ಯಜಮಾನನನ್ನು ಕಟ್ಟಿ ಹಾಕಿ ದರೋಡೆ ಮನೆಯಿಂದ ಕದ್ದು, ಎಟಿಎಂನಿಂದ ಡ್ರಾ!
Team Udayavani, Nov 30, 2017, 10:13 AM IST
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಪಟ್ರಮೆ ರಸ್ತೆಯ ದೇಂತನಾಜೆಯಲ್ಲಿ ಮಂಗಳವಾರ ರಾತ್ರಿ ಮನೆಗೆ ನುಗ್ಗಿದ ದರೋಡೆಕೋರರ ತಂಡ ಮನೆಯ ಯಜಮಾನನನ್ನು ಕಟ್ಟಿ ಹಾಕಿ ದರೋಡೆ ಮಾಡಿದೆ.
ಒಬ್ಬಂಟಿ ಮೇಲೆ ದಾಳಿ
ಲಕ್ಷ್ಮೀನಾರಾಯಣ ನೂರಿತ್ತಾಯರ ಪುತ್ರ ನಾಗೇಂದ್ರ ಪ್ರಸಾದ್ ಒಬ್ಬರೇ ವಾಸಿಸುತ್ತಿದ್ದು ಅವರ ಮನೆಯಲ್ಲಿ ದರೋಡೆ ನಡೆದಿದೆ. ಮಂಗಳವಾರ ರಾತ್ರಿ 10.30ಕ್ಕೆ ಸುಮಾರಿಗೆ ಪ್ರಸಾದ್ ಅವರು ಪೇಟೆಯಿಂದ ಮನೆಗೆ ಬಂದಿದ್ದಾರೆ. ಮನೆಯ ಬೀಗ ತೆಗೆದು ಒಳಗೆಹೋಗುತ್ತಿ ದ್ದಂತೆಯೇ ಮನೆಯ ಸಮೀಪವೇ ಅಡಗಿ ಕುಳಿತಿದ್ದ ದರೋಡೆಕೋರರು ಪ್ರಸಾದ್ ಮೇಲೆ ದಾಳಿ ನಡೆಸಿದ್ದಾರೆ.
ಕೈಯಲ್ಲಿ ಚಾಕು ಹಾಗೂ ರಿವಾಲ್ವರ್ ಹಿಡಿದಿದ್ದ ತಂಡ ಪ್ರಸಾದ್‌ರನ್ನು ಹಿಡಿದು ಮನೆಯ ಒಳಗಿದ್ದ ಕುರ್ಚಿಯೊಂದಕ್ಕೆ ಕಟ್ಟಿ ಹಾಕಿದ್ದಾರೆ. ಕೈಗಳೆರಡನ್ನೂ ಬಟ್ಟೆಯಿಂದ ಕಟ್ಟಿ ಕಾಲುಗಳನ್ನು ಕುರ್ಚಿಯ ಕಾಲಿಗೆ ಸೇರಿಸಿ ಕಟ್ಟಿ ಅದರ ಮೇಲೆ ಪ್ಲಾಸ್ಟರ್ ಹಾಕಿದ್ದಾರೆ. ಬಳಿಕ ಇಡೀಮನೆಯನ್ನು ಜಾಲಾಡಿದ್ದಾರೆ.
ದರೋಡೆ
ದರೋಡೆಕೋರರು ಮನೆಯಲ್ಲಿದ್ದ 40 ಸಾವಿರ ರೂ. ನಗದು, ಸುಮಾರು 60 ಸಾವಿರ ರೂ.ಮೌಲ್ಯದ ಚಿನ್ನದ ಸರ, ಮೊಬೆ„ಲ್,ಎ.ಟಿ.ಎಂ ಕಾರ್ಡುಗಳನ್ನು ಅಪಹರಿಸಿದ್ದಾರೆ. ಹಣ ನೀಡುವಂತೆ ಇಲ್ಲದಿದ್ದರೆ ಕೊಲೆ ಮಾಡುವುದಾಗಿಯೂ ಪ್ರಸಾದರಿಗೆ ಬೆದರಿಕೆ ಹಾಕಿದೆ. ಚೂರಿ ಹಿಡಿದು ಎ.ಟಿ.ಎಂ ಕಾರ್ಡಿನ ಪಿನ್ ನಂಬರ್‌ಗಳನ್ನು ಪಡೆದುಕೊಂಡಿದ್ದಾರೆ ಎಂದು ಪ್ರಸಾದ್ ಪೊಲೀಸರಿಗೆ ತಿಳಿಸಿದ್ದಾರೆ.
ಪರದಾಟ
ಪ್ರಸಾದರನ್ನು ಕಟ್ಟಿ ಹಾಕಿಯೇ ದರೋಡೆಕೋರರು ತೆರಳಿದ್ದು ಬಳಿಕ ಅವರು ಹಲ್ಲಿನಿಂದ ಕಚ್ಚಿಯೇ ಕೈಗೆ ಕಟ್ಟಿದ್ದ ಬಟ್ಟೆಯನ್ನು ಬಿಚ್ಚಿದ್ದಾರೆ. ಇದಕ್ಕಾಗಿ ಸುಮಾರು ಮೂರು ಗಂಟೆಗೂ ಹೆಚ್ಚು ಸಮಯ ಪರದಾಡಿದ್ದಾರೆ. ಬಳಿಕ ನೆರೆಯ ಮನೆಗೆ ತೆರಳಿ ಮಾಹಿತಿ ನೀಡಿ, ಧರ್ಮಸ್ಥಳ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ.
ತನಿಖೆ
ಘಟನಾ ಸ್ಥಳಕ್ಕೆ ಬಂಟ್ವಾಳ ಎ.ಎಸ್‌ಪಿ ಡಾ| ಅರುಣ್‌ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ. ಸ್ಥಳಕ್ಕೆ ಶ್ವಾನದಳವನ್ನು ಕರೆಸಲಾಗಿದ್ದು ಅದು ಮನೆಯಿಂದ ಸ್ವಲ್ಪ ದೂರ ಮುಖ್ಯ ರಸ್ತೆಯಲ್ಲಿ ಹೋಗಿ ಹಿಂತಿರುಗಿದೆ. ಬೆರಳಚ್ಚು ತಜ್ಞರೂ ಸ್ಥಳಕ್ಕೆ ಆಗಮಿಸಿ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಧರ್ಮಸ್ಥಳ ಪಟ್ರಮೆ ರಸ್ತೆಗೆ ತಾಗಿಕೊಂಡಿರುವ ಒಂಟಿ ಮನೆ ಇದಾಗಿದ್ದು ಮನೆಯಲ್ಲಿ ಇವರೊಬ್ಬರೇ ಇರುವ ಮಾಹಿತಿಯಿರುವವರು ಯಾರಾದರೂ ದರೋಡೆಕೋರರೊಂದಿಗೆ ಸಹಕರಿಸಿರಬಹುದು ಎಂದು ಪೋಲೀಸರು ಅನುಮಾನಿಸುತ್ತಿದ್ದಾರೆ. ತಂಡದ ಸದಸ್ಯರು ಹಿಂದಿಯಲ್ಲಿ ಮಾತನಾಡುತ್ತಿದ್ದರು ಎಂದು ಪ್ರಸಾದ್ ತಿಳಿಸಿದ್ದಾರೆ.
ಎಟಿಎಂ ಮೂಲಕ ಡ್ರಾ
ದರೋಡೆ ಕೋರರು ಅಲ್ಲಿಂದ ತೆರಳಿ ರಾತ್ರಿಯೇ ಅಪಹರಿಸಿದ್ದ ಎ.ಟಿ.ಎಂ ಕಾರ್ಡನ್ನು ಉಪಯೋಗಿಸಿ ಮೂವತ್ತು ಸಾವಿರ ನಗದನ್ನು ತೆಗೆದಿದ್ದಾರೆ. ಮತ್ತೂಂದು ಕಾರ್ಡನ್ನು ಉಪಯೋಗಿಸಿ ಬೆಳಿಗ್ಗೆ ರೂ. 40 ಸಾವಿರ ನಗದೀಕರಿಸಿರುವುದಾಗಯೂ ತಿಳಿದು ಬಂದಿದೆ. ದರೋಡೆಕೋರರು ಹಣ ಡ್ರಾ ಮಾಡಿರುವ ಎ.ಟಿ.ಎಂ. ಅನ್ನು ಪೊಲೀಸರು ಪತ್ತೆ ಹಚ್ಚಿದ್ದು ಅಲ್ಲಿನ ಸಿಸಿ ಕ್ಯೆಮಾರಾಗಳಲ್ಲಿ ದರೋಡೆಕೋರರ ಚಹರೆಗಳು ಪತ್ತೆಯಾಗಬಹುದೇ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.