ಆದರ್ಶವಂತರಾಗಿ ಸಮುದಾಯ ಬಲಗೊಳಿಸಿ
Team Udayavani, Nov 30, 2017, 3:27 PM IST
ಪುತ್ತೂರು: ಸಣ್ಣದಿರಲಿ, ದೊಡ್ಡದಿರಲಿ ಏಕ ಮನಸ್ಸಿನ, ಹೃದಯ ವಂತ ಸಮುದಾಯ ಇರಬೇಕು. ಇದರಿಂದ ಬಲಿಷ್ಠ ಸಮಾಜ ರೂಪುಗೊಳ್ಳುತ್ತದೆ ಎಂದು ಸಂತ ಫಿಲೋಮಿನಾ ಕಾಲೇಜ್‌ನ ಕ್ಯಾಂಪಸ್ ನಿರ್ದೇಶಕ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೇರೋ ಹೇಳಿದರು. ಬುಧವಾರ ಮರೀಲು ಸೇಕ್ರೆಡ್ ಹಾರ್ಟ್ ಚರ್ಚ್ ವಾರ್ಷಿಕ ಮಹೋತ್ಸವದ ದಿವ್ಯ ಬಲಿಪೂಜೆಯಲ್ಲಿ ಬೈಬಲನ್ನು ವಾಚಿಸಿ ಸಂದೇಶ ನೀಡಿದರು.
ದೇವರ ಮೇಲಿನ ಭಕ್ತಿಯಂತೆ ಸಮಾಜದ ಇತರರ ಮೇಲೆ ಪ್ರೀತಿ ತೋರಿಸಬೇಕು. ತಂದೆ- ತಾಯಿ, ಹಿರಿಯರು- ಕಿರಿಯರನ್ನು ಗೌರವಿಸಿದಾಗ ಪವಿತ್ರ ಕುಟುಂಬ ನಿರ್ಮಾಣವಾಗುತ್ತದೆ. ಹಿರಿಯರನ್ನು ಗೌರವಿಸದ ಕುಟುಂಬದಲ್ಲಿ ಸಫಲತೆ ಕಾಣಲು ಸಾಧ್ಯವಿಲ್ಲ. ಮಾತ್ರವಲ್ಲ ಸಮಾಜದಲ್ಲಿ ಆದರ್ಶರು ಎನಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಪ್ರೀತಿ, ಕರುಣೆ ಇರಲಿ
ಸಮಾಜದಲ್ಲಿ ಯಾರನ್ನೂ ದೂರುವ ಸ್ವಭಾವ ಮೈಗೂಡಿಸಿಕೊಳ್ಳಬಾರದು. ಪ್ರತಿ ಮನುಷ್ಯರಲ್ಲೂ ಪ್ರೀತಿ, ಕರುಣೆ ತೋರಿಸಬೇಕು. ಕ್ರೈಸ್ತ ಸಮುದಾಯದಲ್ಲಿ ಭಕ್ತರ ಕೂಡುವಿಕೆಗೆ ಪವಿತ್ರ ಸಭೆ ಎಂದು ಕರೆಯಲಾಗುತ್ತದೆಯೇ ವಿನಾ ಪವಿತ್ರ ಪಂಗಡ ಎಂದಲ್ಲ. ಈ ಪವಿತ್ರ ಸಭೆಯಲ್ಲಿ ಕ್ರೈಸ್ತರು ಪರಸ್ಪರ ಆದರ್ಶವಂತರಾಗಿ ಬಾಳಿದಾಗ ಚರ್ಚ್ ಆಗಲಿ, ಕುಟುಂಬವಾಗಲಿ, ಸಮುದಾಯವಾಗಲಿ ಬಲವರ್ಧನೆಗೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಮರೀಲು ಚರ್ಚ್‌ಗೆ ಸಂಬಂಧಪಟ್ಟ ಧರ್ಮಗುರು, ಪ್ರಸ್ತುತ ಮಂಗಳೂರಿನ ಜೆಪ್ಪು ಚರ್ಚ್‌ನಲ್ಲಿ ಪ್ರಧಾನ ಧರ್ಮಗುರು ಹಾಗೂ ಸೆಮಿನರಿಯ ಪ್ರಾಧ್ಯಾಪಕ ವಂ| ನೆಲ್ಸನ್ ಡಿ’ಅಲ್ಮೇಡಾ ಪ್ರಧಾನ ದಿವ್ಯ ಬಲಿಪೂಜೆ ನೆರವೇರಿಸಿದರು. ಪುತ್ತೂರು ವಲಯದ ಪ್ರಧಾನ ಧರ್ಮಗುರು, ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂ| ಅಲ್ಮೇಡಾ ಜಾನ್ ಪಿಂಟೋ, ಹಿರಿಯರಾದ ವಲೇರಿಯನ್ ಮಸ್ಕರೇನ್ಹಸ್ ಮಿತ್ತೂರು, ಸಂತ ಫಿ ಲೋಮಿನಾ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ವಂ| ಸುನೀಲ್ ಜಾರ್ಜ್ ಡಿ’ಸೋಜಾ, ಬನ್ನೂರು ಸಂತ ಅಂತೋನಿ ಚರ್ಚ್‌ನ ಪ್ರಧಾನ ಧರ್ಮಗುರು ವಂ| ಪ್ರಶಾಂತ್ ಫೆರ್ನಾಂಡಿಸ್, ಸಹಾಯಕ ಧರ್ಮಗುರು ವಂ| ಬಾಲ್ತಜಾರ್ ಪಿಂಟೋ, ಪಂಜ ಚರ್ಚ್‌ನ ಧರ್ಮಗುರು ವಂ| ಅನಿಲ್ ಲೋಬೋ, ಸುಳ್ಯ ಚರ್ಚ್‌ನ ಧರ್ಮಗುರು ವಂ| ವಿನ್ಸೆಂಟ್ ಡಿ’ಸೋಜಾ, ಸಂಪಾಜೆ ಚರ್ಚ್ ನ ಧರ್ಮಗುರು ವಂ| ವಿನ್ಸೆಂಟ್ ಅನಿಲ್ ಮಿನೇಜಸ್, ನಿಡ್ಪಳ್ಳಿ ಚರ್ಚ್‌ನ ಧರ್ಮಗುರು ವಂ| ಜೋನ್ ಡಿ’ಸೋಜಾ, ಉಪ್ಪಿನಂಗಡಿ ದೀನರ ನ್ಯಾಮಾತಾ ದೇವಾಲಯದ ಧರ್ಮಗುರು ವಂ| ರೊನಾಲ್ಡ್ ಪಿಂಟೋ, ಕೊಕ್ಕಡ ಚರ್ಚ್ ಇದರ ಧರ್ಮಗುರು ವಂ| ಸ್ಟ್ಯಾನಿ ಫೆರ್ನಾಂಡೀಸ್, ಹಾಸನದ ತಿಪಟೂರ್ ಚರ್ಚ್‌ನ ವಂ| ಜೋನ್ ಪಿರೇರಾ ಬಲಿಪೂಜೆಯಲ್ಲಿ ಪಾಲ್ಗೊಂಡರು.
ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ, ಮರೀಲು ಸೈಂಟ್ ಪೀಟರ್ ವಾಳೆಯ ಗುರಿಕಾರ ಪ್ರೊ| ಎಡ್ವಿನ್ ಡಿ’ಸೋಜಾ, ಕಾರ್ಯದರ್ಶಿ ಲಿಗೋರಿ ಸೆರಾವೋ, ಗಾಯನ ಮಂಡಳಿ, ವೇದಿ ಸೇವಕರು, ವಿವಿಧ ವಾಳೆಯ ಗುರಿಕಾರರಾದ ಮದಕ ಸೈಂಟ್ ಲಾರೆನ್ಸ್ ವಾಳೆಯ ಮೀರಾ ಟೆಲ್ಲಿಸ್, ಕಾಡುಮನೆ ಸೆಕ್ರೇಡ್ ಹಾರ್ಟ್ ವಾಳೆಯ ಆಲ್ಬರ್ಟ್ ಡಿ’ಸೋಜಾ, ಕರಿಯಾಲ್ ಸಂತ ತೋಮಸ್ ವಾಳೆಯ ಜೋನ್ ಸಿರಿಲ್ ರೊಡ್ರಿಗಸ್, ನೆಕ್ಕರೆ ಸಂತ ಜೋಸೆಫ್ ವಾಳೆಯ ಇಗ್ನೀಶಿಯಸ್ ಡಿ’ಕುನ್ಹಾ, ಕೂಡಮರ ಸಂತ ಪಾವ್ಲ್ ವಾಳೆಯ ಜೋಸೆಫ್ ಕುಟಿನ್ಹಾ, ಶಾಂತಿಗೋಡು ಸಂತ ಫ್ರಾನ್ಸಿಸ್ ಕ್ಸೇವಿಯರ್ ವಾಳೆಯ ಸಾಲ್ವದೊರ್ ಕುಟಿನ್ಹಾ ಮುಕ್ವೆ ವೆಲಂಕಣಿ ವಾಳೆಯ ವಲೇರಿಯನ್ ತೋರಸ್, ನರಿಮೊಗರು ಸೈಂಟ್ ಜಾಕೋಬ್ ವಾಳೆಯ ಹೆನ್ರಿ ಡಿ’ಸೋಜಾ, ಬೆದ್ರಾಳ ಸಂತ ಅಂತೋನಿ ವಾಳೆಯ ಹಿಲರಿ ಪಾ„ಸ್, ಕೆಮ್ಮಿಂಜೆ ಸೈಂಟ್ ತೆರೆಜಾ ವಾಳೆಯ ಸೆಲಿನ್ ರೆಬೆಲ್ಲೋ, ವೈಸಿಎಂ ಮತ್ತು ಸಂತ ವಿನ್ಸೆಂಟ್ ದೇ ಪಾವ್ಲ್ ಉಪಸ್ಥಿತರಿದ್ದರು. ಮರೀಲು ಚರ್ಚ್‌ನ ಧರ್ಮಗುರು ವಂ| ಫ್ರಾನ್ಸಿಸ್ ಅಸ್ಸಿಸಿ ಡಿ’ಅಲ್ಮೇಡ ವಂದಿಸಿದರು.
ತಪ್ಪು ಒಪ್ಪಿಕೊಳ್ಳಿ
ಮಾನವನು ಒಂದರ್ಥದಲ್ಲಿ ಪಾಪಿ ಅಥವಾ ನ್ಯೂನತೆಯಿಂದ ಕೂಡಿದವನು ಎಂದು ಹೇಳಲಾಗುತ್ತದೆ. ಪ್ರಭು ಯೇಸುಕ್ರಿಸ್ತರು ಪಾಪ ಮಾಡಿದವರನ್ನು ಕ್ಷಮಿಸಿ ಮಹೋನ್ನತ ಎನಿಸಿಕೊಂಡಿದ್ದಾರೆ. ನ್ಯೂನತೆ ಗುಣವುಳ್ಳ ಮಾನವನು ಯೇಸುಕ್ರಿಸ್ತರಂತೆ ಮಹೋನ್ನತ ಎನಿಸಿಕೊಳ್ಳಲು ಸಾಧ್ಯವಾಗದಿದ್ದರೂ ಕಡಿಮೆ ಪಕ್ಷ ತಪ್ಪು ಮಾಡಿದಾಗ ಅದನ್ನು ಒಪ್ಪಿಕೊಂಡು ‘ಸ್ಸಾರಿ’ ಅಂತ ಹೇಳುವ ಗುಣವನ್ನು ಹಾಗೂ ತನಗೆ ಸಹಾಯಹಸ್ತ ನೀಡುವವರನ್ನು ‘ಥ್ಯಾಂಕ್ಯೂ’ ಎಂಬ ಗುಣವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದು ಸ್ವಸ್ಥ ಸಮಾಜಕ್ಕೆ ದಾರಿ ಎಂದು ಎಂದು ಸಂತ μಲೋಮಿನಾ ಕಾಲೇಜ್ ನ ಕ್ಯಾಂಪಸ್ ನಿರ್ದೇಶಕ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೇರೋ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಲೈಮಾನ್ ಮನೆಗೆ ಸ್ಪೀಕರ್ ಯು.ಟಿ.ಖಾದರ್ ಭೇಟಿ; ಎಸ್ಪಿ, ಡಿವೈಎಸ್ಪಿ, ಮನೆಯವರ ಜೊತೆ ಸಮಾಲೋಚನೆ
Vitla; ನಿವೃತ್ತ ಶಿಕ್ಷಕ, ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್ ವಿಧಿವಶ
ಬೋಳಂತೂರು ದರೋಡೆ ಪ್ರಕರಣದ ಸೂತ್ರಧಾರ ಕಾರು ಚಾಲಕ?
Sullia: ಬಸ್ಸಿನಿಂದ ವಿದ್ಯಾರ್ಥಿ ರಸ್ತೆಗೆಸೆಯಲ್ಪಟ್ಟ ಪ್ರಕರಣ; ಚಾಲಕ-ನಿರ್ವಾಹಕರಿಗೆ ಶಿಕ್ಷೆ
Sullia ಮಾನಸಿಕ ಖಿನ್ನತೆ: ನೇಣು ಬಿಗಿದು ಯುವಕ ಆತ್ಮಹ*ತ್ಯೆ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.