ವಿದ್ಯಾರ್ಥಿಗಳ ಹೊಡೆದಾಟ “ವೈರಲ್’
Team Udayavani, Aug 11, 2017, 8:10 AM IST
ಮಂಗಳೂರು: ನಗರದ ಮಿಲಾಗ್ರಿಸ್ ಕಾಲೇಜಿನ ವಿದ್ಯಾರ್ಥಿಯೊಬ್ಬನಿಗೆ ಅದೇ ಕಾಲೇಜಿನ ವಿದ್ಯಾರ್ಥಿ ತಂಡವೊಂದು ಬೆನ್ನಟ್ಟಿ ಹೊಡೆಯುವ ದೃಶ್ಯ ‘ವೈರಲ್’ ಆಗಿದೆ. ಘಟನೆ ಬುಧವಾರ ಸಂಜೆ ನಡೆದಿದೆ ಎನ್ನಲಾಗಿದ್ದು, ಕಾಲೇಜು ಗೇಟ್‌ನಿಂದ ಒಬ್ಬ ವಿದ್ಯಾರ್ಥಿಯನ್ನು ವಿದ್ಯಾರ್ಥಿಗಳ ತಂಡವೊಂದು ಹೊಡೆಯುತ್ತಿರುವುದು ಹಾಗೂ ಆ ವಿದ್ಯಾರ್ಥಿ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಬೆನ್ನಟ್ಟುತ್ತಿರುವ ದೃಶ್ಯದ ವೀಡಿಯೋ ಮೊಬೈಲ್ ಫೋನ್‌ಗಳಲ್ಲಿ ಹರಿದಾಡುತ್ತಿದೆ.
ವಿದ್ಯಾರ್ಥಿಗಳ ತಂಡ ಬೆನ್ನಟ್ಟಿದಾಗ ಆ ವಿದ್ಯಾರ್ಥಿ ಪಕ್ಕದಲ್ಲಿರುವ ಫಳ್ನೀರ್ ರಸ್ತೆ ದಾಟಿ ಮಿಲಾಗ್ರಿಸ್ ಚರ್ಚ್ ಕಂಪೌಂಡ್ ಹಾಗೂ ಮಿಲಾಗ್ರಿಸ್ ಚರ್ಚ್‌ನ ಮುಖ್ಯ ಗೇಟ್ ತನಕವೂ ಹೋಗಿ ಆತನಿಗೆ ಹಲ್ಲೆ ಮಾಡುತ್ತಿರುವ ದೃಶ್ಯ ಈ ವೀಡಿಯೋದಲ್ಲಿದೆ. ಹೊಡೆತ ತಿಂದಿರುವ ವಿದ್ಯಾರ್ಥಿ ಇನ್ನೋರ್ವ ವಿದ್ಯಾರ್ಥಿಯ ತಂದೆಯನ್ನು ಹೀಯಾಳಿಸಿದ್ದಕ್ಕಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಬಂದರು ಪೊಲೀಸರು ಎರಡೂ ಕಡೆಯ ವಿದ್ಯಾರ್ಥಿಗಳನ್ನು ಕರೆಸಿ ಎಚ್ಚರಿಕೆ ನೀಡಿ ಬಿಟ್ಟಿದ್ದಾರೆ. ಯಾವುದೇ ಪ್ರಕರಣ ದಾಖಲಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.