ಭರವಸೆಗೆ ಸೀಮಿತವಾದ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ
Team Udayavani, Feb 4, 2022, 3:40 AM IST
ಕೈಕಂಬ: ದ.ಕ. ಜಿಲ್ಲೆಯ ಗ್ರಾಮೀಣ ಭಾಗದ ರಸ್ತೆಗಳು ಅಭಿವೃದ್ಧಿ ಕಾಣುತ್ತಿರುವ ಸಮಯದಲ್ಲಿ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ತೆರಳುವ ತೆಂಕುಳಿಪಾಡಿ ಗ್ರಾಮದ ಪೊಳಲಿ ದ್ವಾರದಿಂದ ಅಡ್ಡೂರಿನ ಸೇತು ವೆವರೆಗಿನ ರಾಜ್ಯ ಹೆದ್ದಾರಿಯು ಅಭಿವೃದ್ಧಿ ಕಾಣದೆ ದುಃಸ್ಥಿತಿಯಲ್ಲಿದೆ. ಈ ರಸ್ತೆಯ ಅಭಿವೃದ್ಧಿ ಕೇವಲ ಭರವಸೆಗೆ ಸೀಮಿತವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
16 ವರ್ಷಗಳಿಂದ ಈ ಹೆದ್ದಾರಿಗೆ ಡಾಮರು ಕಾಮಗಾರಿ ಕೈಗೊಂಡಿಲ್ಲ. ಪ್ರತೀ ವರ್ಷ ಜಾತ್ರೆಯ ಸಮಯದಲ್ಲಿ ನಡೆಸುವ ತೇಪೆ ಕಾರ್ಯಕ್ಕೆ ಸೀಮಿತವಾಗಿದೆ. ದಿನೇ ದಿನೇ ರಸ್ತೆಯೂ ಹದಗೆಡುತ್ತಿದ್ದು, ವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿದೆ. ಹಲವು ಸಮಯದಿಂದ ಅಭಿವೃದ್ಧಿ ಆಗುತ್ತದೆ ಎಂದು ಹೇಳಲಾಗುತ್ತಿದೆಯಾದರೂ ಇದುವರೆಗೂ ಅದರ ಯಾವುದೇ ಲಕ್ಷಣ ಕಂಡಿಲ್ಲ.
ಅಪಾಯಕಾರಿ ತಿರುವು :
ಈ ರಾಜ್ಯ ಹೆದ್ದಾರಿಯ ಗುರುಪುರ, ಗಂಜಿಮಠ ಗ್ರಾ.ಪಂ. ವ್ಯಾಪ್ತಿಗೆ ಬರುತ್ತಿದ್ದು, ಕಾಜಿಲ, ನೂಯಿ, ಪುಣಿಕೋಡಿ, ಕಾಂಜಿಲ ಕೋಡಿ, ಕಳಸಗುರಿ, ಅಡ್ಡೂರು ಪ್ರದೇಶದಲ್ಲಿ ಹಾದು ಹೋಗುತ್ತದೆ. ಕಳಸಗುರಿಯಿಂದ ನೂಯಿ ತನಕ ರಸ್ತೆ ಹೊಂಡಮಯವಾಗಿ ತೀವ್ರ ಹದ ಗೆಟ್ಟಿವೆ. ಕಾಂಜಿಲ ಕೋಡಿ ಮಸೀದಿ ಬಳಿಯ ಅಪಾ ಯಕಾರಿ ತಿರುವಿನಲ್ಲಿ ಎರಡು ದೊಡ್ಡ ಹೊಂಡಗಳು ಬಿದ್ದು ವಾಹನ ಸಂಚಾರ ಕಷ್ಟಕರವಾಗಿದೆ. ಹೊಂಡ ತಪ್ಪಿಸುವ ಭರದಲ್ಲಿ ಅಪಘಾತಗಳು ಇಲ್ಲಿ ಸಂಭವಿಸುತ್ತಿವೆ.
ಏರುಪೇರು ರಸ್ತೆ :
ಹೆದ್ದಾರಿಯ ಕೆಲವೆಡೆ ತಗ್ಗುಗಳು, ಉಬ್ಬುಗಳು ಕಂಡುಬರುತ್ತವೆ. ರಸ್ತೆ ಬದಿ ಮಣ್ಣು ಕೊಚ್ಚಿ ಹೋಗಿ ತಗ್ಗುಗಳಿಂದ ಕೂಡಿದೆ. ಇದು ದ್ವಿಚಕ್ರವಾಹನ ಸಂಚಾರಕ್ಕೆ ಸಂಕಷ್ಟ ಉಂಟುಮಾಡಿದ್ದು, ಕೆಲವು ಸವಾರರ ಬೆನ್ನು ನೋವಿಗೆ ಕಾರಣವಾಗಿವೆ. ಈ ರಾಜ್ಯ ಹೆದ್ದಾರಿ ಅಗಲ ಕಿರಿದಾಗಿದ್ದು. ಕೆಲವೆಡೆ 4 ಮೀ. ಅಗಲವೂ ಇಲ್ಲ. ಇದು ಪಂಚಾಯತ್ ಕಚ್ಚಾ ರಸ್ತೆಯಂತಿದೆ. ಕಳಸಗುರಿ ಬಸ್ ತಂಗುದಾಣ ಸಮೀಪ ರಸ್ತೆ ಬದಿಯಲ್ಲಿ ಪೈಪ್‌ಲೈನ್‌ಗೆ ಅಗೆದು ಹಾಕಲಾಗಿದ್ದು, ಹೊಂಡವನ್ನು ಮುಚ್ಚದೇ ಇರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಮಾಹಿತಿ ನೀಡದ ಖಾಲಿ ಫಲಕಗಳು :
ಪೊಳಲಿ ದೇವಸ್ಥಾನಕ್ಕೆ ಹೋಗುವ ಈ ರಾಜ್ಯ ಹೆದ್ದಾರಿಯಲ್ಲಿ ಸಾಗಿದರೆ ರಸ್ತೆ ಬದಿಯಲ್ಲಿ ಕಿಲೋ ಮೀಟರ್ ಸೂಚಿಸುವ ಫಲಕಗಳಿವೆ. ಆದರೆ ಊರು, ದೂರದ ಬಗ್ಗೆ ಯಾವುದನ್ನು ಬರೆಯದೇ ಬಣ್ಣ ಬಳಿದು ಬಿಡಲಾಗಿದೆ. ಇದರಿಂದ ದೇಗುಲ ಎಷ್ಟು ದೂರದಲ್ಲಿದೆ ಎಂಬುವುದು ದೂರದಿಂದ ಬಂದ ಯಾತ್ರಿಗಳಿಗೆ, ವಾಹನ ಚಾಲಕರಿಗೆ ತಿಳಿಯುವುದಿಲ್ಲ.
ರಸ್ತೆಯ ಬದಿ ಬೆಳೆದ ಗಿಡಗಂಟಿಗಳು :
ಈ ರಸ್ತೆ ಬದಿಯಲ್ಲಿ ಗಿಡಗಂಟಿಗಳು ಬೆಳೆದಿದ್ದು, ಕಟಾವು ಮಾಡಿಲ್ಲ. ಇದು ತ್ಯಾಜ್ಯ ಎಸೆದು ಹೋ ಗುವವರಿಗೆ ಪೂರಕವಾಗಿದೆ. ಪ್ಲಾಸ್ಟಿಕ್ ತೊಟ್ಟೆಗಳು, ಚೀಲಗಳ ರಾಶಿ ಕಂಡುಬರುತ್ತಿದ್ದು, ಮಾಂಸದ ತ್ಯಾಜ್ಯ ದುರ್ನಾಥ ಬೀರುತ್ತಿದೆ.
ಚರಂಡಿಗೆ ಆದ್ಯತೆ ಅಗತ್ಯ :
ಈ ರಾಜ್ಯ ಹೆದ್ದಾರಿ ಬದಿಯಲ್ಲಿ ಚರಂಡಿಗಳೇ ಇಲ್ಲ, ಒಂದೆಡೆ ಗುಡ್ಡ ಪ್ರದೇಶವಾದ ಕಾರಣ ಇಲ್ಲಿ ಚರಂಡಿಗಳಿಗೆ ಆದ್ಯತೆ ನೀಡಬೇಕು. ಚರಂಡಿಗಳಿಲ್ಲದೇ ರಸ್ತೆಯ ಮಣ್ಣು ಕೊಚ್ಚಿ ಹೋಗಿ ಹೊಂಡಗುಂಡಿಗಳು ಸೃಷ್ಟಿಯಾಗುತ್ತಿವೆ.
ಮೂಲ್ಕಿಯಿಂದ ಕಟೀಲು- ಬಜಪೆ- ಗುರುಪುರ ಕೈಕಂಬ ತನಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆದು ವಿಸ್ತರಣೆಗೊಂಡಿದೆ. ಆದರೆ ಪೊಳಲಿ ದ್ವಾರದಿಂದ ಅಡ್ಡೂರು ತನಕ ರಾಜ್ಯ ಹೆದ್ದಾರಿ ಯಾಕೆ ಅಭಿವೃದ್ಧಿ ಕಂಡಿಲ್ಲ ಎಂಬುವುದು ಸಾರ್ವಜನಿಕರಲ್ಲಿ ಸಂಶಯಕ್ಕೆ ಕಾರಣವಾಗಿದೆ.
ಟೆಂಟರ್ ಪ್ರಕ್ರಿಯೆ ವಿಳಂಬ :
5 ಕೋ.ರೂ. ಅನುದಾನದಲ್ಲಿ ಈ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ವಾಹನ ಸುಗಮ ಸಂಚಾರಕ್ಕೆ ತೊಂದರೆಯಾಗುವುದನ್ನು ಗಮನಿಸಿದ್ದೇನೆ. ಕೊರೊನಾದಿಂದಾಗಿ ಈ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯಲ್ಲಿ ಕೊಂಚ ವಿಳಂಬವಾಗಿದೆ. ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನ, ಮಂಗಳೂರು ನಗರ ಹಾಗೂ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಅತೀ ಪ್ರಮುಖ ರಸ್ತೆ ಇದಾಗಿದೆ. ಈ ರಾಜ್ಯಹೆದ್ದಾರಿ ವಿಸ್ತರಣೆ, ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರವೇ ಆರಂಭಿಸಲಾಗುವುದು. -ಡಾ| ಭರತ್ ಶೆಟ್ಟಿ ವೈ., ಶಾಸಕರು
ಶೀಘ್ರ ಕಾಮಗಾರಿ ಆರಂಭ :
ಪೊಳಲಿ ದ್ವಾರದಿಂದ ಅಡ್ಡೂರು ಸೇತುವೆ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಶೀಘ್ರ ಆರಂಭವಾಗಲಿದೆ. ಲೋಕೋಪಯೋಗಿ ಇಲಾಖೆಯ 5 ಕೋ.ರೂ. ಅನುದಾನದಲ್ಲಿ ಸುಮಾರು 3 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. 5.5 ಮೀ. ಇದ್ದ ರಸ್ತೆಯನ್ನು 7 ಮೀಟರ್‌ಗೆ ವಿಸ್ತರಿಸಲಿದೆ. ಗುಡ್ಡ ಇರುವ ಕಾರಣ ಹೆಚ್ಚು ತಡೆಗೋಡೆಗಳ ನಿರ್ಮಾಣ, ಮೋರಿಗಳು, ತಿರುವುಗಳನ್ನು ತೆಗೆದು ನೇರ ಮಾಡಲಾಗುವುದು . – ಯಶವಂತ್, ಎಕ್ಸಿಕ್ಯೂಟಿವ್ ಎಂಜಿನಿಯರ್ ಲೋಕೋಪಯೋಗಿ ಇಲಾಖೆ
– ಸುಬ್ರಾಯ ನಾಯಕ್ ಎಕ್ಕಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗಳಲ್ಲೇ ಬಸ್ ನಿಲುಗಡೆ; ಅನಾಹುತಕ್ಕೆ ಎಡೆ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ
Niveus Mangalore Marathon 2024: ನ.10: ನೀವಿಯಸ್ ಮಂಗಳೂರು ಮ್ಯಾರಥಾನ್
MUST WATCH
ಹೊಸ ಸೇರ್ಪಡೆ
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.