ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮ: ರಮಾನಾಥ ರೈ
Team Udayavani, May 19, 2017, 1:03 PM IST
ಗುರುಪುರ ನದಿಯ ನೀರು ಕಲುಷಿತ ಪ್ರಕರಣ
ಬಜಪೆ: ಮರವೂರು ಡ್ಯಾಮ್‌ನ ಕೆಳಭಾಗದಲ್ಲಿ ಗುರುಪುರ ನದಿಯ ನೀರು ಕಲುಷಿತಗೊಂಡಿರುವ ಕುರಿತು ಅಧಿಕಾರಿಗಳಿಂದ ಸಮಗ್ರ ತನಿಖೆ ನಡೆಸಲಾಗುವುದು ಹಾಗೂ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್ ಮತ್ತು ಶಾಸಕ ಅಭಯಚಂದ್ರ ಜೈನ್ ಅವರ ಜತೆ ಮರವೂರಿಗೆ
ಭೇಟಿ ನೀಡಿ ಕಲುಷಿತಗೊಂಡಿರುವ ಗುರುಪುರ ನದಿಯ ನೀರನ್ನು ಪರಿಶೀಲಿಸಿದರು. ಅಧಿಕಾರಿಗಳೂ ಜತೆಗಿದ್ದರು.
5 ದಿನಗಳೊಳಗೆ ಅಧಿಕಾರಿಗಳಿಂದ ವರದಿ ತರಿಸಲಾಗುವುದು. ತಜ್ಞ ವಿಜ್ಞಾನಿಯ ಮೂಲಕ ತನಿಖೆ ನಡೆಸಲಾಗುವುದು; ಇದಕ್ಕೆ ಎನ್‌ಐಟಿಕೆ ಸಹಾಯವನ್ನು ಪಡೆಯಲಾಗುವುದು ಎಂದು ಸಚಿವ ರೈ ವಿವರಿಸಿದರು.
ಮೀನುಗಳ ಸಾವು
ನೀರು ಕಲುಷಿತಗೊಂಡು ಮೀನುಗಳು ಸತ್ತಿವೆ. ಇದರ ಬಗ್ಗೆಯೂ ತನಿಖೆ ನಡೆಸಿ 5 ದಿನಗಳಲ್ಲಿ ವರದಿ ಕೊಡುವಂತೆ ಪರಿಸರ ಇಲಾಖೆಯ ಅಧಿಕಾರಿಗಳಿಗೆ ಮತ್ತು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ನದಿಯ ನೀರನ್ನು ಶುದ್ಧೀಕರಣ ಮಾಡುವ ಬಗ್ಗೆಯೂ ಚರ್ಚೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು. ಇದೇ ಪ್ರಥಮ ಬಾರಿ ಈ ಪ್ರದೇಶದಲ್ಲಿ ನದಿಯ ನೀರು ಇಷ್ಟೊಂದು ಕಲುಷಿತಗೊಂಡಿದೆ. ಇದರಿಂದ ಪರಿಸರದ ನಿವಾಸಿಗಳಿಗೆ ತೊಂದರೆಯಾಗಿದೆ. ಈಗಾಗಲೇ ನೀರಿನ ಮಾದರಿಯನ್ನು ಪರೀಕ್ಷೆಗೆ ಕೊಂಡೊಯ್ಯಲಾಗಿದೆ ಎಂದು ರೈ ತಿಳಿಸಿದರು.
ನೀರು ಕಲುಷಿತವಾಗಲು ಕೈಗಾರಿಕೆಗಳು ಕಾರಣ ಎನ್ನಲಾಗುತ್ತಿದೆ. ಕಾರಣ ಯಾರೇ ಆಗಿದ್ದರೂ ಅವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಾಸಕ ಕೆ. ಅಭಯಚಂದ್ರ ಜೈನ್ ತಿಳಿಸಿದರು.
ಕುಡಿಯುವ ನೀರು ಅಬಾಧಿತ
14 ಗ್ರಾಮಗಳಿಗೆ ಪೂರೈಸಲಾಗುವ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗಿಲ್ಲ. ವೆಂಟೆಡ್ ಡ್ಯಾಂನಲ್ಲಿ ಶೇಖರಣೆಯಾಗಿರುವ ನೀರು ಕಲುಷಿತವಾಗಿಲ್ಲ. ನೀರನ್ನು ದಿನಾ ಪರೀಕ್ಷೆ ಮಾಡಲಾಗುತ್ತಿದೆ. ನದಿಗೆ ತ್ಯಾಜ್ಯ ಬಿಟ್ಟು ಅದನ್ನು ಕಲುಷಿತವನ್ನಾಗಿಸಿದವರ ಮೇಲೆ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್ ಅವರು ತಿಳಿಸಿದರು.
ಮಂಗಳೂರು ಮೇಯರ್ ಕವಿತಾ ಸನಿಲ್, ಕಮಿಷನರ್ ಮೊಹಮದ್ ನಝೀರ್, ಮಳವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ಅರ್ಬಿ, ಉಪಾಧ್ಯಕ್ಷೆ ವನಜಾ ಶೆಟ್ಟಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.