ಕಾಯಿಲೆ ಉಲ್ಬಣಿಸಿ ಕಾಲೇಜು ವಿದ್ಯಾರ್ಥಿನಿ ಸಾವು
Team Udayavani, Jul 30, 2018, 11:26 AM IST
ಮೂಡಬಿದಿರೆ: ಮಧುಮೇಹ ಮತ್ತು ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದ ಕಾಲೇಜು ವಿದ್ಯಾರ್ಥಿನಿ, ಅಶ್ವತ್ಥಪುರ ಸಮೀಪದ ನೀರ್ಕೆರೆಯ ಕೃಷ್ಣ ಪೂಜಾರಿ ಅವರ ಪುತ್ರಿ ಯಕ್ಷಿತಾ (19) ಶನಿವಾರ ಮೃತ ಪಟ್ಟಿದ್ದಾರೆ.
ಈಕೆ ಸಿದ್ಧಕಟ್ಟೆ ಸರಕಾರಿ ಪ್ರ.ದ. ಕಾಲೇಜಿನ ದ್ವಿತೀಯ ವರ್ಷದ ಬಿ.ಕಾಂ. ವಿದ್ಯಾರ್ಥಿನಿಯಾಗಿದ್ದಳು.
ಅನಾರೋಗ್ಯ ಬಚ್ಚಿಟ್ಟದ್ದು ಕಾರಣ?
ಹಿಂದೆ ಟೈಲರಿಂಗ್ ಮಾಡುತ್ತಿದ್ದ ತಂದೆ ಕೃಷ್ಣ ಪೂಜಾರಿ ಈಗ ಕಾಲು ನೋವಿನ ಸಮಸ್ಯೆಯಿಂದ ಕೆಲಸ ಮಾಡಲಾಗದೆ ಮನೆಯಲ್ಲಿದ್ದಾರೆ. ಅವರ ಮತ್ತೂಬ್ಬ ಪುತ್ರಿ ಮೂಡಬಿದಿರೆ ಬಿಲ್ಲವ ಸಂಘದಲ್ಲಿ ಟೈಲರಿಂಗ್ ತರಬೇತಿ ಪಡೆಯುತ್ತಿದ್ದಾಳೆ. ಪತ್ನಿ ಬೀಡಿ ಕಟ್ಟಿದ ಸಂಪಾದನೆಯೇ ಕುಟುಂಬಕ್ಕೆ ಆಧಾರ.
ಮನೆಯ ಪರಿಸ್ಥಿತಿಯನ್ನು ಕಂಡು ಯಕ್ಷಿತಾ ತನ್ನ ಕಾಯಿಲೆಯನ್ನು ಗೌಪ್ಯವಾಗಿಟ್ಟಿದ್ದಳು. ಕಾಲೇಜಿನಿಂದ ಬಂದವಳು ಕಾರಣ ಹೇಳದೆ ಸುಮ್ಮನೆ ಮಲಗಿಬಿಡುತ್ತಿದ್ದಳು. ತಾಯಿ ವಿಚಾರಿಸಿದಾಗ ಏನೂ ಇಲ್ಲ ಎಂದು ಬಿಡುತ್ತಿದ್ದಳು. ಅಸೌಖ್ಯದ ಹಿನ್ನೆಲೆಯಲ್ಲಿ ಎರಡು ದಿನ ಕಾಲೇಜಿಗೆ ಹೋಗದೆ ಇದ್ದಾಗ ಆತಂಕಗೊಂಡ ಮನೆ ಯವರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಅದಾಗಲೇ ಆಕೆಯ ರಕ್ತದೊತ್ತಡ ತೀವ್ರ ಇಳಿದಿದ್ದು, ಮಧುಮೇಹ ಉಲ್ಬಣಾವಸ್ಥೆ ತಲುಪಿತ್ತು. ಪರಿಣಾಮ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಸಂಜೆ ಮೃತಪಟ್ಟಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಮಹಾಕಾಳಿಪಡ್ಪು ರೈಲ್ವೇ ಅಂಡರ್ಪಾಸ್; ಕುಂಟುತ್ತಿರುವ ಕಾಮಗಾರಿಗೆ ಬೇಕಿದೆ ವೇಗ
Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್
Mangaluru: ಅಪಾರ್ಟ್ಮೆಂಟ್, ಮಾಲ್ಗಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ
Mangaluru: ನಗರದಲ್ಲಿ ತೆರೆದುಕೊಂಡ ಗ್ರಾಮೀಣ ಬದುಕು
Kulur: ಗೈಲ್ ಪೈಪ್ಲೈನ್ ಕಾಮಗಾರಿ; ಹೆದ್ದಾರಿ ಕುಸಿತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.