ಕಿಟ್ಟೆಲ್ ವಾಸವಿದ್ದ ಸ್ಥಳಕ್ಕೆ ಸ್ಮರಣೀಯ ಕೊಡುಗೆ; ವಂಶಸ್ಥರ ತೀರ್ಮಾನ
Team Udayavani, Nov 13, 2022, 7:50 AM IST
ಮಂಗಳೂರು: ಡಾ| ಕಿಟ್ಟೆಲ್ ಅವರ 200ನೇ ಜನ್ಮದಿನೋತ್ಸವಕ್ಕೆ ಮೊದಲು, ಅವರು ಕರ್ನಾಟಕದಲ್ಲಿ ಕೆಲಸ ಮಾಡಿರುವ ಸ್ಥಳಗಳಿಗೆ ಸ್ಮರಣೀಯ ಕೊಡುಗೆ ನೀಡಲು ಅವರ ವಂಶಜರು ತೀರ್ಮಾನಿಸಿದ್ದಾರೆ.
ಕಿಟ್ಟೆಲ್ ಮರಿಮಗಳು ಅಲ್ಮುಥ್ ಬಾರ್ಬರಾ ಎಲೆನೊರೆ ಮೈಯರ್(ಕಿಟ್ಟೆಲ್), ಅವರ ಪುತ್ರ ಮತ್ತು ಕಿಟ್ಟೆಲ್ ಅವರ ಮರಿಮರಿಮಗ ವೈ. ಪ್ಯಾಟ್ರಿಕ್ ಮೈಯರ್ ಶನಿವಾರ ಉದಯವಾಣಿ ಜತೆಗಿನ ಸಂದರ್ಶನದಲ್ಲಿ ಈ ವಿಚಾರ ತಿಳಿಸಿದರು.
ಪ್ರಶ್ನೆ: ಕಿಟ್ಟೆಲ್ ಅವರು ಓಡಾಡಿದ್ದ ಜಾಗದಲ್ಲಿ ಈಗ ನೀವಿದ್ದೀರಿ, ಹೇಗನಿಸಿದೆ?
ಪ್ಯಾಟ್ರಿಕ್: ಉತ್ತರ ಜರ್ಮನಿಯ ಗಾಳಿಯ ಅಬ್ಬರದ ಕಡಲ ತೀರದಲ್ಲಿ ಜನಿಸಿದ ನಮ್ಮ ಹಿರಿಯಜ್ಜ ಕಿಟ್ಟೆಲ್ 21ನೇ ವರ್ಷದಲ್ಲಿ ಮಂಗಳೂರಿಗೆ ಬಂದರು. ಇಲ್ಲಿನ ಬಣ್ಣಗಳು, ತದ್ವಿರುದ್ಧ ಹವಾಮಾನ, ಸಂಗೀತ, ಸಂಸ್ಕೃತಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡವನ್ನು ನೋಡಿ ಮಂತ್ರಮುಗ್ಧರಾದರು. ಈಗ ನಾವು ಅದೇ ಅನುಭೂತಿಯನ್ನು ಹೊಂದಿದ್ದೇವೆ.
ಪ್ರಶ್ನೆ: ನಿಮಗೆ ಭಾರತಕ್ಕೆ ಬರುವ ಇಚ್ಛೆ ಹಿಂದೆ ಇತ್ತೇ?
ಬಾರ್ಬರಾ: ನಾವು ಚಿಕ್ಕವರಾಗಿದ್ದಾಗ ನನ್ನ ಅಜ್ಜ (ಭಾರತದಲ್ಲೇ ಜನಿಸಿ ದ್ದವರು) ಅವರ ಅಜ್ಜ ಕಿಟ್ಟೆಲ್ ಅವರ ಕೆಲಸದ ಬಗ್ಗೆ, ಮಂಗಳೂರಿನ ಮಹತ್ವದ ಬಗ್ಗೆ ಹೇಳುತ್ತಿದ್ದರು. ಆಗ ಇಲ್ಲಿಗೆ ಬರುವ ಬಗ್ಗೆ ಕನಸು ಕಂಡಿದ್ದೆ. ಈಗ ಬಂದಿದ್ದೇನೆ. ಇಲ್ಲಿನ ಪ್ರಶಾಂತ ವಾತಾವರಣ, ಪ್ರೀತಿ ತೋರುವ ಜನರು ನಿಜಕ್ಕೂ ಮೆಚ್ಚುಗೆಯಾಗಿದ್ದಾರೆ.
ಪ್ರಶ್ನೆ: ಕಿಟ್ಟೆಲ್ ಇಲ್ಲಿ ಮಾಡಿರುವ ಕೆಲಸದ ಬಗ್ಗೆ ?
ಪ್ಯಾಟ್ರಿಕ್: ನಮ್ಮ ಹಿರಿಯರಾದ ಫರ್ಡಿನಾಂಡ್ ಕಿಟ್ಟೆಲ್ ಕನ್ನಡ ಭಾಷೆ, ವ್ಯಾಕರಣಕ್ಕಾಗಿ ಇಷ್ಟೆಲ್ಲ ಕೆಲಸ ಮಾಡಿದ್ದ ರೆಂಬ ಅರಿವಿರಲಿಲ್ಲ. ಧಾರವಾಡದಲ್ಲಿ ಅವರ ಪ್ರತಿಮೆ ಅನಾವರಣ ಆಗಿದೆ. ಈಗ ಮಂಗಳೂರಿನಲ್ಲಿ ಆಗುತ್ತಿದೆ. ಬೆಂಗಳೂರಿನಲ್ಲಿ ಅವರ ಹೆಸರಿನ ಫಾಂಟ್ ಬಿಡುಗಡೆಯಾಗಲಿಕ್ಕಿದೆ. ಕಿಟ್ಟೆಲ್ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳಿವೆ, ಅವರನ್ನು ಇಷ್ಟೆಲ್ಲ ಪ್ರೀತಿಸುವವರಿದ್ದಾರೆ ಎಂಬುದನ್ನು ಅರಿತು ಖುಷಿಯಾಗಿದೆ.
ಪ್ರಶ್ನೆ: ಕಿಟ್ಟೆಲ್ ಅವರ ಯಾವ ಅಮೂಲ್ಯ ವಸ್ತುಗಳು ನಿಮ್ಮಲ್ಲಿವೆ ?
ಕಿಟ್ಟೆಲ್ ಅವರು ಚಿಕ್ಕಂದಿನಲ್ಲಿ ಬಳಸುತ್ತಿದ್ದ, ಅವರ ಹಲ್ಲಿನ ಗುರುತಿರುವ ಬೆಳ್ಳಿಯ ಚಮಚ ನಮ್ಮಲ್ಲಿರುವ ಅವರ ಅಮೂಲ್ಯ ನೆನಪು. ಅದನ್ನು ಕಾಪಿಟ್ಟಿದ್ದೇವೆ. ಅವರು ಬಳಸುತ್ತಿದ್ದ ಕನ್ನಡಕ ನಮ್ಮ ಬಂಧುವೊಬ್ಬರ ಬಳಿ ಇದೆ, ಕೆಲವು ಪತ್ರಗಳು, ಪುಸ್ತಕಗಳೂ ಇವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.