ರಾಜ್ಯ ಮಟ್ಟದ ಕಬಡ್ಡಿ ಪಟುವಾಗಿ ಬೆಳಗಿದ ನಿರ್ಮಲಾ
Team Udayavani, Jan 18, 2018, 3:15 PM IST
ಕಲೆ ಎಂಬುದು ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಅದನ್ನು ಗುರುತಿಸಿ, ಬೆಳೆಸಿಕೊಳ್ಳುವವರು ಕೆಲವರು ಮಾತ್ರ. ಅಂತಹ ಅದ್ಭುತ ಕ್ರೀಡಾ ಪ್ರತಿಭೆಯಾಗಿ ನಿರ್ಮಲಾ ಗುರುತಿಸಿಕೊಂಡಿದ್ದಾರೆ. ಚಿಕ್ಕಂದಿನಿಂದಲೇ ಕಬಡ್ಡಿ ಆಟವನ್ನು ಪ್ರೀತಿಸುತ್ತ, ಆಡುತ್ತ ಬಂದ ನಿರ್ಮಲಾ ಪುತ್ತೂರು ತಾಲೂಕಿನ ಗುಂಡಿಗದ್ದ ಕಾಣಿಯೂರಿನ ನಿವಾಸಿಯಾದ ಕೃಷಿಕ ದೇವಪ್ಪ ಹಾಗೂ ಕಮಲಾ ದಂಪತಿಯ ಪುತ್ರಿ. ಹಳ್ಳಿಯಲ್ಲಿ ಹುಟ್ಟಿ ಬೆಳೆದ ಅವರಿಗೆ ಆಟವೇ ಮೊದಲ ಪಾಠಶಾಲೆಯಾಯಿತು.
2006-07ರಲ್ಲಿ ಸವಣೂರಿನ ದ.ಕ.ಹಿ. ಪ್ರಾಥಮಿಕ ಶಾಲೆಯಲ್ಲಿ ಮೊದಲ ಬಾರಿಗೆ ನಡೆದ ತಾಲೂಕು ಮಟ್ಟದ ಕಬಡ್ಡಿ ಕ್ರೀಡಾಕೂಟದಲ್ಲಿ ನಿರ್ಮಲಾ ಆಡಿದ್ದ ತಂಡ ಪ್ರಥಮ ಸ್ಥಾನಗಳಿಸಿತು. 2008ರಲ್ಲಿ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲೂ ಪ್ರಥಮ ಸ್ಥಾನ ಒಲಿಯಿತು. ಇದರ ಬಳಿಕ ರಾಮನಗರ ಜಿಲ್ಲೆ ಚೆನ್ನಪಟ್ಟಣದಲ್ಲಿ ರಾಜ್ಯ ಮಟ್ಟದಲ್ಲೂ
ಪ್ರಥಮ ಸ್ಥಾನ ಪಡೆದರು.
ರಾಜ್ಯ ಮಟ್ಟದಲ್ಲಿ ಪ್ರಥಮ
2011-12ನೇ ಸಾಲಿನಲ್ಲಿ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ನಡೆದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯ
ಬಾಲಕಿಯರ ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕವನ್ನು ಗಳಿಸಿದ್ದಾರೆ, ನಿರ್ಮಲಾ. ಇದೇ ರೀತಿ
ಹಲವು ಕ್ರೀಡಾಕೂಟಗಳಲ್ಲಿ ಪಾರಮ್ಯ ಮೆರೆದು ಮೆಚ್ಚುಗೆ ಗಳಿಸಿದ್ದಾರೆ.
ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕರಾಗಿ ತೀರ್ಥರಾಮ ಚಾರ್ವಾಕ, ಚಂದ್ರಶೇಖರ ಹಾಗೂ ಮನೋಹರ್ ಇವರು ಪೋ›ತ್ಸಾಹ ನೀಡಿದ್ದಾರೆ. ಅಪ್ಪ- ಅಮ್ಮ ಬಾಲ್ಯದಿಂದಲೇ ಉತ್ತೇಜನ ನೀಡಿದ್ದರಿಂದ ಕ್ರೀಡಾಪಟುವಾಗಿ ರೂಪುಗೊಳ್ಳಲು ಸಾಧ್ಯವಾಯಿತು. ಚಿಕ್ಕಂದಿನಿಂದಲೂ ಕಬಡ್ಡಿ ನನ್ನ ಮೆಚ್ಚಿನ ಆಟ. ಮುಂದೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕೆಂಬ ಹಂಬಲವಿದೆ. ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ನೂರಾರು ಕ್ರೀಡಾಪಟುಗಳನ್ನು ರೂಪಿಸುವ ಕನಸಿದೆ ಎಂದು ನಿರ್ಮಲಾ ವಿವರಿಸಿದರು.
ರಕ್ಷಿತಾ ಸಿ.ಎಚ್., ವಿವೇಕಾನಂದ
ಕಾಲೇಜು, ನೆಹರೂನಗರ ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.