ಬೀದಿ ದೀಪ ಎಲ್‌ಇಡಿಯಾದರೆ ಅರ್ಧ ಕೋಟಿಗೂ ಹೆಚ್ಚು ಉಳಿತಾಯ !
Team Udayavani, Nov 14, 2021, 4:00 AM IST
ಮಹಾನಗರ: ನಗರದ ಬೀದಿ ದೀಪಗಳನ್ನೆಲ್ಲಾ ಎಲ್‌ಇಡಿ ಬಲ್ಬುಗಳಿಗೆ ಬದ ಲಾಯಿಸ ಲಾಗುತ್ತಿದೆ. ಯೋಜಿತ ಲೆಕ್ಕಾಚಾರದಂತೆ ನಡೆದರೆ ಆರು ತಿಂಗಳೊಳಗೆ ಈ ಪರಿವರ್ತನೆ ಸಾಧ್ಯವಾಗ ಲಿದೆ. ಆಗ ಪಾಲಿಕೆಗೆ ಪ್ರತಿ ತಿಂಗಳಿಗೆ ಒಟ್ಟೂ ಸುಮಾರು 50 ಲಕ್ಷ ರೂ. ಉಳಿತಾಯವಾಗಲಿದೆ.
ನಗರದ 60 ವಾರ್ಡ್‌ಗಳ ಬೀದಿದೀಪಗಳ ಎಲ್ ಇ ಡಿ ಪರಿವರ್ತನೆಗೆ 60 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ. ಟೆಂಡರ್ ಪಡೆದ ಸಂಸ್ಥೆ ಏಳು ವರ್ಷಗಳ ಕಾಲ ನಿರ್ವಹಿಸಬೇಕು. ಅದಕ್ಕೆಂದು 7 ವರ್ಷಗಳವರೆಗೆ ಪಾಲಿಕೆಯಿಂದ ತಿಂಗಳಿಗೆ ಸುಮಾರು 80 ಲಕ್ಷ ರೂ. ಇಎಂಐ ಸಂದಾ ಯವಾಗಲಿದೆ. ಸದ್ಯ ಬೀದಿ ದೀಪಗಳ ಬಾಬ್ತು ಪಾಲಿಕೆ ತಿಂಗಳಿಗೆ 40 ಲಕ್ಷ ರೂ. ನಿರ್ವಹಣ ವೆಚ್ಚ, 1.50 ಕೋಟಿ ರೂ. ವಿದ್ಯುತ್ ಬಿಲ್ ಪಾವತಿಸುತ್ತಿದೆ. ಈ ದೀಪಗಳೆಲ್ಲಾ ಎಲ್‌ಇಡಿಗೆ ಬದಲಾದರೆ ಸುಮಾರು 50ರಿಂದ 60 ಲಕ್ಷ ರೂ.ನಷ್ಟು ಬಿಲ್ ಬರಬಹುದು ಎಂದು ಅಂದಾಜಿಸಲಾಗಿದೆ.
ಈಗಾಗಲೇ ಝಗಮಗಿಸಬೇಕಿತ್ತು:
ಟೆಂಡರ್ ಪ್ರಕಾರ ಕಾಮಗಾರಿ ಈ ವರ್ಷಾಂತ್ಯಕ್ಕೆ ಪೂರ್ಣಗೊಳ್ಳಬೇಕಿತ್ತು. ಈಗಾಗಲೇ ಪಣಂಬೂರು ಬೆಂಗ್ರೆ ಮತ್ತು ಬೆಂಗ್ರೆ ವಾರ್ಡ್‌ಗಳಲ್ಲಿ ಬಹುತೇಕ ಪೂರ್ಣಗೊಂಡಿದೆ. ಇನ್ನು ಸುಮಾರು 60,000ದಷ್ಟು ಎಲ್‌ಇಡಿ ಬಲ್ಬ್ ಅಳವಡಿಸಬೇಕಿದೆ.
ಆಗ ಬಿಲ್‌ನಲ್ಲಿ ಒಂದಿಷ್ಟು ಉಳಿತಾಯವಾಗಲಿದೆ. ನಿರ್ವಹಣೆಗೆ 80 ಲಕ್ಷ ರೂ. ಪಾವತಿಸಿದರೂ ವಿದ್ಯುತ್ ಬಿಲ್‌ನ ಉಳಿತಾಯ ಹೆಚ್ಚುವರಿ ನಿರ್ವಹಣಾ ವೆಚ್ಚವನ್ನು ಸರಿದೂಗಿಸಲಿದೆ. ಒಟ್ಟು ಈ ಪರಿವರ್ತನೆಯಿಂದ ಸುಮಾರು 50 ರಿಂದ 60 ಲಕ್ಷ ರೂ. ನಷ್ಟು ತಿಂಗಳಿಗೆ ಉಳಿತಾಯ ನಿರೀಕ್ಷಿಸಲಾಗಿದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ 60 ವಾರ್ಡ್‌ಗಳಲ್ಲಿ ಒಟ್ಟು 67,000 ಪೈಕಿ ಆಯ್ದ ವಾರ್ಡ್‌ಗಳಲ್ಲಿ ಸುಮಾರು 7,000 ಎಲ್‌ಇಡಿ ಬೀದಿ ದೀಪ ಅಳವಡಿಸಲಾಗಿದೆ. ಆದರೆ ಕೆಲವು ಉಪಕರಣಗಳ ಕೊರತೆಯಿಂದ ಕಾಮಗಾರಿ ಕೊಂಚ ವಿಳಂಬವಾಗಿತ್ತು. ಈ ಸಂಬಂಧ ಟೆಂಡರ್ ವಹಿಸಿದ ಸಂಸ್ಥೆಗೆ ವಿವರಣೆ ಕೋರಿ ಪಾಲಿಕೆ ನೋಟಿಸ್ ಕೂಡ ನೀಡಿತ್ತು. ಟೆಂಡರ್ ಪಡೆದ ಸಂಸ್ಥೆಯ ಪ್ರಮುಖರ ಜತೆ ಶಾಸಕ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಹಲವು ಸಭೆ ನಡೆಸಿ, ಕಾಮಗಾರಿ ಚುರುಕುಗೊಳಿಸುವಂತೆ ಆದೇಶಿಸಲಾಗಿದೆ. ಎಲ್‌ಇಡಿ ಬೀದಿ ದೀಪಗಳುಳ್ಳ ವಿದ್ಯುತ್ ಕಂಬ ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸುವ ಚಿಂತನೆ ನಡೆಯುತ್ತಿದೆ. ಇದರಿಂದ ನಿರ್ವಹಣೆ ಸುಲಭ. ಈ ಕುರಿತು ಸ್ಮಾರ್ಟ್‌ಸಿಟಿ, ಸ್ಥಳೀಯಾಡಳಿತದಿಂದ ಮೆಸ್ಕಾಂನ ಅನುಮತಿ ಪಡೆಯಲಾಗುತ್ತಿದೆ.
ಅಭಿವೃದ್ಧಿ ಕಾಮಗಾರಿಗೆ ಬಳಕೆ:
ನಗರದ ಬೀದಿ ದೀಪಗಳನ್ನು ಎಲ್‌ಇಡಿ ಬಲ್ಬ್ ಆಗಿ ಪರಿವರ್ತಿಸುವ ಕಾಮಗಾರಿ ಆರಂಭವಾಗಿದೆ. ಇದರಿಂದ ಪಾಲಿಕೆಗೆ ತಿಂಗಳಿಗೆ 50 ಲಕ್ಷ ರೂ.ಗೂ ಹೆಚ್ಚು ಹಣ ಉಳಿತಾಯವಾಗಲಿದೆ. ಈ ಹಣವನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಬಹುದು. ಕಾಮಗಾರಿಗೆ ಮತ್ತಷ್ಟು ವೇಗ ನೀಡುವಂತೆ ಟೆಂಡರ್ ಮತ್ತು ಉಪ ಟೆಂಡರ್ ವಹಿಸಿದ ಸಂಸ್ಥೆಯವರಿಗೆ ಸೂಚಿಸಲಾಗಿದೆ. – ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್
-ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Honnavar;ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವತಿಯರ ರಕ್ಷಣೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.