ಸಂಸದ ನಳಿನ್ ಕಲಿತ ಶಾಲೆಯ ಮಕ್ಕಳಿಗೆ ವರ್ಗಾವಣೆ ಶಿಕ್ಷೆ?
Team Udayavani, May 27, 2019, 6:07 AM IST
ಸುಳ್ಯ: ಸಂಸದ ನಳಿನ್ ಪ್ರಾಥಮಿಕ ಶಿಕ್ಷಣ ಪಡೆದ ಸುಳ್ಯ ತಾಲೂಕಿನ ಮುಕ್ಕೂರು ಹಿ.ಪ್ರಾ. ಶಾಲೆ ಯಲ್ಲಿ 8ನೇ ತರಗತಿಗೆ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳು ವರ್ಗಾವಣೆ ಪತ್ರಕ್ಕೆ ಮೊರೆಯಿಟ್ಟಿದ್ದಾರೆ.
2 ವರ್ಷಗಳಿಂದ 7ನೇ ತರಗತಿ ತೇರ್ಗಡೆ ವಿದ್ಯಾರ್ಥಿಗಳು ಟಿ.ಸಿ. ಪಡೆದು ಬೇರೆ ಶಾಲೆಗೆ ಸೇರಿದ್ದಾರೆ. ಈ ಬಾರಿಯೂ ಅದೇ ಪರಿಸ್ಥಿತಿ.
ಕಳೆದ ವರ್ಷವೂ…
ಮುಕ್ಕೂರು ಹಿ.ಪ್ರಾ. ಶಾಲೆಯಲ್ಲಿ 2017-18ನೇ ಸಾಲಿನಲ್ಲಿ 8ನೇ ತರಗತಿಗೆ 8 ಮಂದಿ ತೇರ್ಗಡೆಯಾಗಿದ್ದರು. ಆದರೆ ಟಿಜಿಟಿ, ಎಜಿಟಿ ದರ್ಜೆಯ ಎರಡೂ ಶಿಕ್ಷಕ ಹುದ್ದೆ ಖಾಲಿಯಿದ್ದ ಕಾರಣ 7 ಮಕ್ಕಳ ಪೋಷಕರು ಟಿ.ಸಿ. ಪಡೆದು ಬೇರೆ ಶಾಲೆಗೆ ಸೇರಿಸಿದ್ದರು.
ಹುದ್ದೆ ಖಾಲಿ ಯಿದ್ದು, ಮಕ್ಕಳು ಟಿಸಿ ಪಡೆ ಯುತ್ತಿದ್ದರೂ ಶಿಕ್ಷಣ ಇಲಾಖೆ ಶಿಕ್ಷಕರ ನಿಯೋಜನೆಗೆ ಕ್ರಮ ಕೈಗೊಂಡಿಲ್ಲ. ಜನಪ್ರತಿನಿಧಿಗಳು ಪ್ರಯತ್ನ ಮಾಡಿಲ್ಲ. ಪರಿಣಾಮ ಈ ವರ್ಷ ಮೂವರು ವಿದ್ಯಾರ್ಥಿಗಳು ಟಿಸಿಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಶಿಕ್ಷಕರು ಇಲ್ಲ
ಈ ಶಾಲೆಯಲ್ಲಿ 5 ಮಂಜೂರಾದ ಹುದ್ದೆಗಳಿವೆ. 2 ಹುದ್ದೆಗಳಲ್ಲಿ ಶಿಕ್ಷಕರಿದ್ದು, ಈ ವರ್ಷ ಮುಖ್ಯ ಗುರು ಗಳನ್ನು ಹೆಚ್ಚುವರಿ ಎಂದು ಬೇರೆಡೆ ನಿಯೋಜಿಸುವ ಪ್ರಕ್ರಿಯೆ ನಡೆದಿದೆ. 6ರಿಂದ 8ನೇ ತರಗತಿ ತನಕ ಎಜಿಟಿ, ಟಿಜಿಟಿ ಅರ್ಹತೆಯ ಇಬ್ಬರು ಶಿಕ್ಷಕರ ಅಗತ್ಯ ಇದೆ. ಆದರೆ ಈ ಎರಡೂ ಹುದ್ದೆ ಖಾಲಿ ಇವೆ.
– ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.