನಕ ರಸ್ತೆ ಅಂಚಿನಲ್ಲಿ ತಿರುವು ಪ್ರದೇಶದಲ್ಲಿದ್ದ 180ಕ್ಕೂ ಹೆಚ್ಚು ವಿದ್ಯುತ್ ಕಂಬಗಳ ತೆರವು ಕಾರ್ಯ ಮೆಸ್ಕಾಂ ವತಿಯಿಂದ ನಡೆಯಲಿದೆ. 100ಕ್ಕೂ ಮಿಕ್ಕಿ ಮರಗಳನ್ನು ತೆರವುಗೊಳಿಸುವ ಬಗ್ಗೆ ಸರ್ವೆ ನಡೆದಿದೆ. ಕೆಲವು ರಸ್ತೆಯ ಅಂಚಿನಲ್ಲಿದ್ದು, ಅಂತಹ 60 ಮರಗಳನ್ನು ಕಡಿಯಬೇಕಾಗಿದೆ. ಹೆಚ್ಚಿನ ಕಡೆಗಳಲ್ಲಿ ಸರಕಾರಿ ಜಾಗ ಇದೆ. ಕೆಲವು ಕಡೆಗಳಲ್ಲಿ ಖಾಸಗಿ ಜಾಗವಿದ್ದು, ಸಹಕಾರ ಕೋರಲಾಗಿದೆ. ಮೂರು ಕಾವೇರಿಯಲ್ಲಿ ತುಂಬಾ ಅಪಾಯಕಾರಿ ತಿರುವು ಇದ್ದು, ಅಲ್ಲಿ ಡಿವೈಡರ್ ನಿರ್ಮಿಸಿ, ಮುಂಡ್ಕೂರು ಕಡೆಗೆ ಹೋಗುವ ಬಸ್‌ಗಳಿಗೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಹೆದ್ದಾರಿ ಇಲಾಖೆಯ ಮೂಲ ತಿಳಿಸಿದೆ.
ಕಿನ್ನಿಗೋಳಿ ಮುಖ್ಯ ಪೇಟೆಯು ಕಿನ್ನಿಗೋಳಿ ಹಾಗೂ ಮೆನ್ನಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುತ್ತಿದ್ದು, ಮುಖ್ಯ ರಸ್ತೆಯ ಎರಡು ಬದಿಗಳನ್ನು ಎರಡೂ ಗ್ರಾಮ ಪಂಚಾಯತ್‌ಗಳು ಹಂಚಿಕೊಂಡಿವೆ.
ಕಿನ್ನಿಗೋಳಿ ಮಾರುಕಟ್ಟೆ ಕಟ್ಟಡ ಶೀಘ್ರ ತೆರವು
ಕಿನ್ನಿಗೋಳಿ ಪೇಟೆಯ ಮಧ್ಯಭಾಗ ದಲ್ಲಿರುವ ಮಾರುಕಟ್ಟೆಯ ಕಟ್ಟಡದಿಂದ ರಸ್ತೆ ಅಗಲೀಕರಣ ಹಾಗೂ ಕಾಂಕ್ರೀಟ್ ಚರಂಡಿ ನಿರ್ಮಾಣಕ್ಕೆ ಸಮಸ್ಯೆಯಾಗುತ್ತಿದೆ. ಕಟ್ಟಡ ತೆರವುಗೊಳಿಸುವ ಬಗ್ಗೆ ಮಂಜೂರಾತಿಗಾಗಿ ತಾಲೂಕು ಪಂಚಾಯತ್‌ಗೆ ಪತ್ರ ಬರೆದಿದ್ದು, ಅಲ್ಲಿಂದ ಅನುಮೋದನೆ ಬಂದ ಕೂಡಲೇ ಹಳೆ ಕಟ್ಟಡ ತೆರವುಗೊಳಿಸಲಾಗುವುದು.
ಅರುಣ್ ಪ್ರದೀಪ್ ಡಿ’ಸೋಜಾ
ಕಿನ್ನಿಗೋಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ
ರಘುನಾಥ ಕಾಮತ್ ಕೆಂಚನಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗಳಲ್ಲೇ ಬಸ್ ನಿಲುಗಡೆ; ಅನಾಹುತಕ್ಕೆ ಎಡೆ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ
Niveus Mangalore Marathon 2024: ನ.10: ನೀವಿಯಸ್ ಮಂಗಳೂರು ಮ್ಯಾರಥಾನ್
MUST WATCH
ಹೊಸ ಸೇರ್ಪಡೆ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.