ರಾಷ್ಟ್ರೀಯ ಹೆದ್ದಾರಿಯಲ್ಲಿ ಅರೆಬರೆ ಬೆಳಕು: ದುರಸ್ತಿ ಏಕಿಲ್ಲ?
Team Udayavani, May 20, 2018, 10:59 AM IST
ಪಣಂಬೂರು : ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೂಳೂರಿನಿಂದ ಪಣಂಬೂರು, ಸುರತ್ಕಲ್ ವರೆಗೆ ಬೀದಿ ದೀಪದ ನಿರ್ವಹಣೆಯಿಲ್ಲದೆ ಅರೆ ಬರೆ ಬೆಳಗುತ್ತಿದೆ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಪ್ರಖರವಾದ ಬೆಳಕನ್ನು ನೀಡುವ ಎಲ್‌ಇಡಿ ಲೈಟ್‌ಗಳನ್ನು ಹೆದ್ದಾರಿಯಲ್ಲಿ ಅಳವಡಿಸಲಾಗಿದೆ. ಆದರೆ ಕಳೆದ ಕೆಲವು ತಿಂಗಳಿನಿಂದ ನಿರ್ವಹಣೆಯಿಲ್ಲದೆ ಕೆಲವೆಡೆ ಬೀದಿ ದೀಪ ಉರಿದರೆ, ಇನ್ನು ಕೆಲವಡೆ ಕತ್ತಲು ಆವರಿಸಿದೆ.
ನದಿಗೆ ಬೀಳುವ ಆತಂಕ
ಪ್ರಮುಖವಾಗಿ ಅಪಘಾತವಲಯವಾದ ಕೂಳೂರು ಮೇಲ್ಸೇತುವೆಯಲ್ಲಿ ದೀಪ ಉರಿಯದೆ ಅಪಾಯವಾಗುವ ಸಾಧ್ಯತೆಯಿದೆ. ಕಳೆದ ಬಾರಿ ಇಲ್ಲಿ ಅಪಘಾತವಾದಾಗ ತಡೆಗೋಡೆ ಕುಸಿದು ಬಿದ್ದಿದ್ದು ಇನ್ನೂ ದುರಸ್ತಿಯಾಗಿಲ್ಲ. ದ್ವಿಚಕ್ರ, ಘನವಾಹನಗಳು ಸ್ವಲ್ಪ ಎಚ್ಚರ ತಪ್ಪಿದರೂ ಪಲ್ಗುಣಿ ನದಿಗೆ ಬೀಳುವ ಆತಂಕವಿದೆ. ಹೀಗಾಗಿ ಇಲ್ಲಿನ ಬೀದಿ ದೀಪವನ್ನು ಮಳೆಗಾಲದ ಮುನ್ನ ದುರಸ್ತಿ ಪಡಿಸಿ ಬೆಳಗುವಂತೆಮಾಡಬೇಕಾಗಿದೆ.
ಪಾದಚಾರಿಗಳಿಗೆ ಭದ್ರತೆ ಇಲ್ಲ
ಕೈಗಾರಿಕಾ ಪ್ರದೇಶದ ಹೆದ್ದಾರಿಯಲ್ಲಿ ಹೈಮಾಸ್ಟ್ ಅಳವಡಿಸಬೇಕಿದೆ. ಸಾವಿರಾರು ಕಾರ್ಮಿಕರು ರಾತ್ರಿ ಸಮಯ ಇಲ್ಲಿ ಆತಂಕದಿಂದಲೇ ರಸ್ತೆ ದಾಟಬೇಕಾಗಿದೆ. ವೇಗವಾಗಿ ಬರುವ ವಾಹನಗಳಿಗೆ ಪಾದಚಾರಿಗಳು ಕತ್ತಲಲ್ಲಿ ಕಾಣುವುದು ಕಷ್ಟ. ಅಲ್ಲದೆ ಇಲ್ಲಿ ಯಾವುದೇ ಭದ್ರತೆಯೂ ಇಲ್ಲ. ರಸ್ತೆ ಬದಿ ನಿಂತ ಕಾರ್ಮಿಕರನ್ನು ದೋಚುವ ತಂಡಗಳು ಬೀದಿ ದೀಪದ ಅವ್ಯವಸ್ಥೆಯ ಲಾಭ ಪಡೆದುಕೊಳ್ಳುವ ಸಾಧ್ಯತೆಯೂ ಇದೆ. ಹಿಂದೆ ಇಂತಹ ಪ್ರಕರಣಗಳು ಆದ ಬಗ್ಗೆ ಠಾಣೆಯಲ್ಲಿ ದೂರುಗಳು ದಾಖಲಾಗಿವೆ.
ದುರಸ್ತಿಗೆ ಸೂಚಿಸಲಾಗುವುದು
ಬೀದಿ ದೀಪಗಳ ನಿರ್ವಹಣೆಯನ್ನು ಗುತ್ತಿಗೆದಾರರಿಗೆ ನೀಡಲಾಗಿದೆ. ಪ್ರತೀ ಬಾರಿ ದೂರುಗಳು ಬಂದಾಗ ದುರಸ್ತಿಗೆ ಸೂಚಿಸಲಾಗಿದೆ. ಯಾವ ಭಾಗದಲ್ಲಿ ಹಾಳಾಗಿದೆ ಅಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗುವುದು.
– ವಿಜಯ್ ಸ್ಯಾಮ್ಸನ್,
ಹೆದ್ದಾರಿ ಪ್ರಾಧಿಕಾರದ ಅಧಿಕಾರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.