ಪುತ್ತೂರಿಗೆ ಬರಲಿದ್ದಾರೆ ಪ್ರತಿಮೆ ಮಾನವ!
Team Udayavani, Aug 6, 2017, 7:35 AM IST
ಇವರು ವಿಶ್ವಖ್ಯಾತಿ ಪಡೆದ ಪ್ರತಿಮೆ ಮಾನವ. ಮೂರ್ತಿಯನ್ನು ನಾಚಿಸುವ ಅದ್ಭುತ ಮನುಷ್ಯ. ದೃಢತೆಯೊಂದಿಗೆ ನಿಂತರೆ ಕಣ್ ರೆಪ್ಪೆ ಮಿಟುಕಿಸೊಲ್ಲ, ಒಂಚೂರೂ ಅಲುಗಾಡೋಲ್ಲ, ಏನೇ ಕಸರತ್ತು ಮಾಡಿದ್ರೂ ನಗೋಲ್ಲ. ನಗಿಸೋಕೆ ಸಾಧ್ಯಾನೂ ಇಲ್ಲ. ತಾಸುಗಳ ಕಾಲ ಪ್ರತಿಮೆಯಾಗಿಯೇ ಇರ್ತಾರೆ. ಈ ಅಪರೂಪದ ಮನುಷ್ಯ ಪುತ್ತೂರಿಗೆ ಬರಲಿದ್ದಾರೆ.
ಆ. 7 ರಂದು ಪೂರ್ವಾಹ್ನ ಪುತ್ತೂರು ಕೋರ್ಟ್ ರಸ್ತೆಯ ಫಾರ್ಚೂನ್ ಮಾಲ್‌ನಲ್ಲಿ ನಡೆಯುವ ಟೋಪ್ಕೋ ಝಂ ಝಂ ಜುವೆಲರಿಯ ಉದ್ಘಾಟನೆ ಸಮಾರಂಭದಲ್ಲಿ ಈ ಪ್ರತಿಮೆ ಮಾನವ ಆಕರ್ಷಣಾ ಕೇಂದ್ರವಾಗಲಿದ್ದಾರೆ.
ಈ ಪ್ರತಿಮೆ ಮಾನವನನ್ನು ಯಾರೂ ನಗಿಸಲು ಪ್ರಯತ್ನಿಸಬಹುದು. ಇದು ಸಾರ್ವಜನಿಕರಿಗೊಂದು ಸವಾಲ್. ಆ ಸಾಮರ್ಥ್ಯವಿದ್ದರೆ ಟೋಪ್ಕೋ ಝಂ ಝಂ ಜುವೆಲರಿ ಸ್ಥಳದಲ್ಲೇ 51 ಸಾವಿರ ರೂ. ನಗದು ಬಹುಮಾನ ನೀಡಲಿದೆ.
ಪ್ರತಿಮೆ ಮಾನವ ರಫೀಕ್
ಈ ಪ್ರತಿಮೆ ಮಾನವ ಚೆನ್ನೈಯ ಪನಿಯೂರಿನವರು. ಹೆಸರು ಮಹಮ್ಮದ್ ರಫೀಕ್. 53 ರ ಹರೆಯದ ರಫೀಕ್ ತನ್ನ ಸ್ವ ಸಾಮರ್ಥ್ಯದಿಂದ ಏಕಾಗ್ರತೆಯನ್ನು ಮೈಗೂಡಿಸಿಕೊಂಡು ಕಳೆದ 35 ವರ್ಷಗಳಿಂದ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ಭಾರತವಲ್ಲದೆ ದುಬೈ, ಮಲೇಷ್ಯಾ, ಮಸ್ಕತ್ ನಲ್ಲಿ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದ್ದಾರೆ. ರಫೀಕ್ ಪ್ರತಿಭೆಯನ್ನು ಗುರುತಿಸಿ ಚಿದಂಬರಂ ಅಣ್ಣಾಮಲೈ ಯುನಿವರ್ಸಿಟಿಯಲ್ಲಿ ಅಂದಿನ ರಾಷ್ಟ್ರಪತಿ ಡಾ| ಎ.ಪಿ.ಜೆ. ಅಬ್ದುಲ್ ಕಲಾಂ ಪ್ರಶಸ್ತಿ ನೀಡಿ ಪುರಸ್ಕರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.