ದೈವಸ್ಥಾನದಿಂದ ಕಳವು: ಸೆರೆ
Team Udayavani, Apr 24, 2018, 11:40 AM IST
ಮೂಲ್ಕಿ: ಬಪ್ಪನಾಡು ದೇವಸ್ಥಾನದ ಬಳಿ ಇರುವ ವರ್ತೆ ಪಂಜುರ್ಲಿ ದೈವಸ್ಥಾನದಲ್ಲಿ ಮಾ.27ರಿಂದ 31ರ ಅವಧಿಯಲ್ಲಿ ನಡೆದ ಬೆಳ್ಳಿಯ ವಸ್ತುಗಳ ಕಳವು ಪ್ರಕರಣದ ಆರೋಪಿಯನ್ನು ಮೂಲ್ಕಿ ಪೊಲೀಸರು ಸೊತ್ತು ಸಹಿತ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿ ಎಸ್. ನಾಗರಾಜ್ (30) ತಮಿಳುನಾಡಿನ ತಿರುಪೂರು ತಾಲೂಕಿನ ಅನುಪರಂಪಾಳಯಂ ನಿವಾಸಿಯಾಗಿದ್ದು, ಖಚಿತ ಮಾಹಿತಿ ಪಡೆದು ಅಲ್ಲಿಗೆ ತೆರಳಿದ ಮೂಲ್ಕಿ ಪೊಲೀಸರು ಬೆಳ್ಳಿಯ ಒಂದು ಖಡ್ಗ, 2 ಬೆಳ್ಳಿಯ ದೀಪ ಮತ್ತು ರಿಂಗ್ ಹಾಕಿರುವ ಬೆತ್ತದೊಂದಿಗೆ ಆತನನ್ನು ಬಂಧಿಸಿ ಮೂಲ್ಕಿಗೆ ಕರೆತಂದಿದ್ದಾರೆ.
ಕಮಿಷನರ್ ವಿಪುಲ್ ಕುಮಾರ್ ಮಾರ್ಗದರ್ಶನದಲ್ಲಿ ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್ ಅವರ ನಿರ್ದೇಶನದಂತೆ ಪಣಂಬೂರು ಎಸಿಪಿ ರಾಜೇಂದ್ರ ನೇತೃತ್ವದಲ್ಲಿ ಮೂಲ್ಕಿ ಇನ್ಸ್‌ಪೆಕ್ಟರ್ ಶ್ರೀಕಾಂತ್ ಕೆ., ಎಸ್.ಐ. ಶೀತಲ್ ಅಲಗೂರು, ಎ.ಎಸ್.ಐ. ಚಂದ್ರಶೇಖರ್, ಸಿಬಂದಿ ವರ್ಗದ ಧರ್ಮೇಂದ್ರ, ಅಣ್ಣಪ್ಪ, ಸುರೇಶ್, ಮಹಮ್ಮದ್ ಹುಸೇನ್, ಬಸವರಾಜ, ಮನೋಜ್ ಕುಮಾರ್‌ಮುಂತಾದವರು ಆತನನ್ನು ಬಂಧಿಸುವಲ್ಲಿ ಶ್ರಮಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ
Niveus Mangalore Marathon 2024: ನ.10: ನೀವಿಯಸ್ ಮಂಗಳೂರು ಮ್ಯಾರಥಾನ್
Mangaluru: ಡಿ. 7: ಮುಂಬಯಿಯಲ್ಲಿ ವಿಶ್ವ ಬಂಟರ ಸಮಾಗಮ
Mangaluru: ಮಕ್ಕಳ ಮಾರಾಟ, ಖರೀದಿಗೆ 5 ವರ್ಷ ಜೈಲು ಶಿಕ್ಷೆ
Mangaluru: ಎಲೆ ಚುಕ್ಕಿ ರೋಗ ಬಾಧಿತ ಅಡಿಕೆ ಕೃಷಿಕರಿಗೆ ನೆರವು: ಕೇಂದ್ರಕ್ಕೆ ಮನವಿ
MUST WATCH
ಹೊಸ ಸೇರ್ಪಡೆ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ
Bengaluru: ದಾನದಲ್ಲಿ ಬೆಂಗಳೂರು ದೇಶದಲ್ಲೇ ನಂ.3
Wandse, ಚಿತ್ತೂರು, ಇಡೂರು: ಹೊಂಡಗಳಿಗೆ ಮುಕ್ತಿ ಕೊಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.