ವಿದ್ಯಾರ್ಥಿಗಳಿಂದಕೃಷಿಕರಿಗೆಅನುಕೂಲವಾಗುವವಸ್ತುಗಳಆವಿಷ್ಕಾರಡಾ| ಸುರೇಶ್
Team Udayavani, May 18, 2018, 11:41 AM IST
ಬೆಳ್ತಂಗಡಿ: ಹೊಸ ವಸ್ತುಗಳ ಆವಿಷ್ಕಾರದಿಂದ ವಿದ್ಯಾರ್ಥಿಗಳಿಗೆ ಅವಕಾಶಗಳು ಹೆಚ್ಚುತ್ತಾ ಹೋಗುತ್ತದೆ. ಮುಖ್ಯವಾಗಿ ಉಜಿರೆ ಗ್ರಾಮೀಣ ಪ್ರದೇಶದಲ್ಲಿರುವುದರಿಂದ ಕೃಷಿಕರಿಗೆ ಅನುಕೂಲವಾಗುವ ವಸ್ತುಗಳ ಅವಿಷ್ಕಾರಗಳನ್ನು ವಿದ್ಯಾರ್ಥಿಗಳು ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಕೃಷಿಕರು ಇರುವಲ್ಲಿಗೆ ತೆರಳಿ ಅಡಿಕೆ, ತೆಂಗಿನಕಾಯಿ ಸಿಪ್ಪೆ ಸುಲಿಯುವ ಯಂತ್ರ ಮೊದಲಾದವುಗಳ ಆವಿಷ್ಕಾರ ಮಾಡುತ್ತಿದ್ದಾರೆ ಎಂದು ಎಸ್.ಡಿ.ಎಂ. ಐಟಿ ಪ್ರಾಂಶುಪಾಲ ಡಾ| ಸುರೇಶ್ ಹೇಳಿದರು.
ಅವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗ ಮತ್ತು ಐಎಸ್‌ಟಿಇ ಹೊಸದಿಲ್ಲಿ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ಇನ್ನೋ ವೇಟಾ- 2018 ರಾಜ್ಯಮಟ್ಟದ ಪ್ರಾಜೆಕ್ಟ್ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಕಾಲೇಜಿನಲ್ಲಿ ಇನ್ನೋವೇಶನ್ ಸೆಂಟರ್ ಮಾಡಿ ಅಲ್ಲಿ ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳನ್ನು ತೆರೆದಿಡಲಾಗುತ್ತದೆ. ಅವರಿಗೆ ಸೃಜನಶೀಲತೆಯನ್ನು ತೋರ್ಪಡಿಸಲು ವೇದಿಕೆಯಾಗಿದೆ. ಇಲ್ಲಿ ಈಗಾಗಲೇ ರಬ್ಬರ್ ಟ್ಯಾಪಿಂಗ್ ಯಂತ್ರ, ತ್ರೀಡಿ ಪ್ರಿಂಟಿಂಗ್ ಯಂತ್ರ ಕಂಡು ಹಿಡಿಯಲಾಗಿದೆ. ವಿದ್ಯಾರ್ಥಿಗಳೇ ಇಂತಹ ಕಾರ್ಯವನ್ನು ಮಾಡಿದ್ದಾರೆ. ಇಂತಹಾ ಕಾರ್ಯಗಳು ಮುಂದೆ ಕೆಲಸ ಪಡೆಯುವ ಸಂದರ್ಭದಲ್ಲಿ ಉಪಯೋಗಕ್ಕೆ ಬರಲಿವೆ ಎಂದು ಹೇಳಿದರು.
ರಾಜ್ಯದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳ ಅಂತಿಮ ವರ್ಷದ ವಿದ್ಯಾರ್ಥಿಗಳ 102 ಪ್ರಾಜೆಕ್ಟ್ಗಳನ್ನು ಪ್ರದರ್ಶಿಸಲಾಯಿತು. ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ| ತ್ಯಾಗರಾಜ್, ಡಾ| ಬಸವ ಟಿ., ಪ್ರೊ| ಮನೋಜ್ ಗಡಿಯಾರ್, ಪ್ರೊ| ಆಮಿತ್ ಕಶ್ಯಪ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.