ಸ್ನಾನಕ್ಕೆ ಹೊಳೆಗೆ ಇಳಿದ ವಿದ್ಯಾರ್ಥಿ ನೀರುಪಾಲು
Team Udayavani, Oct 13, 2019, 9:29 PM IST
ಸುಳ್ಯ : ಉಬರಡ್ಕದ ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದ ಗೆಳೆಯನೋರ್ವ ನೀರಲ್ಲಿ ಮುಳುಗುತ್ತಿದ್ದ ಸಂದರ್ಭ ಆತನನ್ನು ರಕ್ಷಿಸಿದಾತ ಕೊನೆಗೆ ಮೇಲಕ್ಕೆ ಬರಲಾಗದೆ ನೀರು ಪಾಲಾದ ಘಟನೆ ರವಿವಾರ ಸಂಭವಿಸಿದೆ.
ದುಗಲಡ್ಕ ಬಳಿಯ ಕಮಿಲಡ್ಕದ ರಿಕ್ಷಾ ಚಾಲಕ ಹರೀಶ್ ಗೌಡ ಅವರ ಪುತ್ರ, ಸುಳ್ಯ ಜೂನಿಯರ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಯಶ್ವಿತ್ (15) ಮೃತ ದುರ್ದೈವಿ.
ಯಶ್ವಿತ್ ಹಾಗೂ ಮೂವರು ಹೊಳೆಯಲ್ಲಿ ಸ್ನಾನಕ್ಕೆ ಇಳಿದಿದ್ದರು. ಈ ಸಂದರ್ಭ ಕಿರಣ್ ಎಂಬಾತ ನೀರಲ್ಲಿ ಮುಳುಗುತಿದ್ದ ಸಂದರ್ಭ ಯಶ್ವಿತ್ ಮತ್ತು ಇತರ ಇಬ್ಬರು ಸೇರಿ ಆತನನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು. ಆದರೆ ಈ ವೇಳೆ ಯಶ್ವಿತ್ ಆಯ ತಪ್ಪಿ ನೀರಿನ ಆಳಕ್ಕೆ ಬಿದ್ದ ಎನ್ನಲಾಗಿದೆ. ಆ ಸಂದರ್ಭ ಯಾರಿಗೂ ಈಜಲು ಗೊತ್ತಿಲ್ಲದ ಆತನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಸಮೀಪದಲ್ಲಿ ಯಾವುದೇ ಮನೆಗಳು ಇರಲಿಲ್ಲ. ದೂರದಲ್ಲಿನ
ಮನೆಯವರಿಗೆ ವಿಷಯ ತಿಳಿಸಿ ಅವರು ಬರುವ ವೇಳೆಗಾಗಲೇ ಯಶ್ವಿತ್ ನೀರು ಪಾಲಾಗಿದ್ದ. ಬಳಿಕ ಪೊಲೀಸರ ಸಮ್ಮುಖದಲ್ಲಿ ಕಾರ್ಯಾಚರಣೆ ನಡೆಸಿ ಮೃತದೇಹ ಮೇಲಕ್ಕೆ ಎತ್ತಲಾಯಿತು. ಮೃತರು ತಂದೆ, ತಾಯಿ ಮತ್ತು ಅಣ್ಣನನ್ನು ಅಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kottigehara: ಸ್ವೀಟ್ ಬಾಕ್ಸ್‌ನಲ್ಲಿ ಗೋಮಾಂಸ ಇಟ್ಟು ಮಾರಾಟ: ಇಬ್ಬರ ಸೆರೆ
Mysuru: ಮೈಸೂರಲ್ಲಿ ಚಳಿ ತಡೆಯಲಾಗದೆ ರಾತ್ರಿ ಮಲಗಿದ್ದಲ್ಲೇ ವ್ಯಕ್ತಿ ಸಾವು?
ಗ್ರಾಮ ಪಂಚಾಯಿತಿ ವ್ಯಾಪ್ತಿಯ 90 ಲಕ್ಷ ಆಸ್ತಿಗಳಿಗೆ ಇ-ಸ್ವತ್ತು: ಸಚಿವ ಪ್ರಿಯಾಂಕ್
Conference: ಜ.18, 19ರಂದು ರಾಜ್ಯಮಟ್ಟದ ಬ್ರಾಹ್ಮಣ ಮಹಾ ಸಮ್ಮೇಳನ
Mahakumbh Mela 2025: 144 ವರ್ಷಗಳಿಗೆ ಒಮ್ಮೆ ನಡೆಯುವ ಆಧ್ಯಾತ್ಮಿಕ ವಿಸ್ಮಯ ಮಹಾ ಕುಂಭಮೇಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.