ಗಾರೆ ಮೆತ್ತಿದ ಕೈಗಳು ಬಂದೂಕು ಹಿಡಿದವು!


Team Udayavani, Feb 26, 2018, 10:08 AM IST

26-Feb-1.jpg

ಒಂದೊಮ್ಮೆ ವಿದ್ಯಾಭ್ಯಾಸ ಪೂರೈಸಲು ಗಾರೆ ಕೆಲಸ ಮಾಡಿದವರು, ಇಂದು ದೇಶವೇ ಹೆಮ್ಮೆ ಪಡುವ ಕೆಲಸ ಮಾಡುತ್ತಿದ್ದಾರೆ. ಸ್ಪಷ್ಟ ಗುರಿ, ಕಠಿನ ಪರಿಶ್ರಮವಿದ್ದರೆ ಇದಕ್ಕೆ ಬಡತನ ಎಂದಿಗೂ ಅಡ್ಡಿಯಾಗಲಾರದು ಎಂಬುದನ್ನೂ ಅವರು ತೋರಿಸಿಕೊಟ್ಟಿದ್ದಾರೆ. 

ಮಂಗಳೂರು: ಕಿತ್ತು ತಿನ್ನುವ ಬಡತನ. ಒಂದು ಹೊತ್ತಿನ ಊಟಕ್ಕೂ ಕಷ್ಟ ಎನ್ನುವ ಪರಿಸ್ಥಿತಿ. ಉನ್ನತ ವಿದ್ಯಾಭ್ಯಾಸದ ಬಗ್ಗೆ ಅತೀವ ಆಸಕ್ತಿ ಇದ್ದರೂ ಕೈಯಲ್ಲಿ ಕಿಂಚಿತ್ತೂ ಹಣವಿರಲಿಲ್ಲ. ಆದರೂ ಕೂಲಿ ಮಾಡಿ ಹಣ ಕೂಡಿಟ್ಟು ಸೇನೆಗೆ ಸೇರುವ ತನ್ನ ಕನಸನ್ನು ಈಡೇರಿಸಿಕೊಂಡವರು ಯೋಧ ಶ್ರೀಧರ ಎ. ಅಂಚನ್‌.

ಸಹೋದ್ಯೋಗಿಗಳೊಂದಿಗೆ ಶ್ರೀಧರ್‌ ಅಂಚನ್‌.

ಬಂಟ್ವಾಳ ತಾಲೂಕಿನ ಪಂಜಿಕಲ್ಲು ಬಳಿಯ ಅಮೈ ನಿವಾಸಿ ಲಿಂಗಮ್ಮ ಮತ್ತು ನೀಲಪ್ಪ ಪೂಜಾರಿ ದಂಪತಿಯ ಆರು ಮಂದಿ ಮಕ್ಕಳ ಪೈಕಿ ಶ್ರೀಧರ್‌ ಅವರು ಕೊನೆಯವರು. ಅಪ್ಪ ಗಾರೆ ಕೆಲಸ ಮಾಡುತ್ತಿದ್ದರೂ ಎಲ್ಲ ಮಕ್ಕಳನ್ನು 10ನೇ ತರಗತಿ ವರೆಗೆ ಓದಿಸಿದ್ದರು.

ಕೊನೆಯ ಮಗನಾದ ಶ್ರೀಧರ್‌ ಅವರಿಗೆ ಉನ್ನತ ವ್ಯಾಸಂಗದ ತುಡಿತ ಇದ್ದರೂ ಬಡತನದಿಂದಾಗಿ ಅದು ಸಾಧ್ಯವಾಗಲಿಲ್ಲ. ಕೊನೆಗೆ ಶ್ರೀಧರ್‌ ಅವರೂ ಅಪ್ಪನಂತೆಯೇ ಗಾರೆ ಕೆಲಸಕ್ಕೆ ಇಳಿದರು. ಆ ಸಂದರ್ಭಕ್ಕೆ ಅದು ಅವರಿಗೆ ಅನಿವಾರ್ಯವೂ ಆಗಿತ್ತು.
ಪತ್ನಿ ಸೌಮ್ಯಾ ಅವರೊಂದಿಗೆ 

ಗಾರೆ ಕೆಲಸಕ್ಕೆ ಸೇರಿ ಪಿಯುಸಿ ಪಾಸ್‌
ಶ್ರೀಧರ್‌ ಛಲ ಬಿಡಲಿಲ್ಲ. ಮಂಗಳೂರು ನಗರದಲ್ಲಿ ಬೆಳಗ್ಗೆ 8ರಿಂದ ಸಂಜೆ 4 ಗಂಟೆಯ ವರೆಗೆ ಗಾರೆ ಕೆಲಸ ಮಾಡುತ್ತಿದ್ದರು. ತನ್ನ ಮನೆಯ ಆಸುಪಾಸಿನಲ್ಲಿ ದಿನಗೂಲಿ ಕೆಲಸಕ್ಕೆ ಹೋಗುತ್ತಿದ್ದರು. ಆಗ ಸಿಗುತ್ತಿದ್ದದ್ದು ದಿನಕ್ಕೆ 35 ರೂ. ಸಂಬಳ.

ಕಲಿಯಲೇಬೇಕೆಂಬ ಹಠದಿಂದ ಬೆಳಗ್ಗೆ ಕೆಲಸ ಮಾಡಿ ಸಂಜೆ ಬೆಸೆಂಟ್‌ ಪಿಯು ಸಂಜೆ ಕಾಲೇಜು ಸೇರಿ ಮೊದಲನೇ ವರ್ಷ ಪಿಯುಸಿ ಕಲಾ ವಿಭಾಗ ಪೂರ್ಣಗೊಳಿಸಿದರು. ಇದಾದ ಬಳಿಕ ಎರಡನೇ ವರ್ಷದ ಪಿಯುಸಿಗೆ ವಾಮದಪದವು ಜೂನಿಯರ್‌ ಕಾಲೇಜು ಸೇರಿದರು. ಇಲ್ಲಿಂದ ಅವರ ಜೀವನದ ಎರಡನೇ ಇನ್ನಿಂಗ್ಸ್‌ ಆರಂಭವಾಯಿತು.

ಅದಾಗಲೇ ಕಾರ್ಗಿಲ್‌ ಯುದ್ಧದ ದೃಶ್ಯಾವಳಿಗಳ ಸುದ್ದಿ ಸೇನೆ ಸೇರ್ಪಡೆ ಬಗ್ಗೆ ಶ್ರೀಧರ್‌ ಅವರಿಗೆ ವ್ಯಾಪಕ ತುಡಿತವಿತ್ತು. ಪಿಯುಸಿ ವಿದ್ಯಾಭ್ಯಾಸ ಪೂರ್ಣಗೊಂಡ ಸಂದರ್ಭದಲ್ಲಿ ಮಡಿಕೇರಿಯಲ್ಲಿ ಸಿಆರ್‌ಪಿಎಫ್‌ ಪ್ಯಾರಾ ಮಿಲಿಟರಿ ನೇಮಕಾತಿಗೆ ಕರೆಯಲಾಗಿತ್ತು. ಶ್ರೀಧರ್‌ ಅವರು ಈ ಆಯ್ಕೆಯನ್ನು ಕೈಚೆಲ್ಲಲಿಲ್ಲ. ಅಲ್ಲಿಗೆ ತೆರಳಿದ್ದೂ ಅಲ್ಲದೆ ಆಯ್ಕೆಯಾಗಿದ್ದರು. ಅನಂತರ ತರಬೇತಿಯನ್ನು ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಪಡೆದರು. 2002ರಿಂದ 2005ರ ವರೆಗೆ ನಾಗಾಲ್ಯಾಂಡ್‌ನ‌ಲ್ಲಿ ಜಂಗಲ್‌ ಆಪರೇಷನ್‌ನಲ್ಲಿ ಕಾರ್ಯನಿರ್ವಹಿಸಿದ್ದರು. 

ಮೋದಿಗೂ ಭದ್ರತೆ ನೀಡಿದ್ದರು
ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಅವರಿಗೆ ಸುಮಾರು 8 ತಿಂಗಳುಗಳ ಕಾಲ ಶ್ರೀಧರ್‌ ಅವರು ಎನ್‌ಎಸ್‌ಜಿ ಯೋಧರಾಗಿ ಕೆಲಸ ನಿರ್ವಹಿಸಿದ್ದಾರೆ. ಒಂದು ರಾಜ್ಯದಿಂದ ಬೇರೊಂದು ರಾಜ್ಯಕ್ಕೆ ಪ್ರವಾಸ ಮಾಡುತ್ತಿದ್ದ ವೇಳೆ ಮೋದಿ ಅವರ ಬೆಂಗಾವಲಿಗೆ ನಿಂತಿದ್ದರು. ಮೋದಿ ಅವರು ನಮ್ಮನ್ನು ಪ್ರೀತಿಯಿಂದ ಕಂಡಿದ್ದರು. ನಮ್ಮ ಆರೋಗ್ಯದ ಬಗ್ಗೆ ಕೇಳುತ್ತಿದ್ದರು. ಯಾವುದೇ ಕಾರ್ಯಕ್ರಮಕ್ಕೆ ತೆರಳಿದ ಬಳಿಕ ತಿಂಡಿ ತಿಂದ್ರಾ… ಊಟ ಆಯ್ತಾ ಎಂದು ವಿಚಾರಿಸುತ್ತಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಶ್ರೀಧರ್‌.

ಹಿಮಪಾತದಲ್ಲಿ ಕಳೆದ ಸಮಯ
2005 ಮೇ ತಿಂಗಳಲ್ಲಿ ಜಮ್ಮು ಕಾಶ್ಮೀರದ ಕುಕ್ವಾಡ ಜಿಲ್ಲೆಗೆ (ಪಾಕಿಸ್ಥಾನ ಗಡಿಗೆ ಕೇವಲ 6 ಕಿ.ಮೀ.) ವರ್ಗಾವಣೆಯಾಯಿತು. ಇಲ್ಲಿ ಭಯೋತ್ಪಾದಕ ನಿಗ್ರಹ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕಾಶ್ಮೀರದಲ್ಲಾದ ಭಾರೀ ಭೂಕಂಪದ ವೇಳೆ ಹಿಮಪಾತವಾದಾಗ 24 ಗಂಟೆ ಕಾಲ ಮಿಲಿಟರಿ ವಾಹನದೊಳಗೇ ಇದ್ದರು. ಬಳಿಕ ಒಂದು ವರ್ಷ ಕಾಲ ಪುಣೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿ, 2008ರಲ್ಲಿ ಎನ್‌ಎಸ್‌ಜಿ ಬ್ಲ್ಯಾಕ್‌ ಕಮಾಂಡೋ ಆಗಿ ಭಡ್ತಿ ಹೊಂದಿದರು. 2014ರಲ್ಲಿ ಛತ್ತೀಸ್‌ಗಢದ ನಕ್ಸಲ್‌ ಆಪರೇಷನ್‌ ಸ್ಟೇಟ್‌ ನಾರಾಯಣಪುರದಲ್ಲಿ ಸವಾಲಿನ ನಡುವೆ ಕೆಲಸ ಮಾಡಿದ್ದಾರೆ. ಸದ್ಯ ದಿಲ್ಲಿಯ ಪಾರ್ಲಿಮೆಂಟ್‌ ಭವನದಲ್ಲಿ ಎನ್‌ಎಸ್‌ಜಿ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಒಪ್ಪೊತ್ತಿನ ಊಟಕ್ಕೂ ಕಷ್ಟವಿತ್ತು
ನಾನು ತುಂಬಾ ಕಷ್ಟದಲ್ಲಿ ಬೆಳೆದವನು. ಒಪ್ಪೊತ್ತಿನ ಊಟಕ್ಕೂ ಕಷ್ಟವಿತ್ತು. ದಿನಪತ್ರಿಕೆಗಳಲ್ಲಿ ಕಾರ್ಗಿಲ್‌ ಯುದ್ದದ ಸುದ್ದಿಯನ್ನು ಓದುತ್ತಿದ್ದೆ. ನಾನು ಕೂಡ ದೇಶ ಸೇವೆ ಮಾಡಬೇಕು ಎಂಬ ಉತ್ಸಾಹ ಬಂತು. ಸ್ನೇಹಿತರು ಕೂಡ ಪ್ರೋತ್ಸಾಹಿಸಿದರು. ಈಗ ನನಗೆ ಹೆಮ್ಮೆ ಎಂದೆನಿಸುತ್ತಿದೆ. 
-ಶ್ರೀಧರ್‌ ಎ. ಅಂಚನ್‌, ಯೋಧ

ಹೆಮ್ಮೆಯಾಗುತ್ತಿದೆ
ನನ್ನ ಪತಿ ಯೋಧ ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತಿದೆ. ಯೋಧನನ್ನು ಮದುವೆಯಾಗಲು ನಾನು ಪುಣ್ಯ ಮಾಡಿದ್ದೆ.
-ಸೌಮ್ಯಾ ಎಸ್‌. ಅಂಚನ್‌, ಪತ್ನಿ

ನವೀನ್‌ ಭಟ್‌ ಇಳಂತಿಲ 

ಟಾಪ್ ನ್ಯೂಸ್

Kaniyoor: ಮರಳುಗಾರಿಕೆಯ ಬೋಟ್‌ ಅನ್ನು ಕಟ್ಟಿ ಹಾಕಿದರು

Kaniyoor: ಮರಳುಗಾರಿಕೆಯ ಬೋಟ್‌ ಅನ್ನು ಕಟ್ಟಿ ಹಾಕಿದರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

ಕುಲಕಸುಬನ್ನು ಉಳಿಸಿ ಬೆಳೆಸಬೇಕಿದೆ: ಕಾಳಹಸ್ತೇಂದ್ರ ಶ್ರೀ

Barkur Shri Kallikamba Temple: ಕುಲಕಸುಬನ್ನು ಉಳಿಸಿ ಬೆಳೆಸಬೇಕಿದೆ: ಕಾಳಹಸ್ತೇಂದ್ರ ಶ್ರೀ

Malpe: ಏಕರೂಪದ ಮೀನುಗಾರಿಕೆಗೆ ಪ್ರಯತ್ನ

Malpe: ಏಕರೂಪದ ಮೀನುಗಾರಿಕೆಗೆ ಪ್ರಯತ್ನ

1-sindd

Syed Modi International: ಫೇವರಿಟ್‌ ಸಿಂಧು, ಲಕ್ಷ್ಯ ಸೆಮಿಫೈನಲ್‌ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

5

Mangaluru: ಎಎಸ್‌ಐಗೆ ಗಾಯ; ಡಿವೈಎಫ್ಐ ವಿರುದ್ಧ ಪ್ರಕರಣ

Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Kaniyoor: ಮರಳುಗಾರಿಕೆಯ ಬೋಟ್‌ ಅನ್ನು ಕಟ್ಟಿ ಹಾಕಿದರು

Kaniyoor: ಮರಳುಗಾರಿಕೆಯ ಬೋಟ್‌ ಅನ್ನು ಕಟ್ಟಿ ಹಾಕಿದರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

ಕುಲಕಸುಬನ್ನು ಉಳಿಸಿ ಬೆಳೆಸಬೇಕಿದೆ: ಕಾಳಹಸ್ತೇಂದ್ರ ಶ್ರೀ

Barkur Shri Kallikamba Temple: ಕುಲಕಸುಬನ್ನು ಉಳಿಸಿ ಬೆಳೆಸಬೇಕಿದೆ: ಕಾಳಹಸ್ತೇಂದ್ರ ಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.