![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Jan 29, 2020, 6:33 AM IST
ಮಹಾನಗರ: ಮಂಗಳೂರು ಕೇಂದ್ರ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ರೈಲ್ವೇ ಇಲಾಖೆ ಮತ್ತೂಂದು ಪ್ರಮುಖ ಹೆಜ್ಜೆ ಇಡುತ್ತಿದೆ. ಪ್ರಯಾಣಿಕರಿಂದ ತುಂಬಿ ಸ್ಥಳಾವಕಾಶದ ಕೊರತೆ ಎದುರಿಸುತ್ತಿರುವ ಟಿಕೆಟ್ ಕೌಂಟರ್‌ಗಳ ಬದಲಿಗೆ ಸುವ್ಯವಸ್ಥಿತವಾದ ಟಿಕೆಟ್ ಕೌಂಟರ್‌ಗಳಿಗಾಗಿ ಪ್ರತ್ಯೇಕ ಕಟ್ಟಡ ನಿರ್ಮಿಸಲಾಗುತ್ತಿದೆ. ಶೀಘ್ರದಲ್ಲೇ ಟಿಕೆಟ್ ಕೌಂಟರ್‌ಗಳು ಹೊಸ ಕಟ್ಟಡಕ್ಕೆ ಸ್ಥಳಾಂತರವಾಗುವ ನಿರೀಕ್ಷೆಗಳಿವೆ.
ತಳ ಅಂತಸ್ತು, ನೆಲ ಅಂತಸ್ತು ಮತ್ತು ಮೇಲಿನ ಅಂತಸ್ತು ಸಹಿತ ಒಟ್ಟು ಸುಮಾರು 9,000 ಚದರ ಅಡಿ ವಿಸ್ತೀರ್ಣದ ಈ ಕಟ್ಟಡದಲ್ಲಿ ಒಟ್ಟು 6 ಟಿಕೆಟ್ ಕೌಂಟರ್‌ಗಳನ್ನು ಆರಂಭಿಸುವ ಯೋಜನೆ ಇದೆ. ಅಂಗವಿಕಲರಿಗಾಗಿಯೇ ಪ್ರತ್ಯೇಕ ಕೌಂಟರ್ ಇರಲಿದೆ. ಇದರ ಜತೆ ಕ್ರೀವ್ ಬುಕ್ಕಿಂಗ್, ಟಿ.ಟಿ.ಗಳ ವಿಶ್ರಾಂತಿ ಕೊಠಡಿ ಕೂಡ ಈ ಕಟ್ಟಡದಲ್ಲಿರುತ್ತವೆ. ಒಟ್ಟು ಅಂದಾಜು 2.8 ಕೋ.ರೂ. ವೆಚ್ಚದಲ್ಲಿ ಕಟ್ಟಡ, ಇತರ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಕಟ್ಟಡ ಬಹುತೇಕ ಪೂರ್ಣಗೊಂಡಿದ್ದು, ಇತರೆ ಕಾಮಗಾರಿಗಳು ಇನ್ನಷ್ಟೇ ನಡೆಯಬೇಕಿದೆ.
ಮತ್ತೂಂದು ಪಾದಚಾರಿ ಮೇಲ್ಸೇತುವೆ
ಹೊಸ ಟಿಕೆಟ್ ಕೌಂಟರ್ ಕಟ್ಟಡಕ್ಕೆ ಪೂರಕ ವಾಗಿ ಮತ್ತೂಂದು ಪಾದಚಾರಿ ಮೇಲ್ಸೇತುವೆ ನಿರ್ಮಿಸಲಾಗಿದೆ. ಅಲ್ಲದೆ ಇದನ್ನು ನೇರವಾಗಿ ನಿಲ್ದಾಣದ ಹೊರಭಾಗಕ್ಕೆ ಸಂಪರ್ಕ ಕಲ್ಪಿಸಲು ನಿರ್ಧರಿಸಲಾಗಿದೆ. ಪ್ಲಾಟ್‌ಫಾರಂನ ಒಳಗೆ ಬಾರದೆ ನೇರವಾಗಿಯೇ ಮತ್ತೂಂದು ಭಾಗದ ಪ್ಲಾಟ್‌ಫಾರಂಗೆ ತೆರಳಲು ಇದು ಅನುಕೂಲವಾಗಲಿದೆ. ಇದೇ ಭಾಗದಲ್ಲಿ ಎಸ್ಕಲೇಟರ್ ಅಳವಡಿಸುವ ಯೋಜನೆಯೂ ಇದೆ. ಈಗ ಇರುವ ಒಂದು ಪ್ರವೇಶ ದ್ವಾರದ ಜತೆಗೆ ಇನ್ನೊಂದು ಪ್ರವೇಶ ದ್ವಾರ ನಿರ್ಮಿಸಲು ರಸ್ತೆಯನ್ನು ಸುಮಾರು 5.5 ಮೀ. ನಷ್ಟು ವಿಸ್ತರಿಸಲು ನಿರ್ಧರಿಸಲಾಗಿದೆ. ಆದರೆ ಯೋಜನೆ ಅಂತಿಮ ರೂಪ ಪಡೆದಿಲ್ಲ ಎಂದು ಮೂಲಗಳು ತಿಳಿಸಿವೆ.
ಒತ್ತಡ ಕಡಿಮೆಯಾದರೆ ಯೋಜನೆ ಬದಲು?
ಈಗ ಆನ್‌ಲೈನ್/ಆ್ಯಪ್ ಬಳಸಿ ಟಿಕೆಟ್ ಬುಕಿಂಗ್ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದಾಗಿ ಟಿಕೆಟ್ ಕೌಂಟರ್‌ಗಳಲ್ಲಿ ರಶ್ ಕಡಿಮೆಯಾದರೆ ಪ್ಲಾಟಫಾರಂ ಟಿಕೆಟ್ ಮತ್ತು ರಿಸರ್ವೇಶನ್ ಅಲ್ಲದ ಬುಕಿಂಗ್ ಕೌಂಟರ್‌ಗಳು ಮಾತ್ರ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿವೆ ಎಂದು ತಿಳಿಸಿದೆ.
ಆನ್‌ಲೈನ್ ಬುಕ್ಕಿಂಗ್ ಹೆಚ್ಚಳ
ಪ್ರಸ್ತುತ ರಿಸರ್ವೇಶನ್ ಬುಕ್ಕಿಂಗ್‌ಗೆ 2 ಕೌಂಟರ್‌ಗಳಿವೆ. ರಶ್ ಹೆಚ್ಚಾದಾಗ ಮತ್ತೂಂದು ಕೌಂಟರ್ ಆರಂಭಿಸಲಾಗುತ್ತದೆ. ಆದರೆ ಈಗ ಆನ್‌ಲೈನ್‌ನಲ್ಲಿ ಬುಕಿಂಗ್ ಹೆಚ್ಚುತ್ತಿದೆ. ರಿಸರ್ವೇಶನ್ ಬುಕಿಂಗ್ ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವ ಯೋಜನೆ ಇದೆ. ಆದರೆ ಜನರಲ್ ಟಿಕೆಟ್ ಬುಕಿಂಗ್ ಕೂಡ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳಿಸುವುದು ಅಂತಿಮವಾಗಿಲ್ಲ. ಪ್ರಯಾಣಿಕರ ಅನುಕೂಲತೆಗಳಿಗೆ ಪೂರಕವಾಗಿ ಸೌಕರ್ಯ ಒದಗಿಸಲಾಗುತ್ತಿದೆ.
-ಕಿಶನ್ ಕುಮಾರ್, ಡೆಪ್ಯುಟಿ ಸ್ಟೇಷನ್ ಮಾಸ್ಟರ್, ಕೇಂದ್ರ ರೈಲು ನಿಲ್ದಾಣ, ಮಂಗಳೂರು
You seem to have an Ad Blocker on.
To continue reading, please turn it off or whitelist Udayavani.