ಅಕ್ಷರ ಜ್ಞಾನದ ಜತೆಗೆ ಮಕ್ಕಳಿಗೆ ಅನ್ನದ ಪಾಠ

Team Udayavani, Jul 14, 2018, 3:00 AM IST

akshara-jnana-13-7.jpg

ವಿಶೇಷ ವರದಿ – ಸುಳ್ಯ: ನಾ ಮುಂದು, ತಾ ಮುಂದು ಎನ್ನುವ ಮಕ್ಕಳು ಗದ್ದೆಗೆ ಇಳಿದೇ ಬಿಟ್ಟರು. ನೇಜಿ ನೆಟ್ಟು ಸಂಭ್ರಮಿಸಿದರು. ಸದಾ ಆಟ-ಪಾಠಕ್ಕೆ ಸೀಮಿತವಾಗುವ ಶಾಲಾ ವಠಾರದಲ್ಲಿ ಗದ್ದೆ ಮೈತಳೆದು, ಅಕ್ಷರ ಜ್ಞಾನದ ಜತೆಗೆ ಅನ್ನದ ಪಾಠ ಸಾರಿದ ಸಕಾರಾತ್ಮಕ ಸಂಗತಿಯಿದು..! ಇಂತಹ ವಿಶೇಷ ಪ್ರಯತ್ನಕ್ಕೆ ವೇದಿಕೆ ಆದದ್ದು ಬಾಳಿಲ ವಿದ್ಯಾಬೋಧಿನಿ ಅನುದಾನಿತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಸುಮಾರು 222 ಮಕ್ಕಳು ಗದ್ದೆಯೆಂಬ ನೆಲದ ಶಾಲೆಯೊಳಗೆ ದಿನವಿಡೀ ನಲಿದರು. ಬದುಕಿನ ಪಾಠ ಕಲಿತರು.

ಶಾಲೆಯಲ್ಲಿ ಗದ್ದೆ..!
1ನೇ ತರಗತಿಯಿಂದ 7ನೇ ತರಗತಿ ತನಕ ವಿದ್ಯಾಭ್ಯಾಸ ನೀಡುತ್ತಿರುವ ಬಾಳಿಲ ಶಾಲೆಯಲ್ಲಿ, ತರಕಾರಿ ತೋಟದಂತಹ ಹೊಸ ಹೊಸ ಪ್ರಯೋಗ ನಡೆಯುತ್ತದೆ. ಈ ಬಾರಿ ಆ ಸಾಲಿಗೆ ಗದ್ದೆ ಸೇರ್ಪಡೆಗೊಂಡಿದೆ. ಶಾಲಾ ಮೈದಾನದ ಒಂದು ಭಾಗದಲ್ಲಿ 3 ಸೆಂಟ್ಸ್‌ ಸ್ಥಳವನ್ನು ಹದ ಮಾಡಿ, ಗದ್ದೆಯ ರೂಪ ಕೊಡಲಾಯಿತು. ಅನಂತರ ಬೇಕಾದ ಪೋಷಕಾಂಶ, ನೀರು ಬಳಸಿ, ನೇಜಿ ನೆಡಲು ತಯಾರಿ ನಡೆಸಲಾಯಿತು. ಶಾಲಾ ಮಕ್ಕಳು, ಹೆತ್ತವರು, ಎಸ್‌.ಡಿ.ಎಂ.ಸಿ. ಸದಸ್ಯರು, ಶಿಕ್ಷಕರು ಜತೆಗೂಡಿ ನೇಜಿ ನೆಟ್ಟರು. ಗುಲಾಬಿ ಅವರ ಪಾಡ್ದನದ ಸಾಲು ಉತ್ಸಾಹಕ್ಕೆ ಇಂಬು ನೀಡಿತ್ತು.

ಎಲ್ಲರೂ ಭಾಗಿ

ವೈಜ್ಞಾನಿಕ ಪದ್ದತಿ ಪ್ರಕಾರ ನಾಟಿ ಮಾಡಿ, ಗೊಬ್ಬರ, ನೀರು ಹಾಕಲಾಯಿತು. ಮುಂದಿನ 90 ದಿನಗಳ ಕಾಲ ಮಕ್ಕಳು, ಎಸ್‌ಡಿಎಂಸಿ, ಶಿಕ್ಷಕರು, ಪೋಷಕರು ನೇಜಿ ಬೆಳೆದು ಭತ್ತ ನೀಡುವ ತನಕದ ಬೆಳವಣಿಗೆ ಬಗ್ಗೆ ನಿಗಾ ಇಡಲಿದ್ದಾರೆ. ಔಷಧ ಸಿಂಪಡಣೆ, ಕಟಾವು ಇತ್ಯಾದಿ ಹಂತಗಳು ಕ್ರಮ ಬದ್ದವಾಗಿ ನಡೆಯಲಿದೆ.

ನೆಲದ ಪ್ರೀತಿ
ಶಾಲೆಯಲ್ಲಿಯೇ ಗದ್ದೆ ನಿರ್ಮಿಸುವ ಮುಖ್ಯ ಉದ್ದೇಶ ಇಲ್ಲಿನ ಮಕ್ಕಳಲ್ಲಿ ನೆಲದ ಬಗ್ಗೆ ಪ್ರೀತಿ ತುಂಬುವುದಾಗಿದೆ. ಜತೆಗೆ ಅನ್ನದ ಹಿಂದಿನ ಶ್ರಮದ ಬಗ್ಗೆ ತಿಳಿಸುವುದಾಗಿದೆ. ಅದಕ್ಕಾಗಿ ಬೇರೆ ಗದ್ದೆಗಳಲ್ಲಿ ನಾಟಿ ಮಾಡುವ ಬದಲು, ಸ್ವತಃ ಶಾಲೆಯಲ್ಲಿಯೇ ಗದ್ದೆ ರಚಿಸಿ, 90 ದಿವಸಗಳ ಕಾಲ ಅದರ ಬೆಳವಣಿಗೆಯ ವಿವಿಧ ಹಂತಗಳನ್ನು ಮಕ್ಕಳು ಗಮನಿಸಬೇಕು ಎಂಬ ದೂರದೃಷ್ಟಿ ಇಲ್ಲಿನದ್ದು. ಇದೊಂದು ಉತ್ತಮ ಪ್ರಯತ್ನ ಅನ್ನುತ್ತಾರೆ ಅಕ್ಷರ ದಾಸೋಹದ ಅಧಿಕಾರಿ ಚಂದ್ರಶೇಖರ ಪೇರಾಲು.

ಅರಿವು ಕಾರ್ಯ
ಭತ್ತದ ಬೇಸಾಯ ಇಳಿಮುಖ ಆಗುತ್ತಿರುವ ಹೊತ್ತಲ್ಲಿ, ಅದರ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಇದಾಗಿದೆ. ಪ್ರತಿ ಹಂತದ ಬೆಳವಣಿಗೆಯ ಬಗ್ಗೆ ಮಕ್ಕಳು ಅರಿತುಕೊಳ್ಳುವುದು, ನೆಲದ ಬಗ್ಗೆ ಆಸಕ್ತಿ ಮೂಡಿಸುವುದು ಇದರ ಉದ್ದೇಶವಾಗಿದೆ.
– ಜಾಹ್ನವಿ ಕಾಂಚೋಡು, ಅಧ್ಯಕ್ಷರು, ಎಸ್‌.ಡಿ.ಎಂ.ಸಿ., ಬಾಳಿಲ

ಟಾಪ್ ನ್ಯೂಸ್

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Shiggvi-Yatnal

Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್‌

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

dw

Puttur: ಕೆರೆಗೆ ಬಿದ್ದು ವ್ಯಕ್ತಿ ಸಾವು

1(1)

Vitla: ನಾಲ್ಕೂ ದಿಕ್ಕಿನಿಂದ ಬರುವ ರಸ್ತೆಗಳಲ್ಲಿ ಗುಂಡಿಯೋ ಗುಂಡಿ

Aranthodu: ಕಾನೂನು ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Aranthodu: ಕಾನೂನು ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

16

Mangaluru: ನಿಯಮ ಉಲ್ಲಂಘನೆ; ಖಾಸಗಿ ಬಸ್‌ಗೆ ದಂಡ

Shiggvi-Yatnal

Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್‌

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.