ಪೂರ್ತಿಯಾಗದ ಸುಬ್ರಹ್ಮಣ್ಯಮಂಜೇಶ್ವರ ಅಂತಾರಾಜ್ಯ ಹೆದ್ದಾರಿ ವಿಸ್ತರಣೆ
Team Udayavani, Nov 20, 2017, 4:40 PM IST
ವಿಟ್ಲ : ಸುಬ್ರಹ್ಮಣ್ಯ – ಮಂಜೇಶ್ವರ ಅಂತಾರಾಜ್ಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲ. ಐದು ವರ್ಷಗಳು ಸಂದರೂ ಕಾಮಗಾರಿ ಅರ್ಧಂಬರ್ಧ ಆಗಿದೆ. ರಸ್ತೆ ವಿಸ್ತರಣೆಯಾಗಿದ್ದರೂ ಕೆಲವೆಡೆ ಸೇತುವೆ ವಿಸ್ತರಣೆ, ತಡೆಗೋಡೆಯಾಗಿಲ್ಲ. ಭೂಸ್ವಾಧೀನಗೊಳಿಸಿದರೂ ಫಲಾನುಭವಿಗಳಿಗೆ ಪರಿಹಾರ ನೀಡಿಲ್ಲ. ಅಪಘಾತ ಸಂಭವಿಸಬಹುದಾದ ಜಾಗದಲ್ಲಿ ಅಪಾಯಕಾರಿ ಸನ್ನಿವೇಶ ಬದಲಾಗಿಲ್ಲ. ಇದು ಪುತ್ತೂರು, ಬುಳೇರಿಕಟ್ಟೆ, ಪುಣಚ, ಕೇಪು, ಅಳಿಕೆ ಗ್ರಾಮಸ್ಥರ ದೂರು.
ಪುಣಚದ ಮೂಲಕ ರಸ್ತೆ
ಸುಬ್ರಹ್ಮಣ್ಯ – ಮಂಜೇಶ್ವರ ಅಂತಾ ರಾಜ್ಯ ಹೆದ್ದಾರಿಯು ಪುತ್ತೂರು, ಬುಳೇರಿಕಟ್ಟೆ, ಪುಣಚ, ಕೇಪು, ಅಳಿಕೆ, ಕನ್ಯಾನ, ಕರೋಪಾಡಿ ಗ್ರಾಮದ ವ್ಯಾಪ್ತಿಯಲ್ಲಿ ಸಾಗಿ ಕೇರಳದ ಮಂಜೇಶ್ವರ ತಾಲೂಕಿಗೆ ಸೇರುತ್ತದೆ. ಈ ಹೆದ್ದಾರಿಯು ಹಳ್ಳಿ ಭಾಗಗಳಲ್ಲಿ ಸಾಗುತ್ತದೆ. ರಸ್ತೆ ಅತ್ಯಂತ ಉಪಯುಕ್ತವಾಗಿದ್ದು, ನಿತ್ಯ ಸಾವಿರಾರು ವಾಹನಗಳು ಹಾಗೂ ಸಾವಿರಾರು ಮಂದಿ ಸಂಚಾರಕ್ಕೆ ಬಳಸುತ್ತಾರೆ.
ಅಪೂರ್ಣ ಕಾಮಗಾರಿ
ಇಲ್ಲಿ ಕೆಲವು ಕಡೆಗಳಲ್ಲಿ ಕಾಮಗಾರಿ ಪೂರ್ತಿಯಾಗಿಲ್ಲ. ಪೂರ್ತಿಯಾದ ಕೆಲ ಕಡೆಗಳಲ್ಲಿ ಡಾಮರು ಕಿತ್ತುಹೋಗಿದೆ. ಹಲವು ಭಾಗದಲ್ಲಿ ರಸ್ತೆಯಲ್ಲಿ ನೀರು ಹರಿಯುತ್ತಿದ್ದರೂ ಚರಂಡಿ ದುರಸ್ತಿಯಾಗಿಲ್ಲ. ದೇವಸ್ಯ, ಮಚ್ಚಿಮಲೆ ಸೇತುವೆಗಳಲ್ಲಿ ಬಿರುಮಲೆ ಗುಡ್ಡದ ಹಾಗೂ ಪರ್ಲಡ್ಕ ಭಾಗದ ನೀರಿನ ಹರಿವು ಹೋಗುತ್ತಿದ್ದರೂ ಅದನ್ನು ಎತ್ತರಿಸುವ ಕಾರ್ಯವಾಗಿಲ್ಲ. ನಿತ್ಯ ಈ ಸೇತುವೆಯಲ್ಲಿ ಸಣ್ಣಪುಣ್ಣ ಅಪಘಾತಗಳು ನಡೆಯುತ್ತಲೇ ಇವೆ. ಇದುವರೆಗೆ ಅಪಘಾತದಿಂದ ಮೂರು ನಾಲ್ಕು ಜೀವಗಳು ಬಲಿಯಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಆದ್ಯತೆ ನೀಡದಿರುವುದು ನಿತ್ಯ ಸಂಚಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ. ದೇವಸ್ಯ ಸೇತುವೆ ವಿಸ್ತರಣೆಯಾಗಿಲ್ಲ. ವೆಂಕಟನಗರ ಕಾಲೇಜಿನಲ್ಲಿ ತಿರುವು, ಹಲವು ಕಡೆ ತಿರುವುಗಳ ಕಾಮಗಾರಿ ಅವೈಜ್ಞಾನಿಕವಾಗಿದೆ.
ಸಣ್ಣ ತೊರೆಗೆ ಬೃಹತ್ ಯೋಜನೆ
ಅಟ್ಲಾರು ಎಂಬಲ್ಲಿ ಸಣ್ಣ ತೊರೆಯಿದ್ದು, ಇದಕ್ಕೆ ಸುಮಾರು 4 ಕೋ.ರೂ. ವೆಚ್ಚದಲ್ಲಿ ಬೃಹತ್ ಸೇತುವೆ ನಿರ್ಮಾಣ ಆಗಿದೆ. ಇದರಲ್ಲಿ ಚಣಿಲ ಸಹಿತ 1 ಕಿ.ಮೀ. ಭಾಗದ ನೀರಿನ ಹರಿವು ಮಾತ್ರ ಇದೆ. ಇಲ್ಲಿಗೆ ಇಂತಹ ಬೃಹತ್ ಯೋಜನೆ ಅಗತ್ಯವಿರಲಿಲ್ಲ.
ರೈತನ ಸಮಸ್ಯೆ ಕೇಳುವವರಿಲ್ಲ!
ಅಟ್ಲಾರು ಹಳೆ ಸೇತುವೆ ಸಾಕಷ್ಟು ಅಗಲವಾಗಿದ್ದರೂ ಎತ್ತರವಿಲ್ಲ ಎಂಬ ನೆಪದಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ ಹೊಸ ಸೇತುವೆಗೆ ಕೃಷಿಕರ ಜಾಗವನ್ನು ಸ್ವಾಧೀನಪಡಿಸಿ ಇನ್ನೂ ಪರಿಹಾರ ವಿತರಿಸಿಲ್ಲ ಎನ್ನಲಾಗಿದೆ. ಕೃಷಿಕ ಧನಂಜಯ ರೈ ಅವರಿಗೆ ಸೇರಿದ 24 ಸೆಂಟ್ಸ್ ಕೃಷಿ ಜಾಗದಲ್ಲಿ ಸೇತುವೆ ನಿರ್ಮಾಣವಾಗಿದೆ. ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಅವರಿಗೆ ಹಣದ
ಆವಶ್ಯಕತೆಯಿದ್ದು, ಪರಿಹಾರ ಮೊತ್ತವನ್ನು ಶೀಘ್ರದಲ್ಲಿ ಅಪೇಕ್ಷಿಸುತ್ತಿದ್ದಾರೆ. ಮೂಲದ ಪ್ರಕಾರ ಸೋಮವಾರ ಅನುದಾನ ಸಿಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ರೈತ ಸಂಘದಿಂದ ತೀವ್ರ ಹೋರಾಟ
ಅತಿ ಅಗತ್ಯವಿರುವ ಪ್ರದೇಶಗಳಲ್ಲಿ ಸೇತುವೆ ನಿರ್ಮಿಸಿಲ್ಲ. ಯಾವುದೇ ಅಪಘಾತ ಸಂಭವಿಸದ ಅಟ್ಲಾರು ಸೇತುವೆಯನ್ನು ಬೃಹತ್ ಮೊತ್ತ ಬಳಸಿಕೊಂಡು ಹೊಸದಾಗಿ ನಿರ್ಮಾಣ ಮಾಡಲಾಗಿದೆ. ಈ ಬಗ್ಗೆ ವಿಶೇಷ ತನಿಖೆಯಾಗಬೇಕು. ಕೃಷಿಕರ ಜಾಗವನ್ನು ಕಬಳಿಸಿ ಪರಿಹಾರ ಕೊಡದೆ ಸತಾಯಿಸುತ್ತಿರುವ ಬಗ್ಗೆಯೂ ದೂರುಗಳು ಬರುತ್ತಿವೆ. ಸಂಬಂಧ ಪಟ್ಟವರು ತತ್‌ಕ್ಷಣ ಪರಿಹಾರ ಒದಗಿಸದಿದ್ದಲ್ಲಿ, ರೈತ ಸಂಘವು ತೀವ್ರರೀತಿಯ ಹೋರಾಟ ನಡೆಸಬೇಕಾಗುತ್ತದೆ.
– ಶ್ರೀಧರ ಶೆಟ್ಟಿ ಬೆ„ಲುಗುತ್ತು,
ಪುಣಚ, ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ದ. ಕ.
ಇಲ್ಲಿ ಅತ್ಯಗತ್ಯವಾದ ಮಣಿಲ, ದೇವಸ್ಯ ಹಾಗೂ ಮಚ್ಚಿಮಲೆ ಸೇತುವೆ ಮಾತ್ರ ಅನುದಾನವಿಲ್ಲದ ನೆಪದಲ್ಲಿ ಇನ್ನೂ ಕಿರಿದಾಗಿಯೇ ಉಳಿದುಕೊಂಡಿವೆ. ಇಲ್ಲಿ ಅಪಘಾತಗಳ ಸಂಭವನೀಯತೆ ಜಾಸ್ತಿ. ಈಗಾಗಲೇ ಅನೇಕ ಅಪಘಾತಗಳು ಸಂಭವಿಸಿವೆ. ಬೊಳ್ಳಣ ಮತ್ತು ಬೇಜಾರದಲ್ಲಿ ಅಪಘಾತ ವಲಯವಾಗಿದೆ. ಅದಕ್ಕೆ ಸೂಕ್ತ ಕ್ರಮ ಕೈಗೊಂಡಿಲ್ಲ.
– ಗ್ರಾಮಸ್ಥರು
ಉದಯಶಂಕರ್ ನೀರ್ಪಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಉಡುಪಿಗೆ ಭತ್ತದ ಲೋಡ್ ಸಾಗಿಸುತ್ತಿದ್ದ ವೇಳೆ ಲಾರಿಗೆ ಆಕಸ್ಮಿಕ ಬೆಂಕಿ
Belthangady: ಶಾಲೆಯ ಮಕ್ಕಳು ನೆಟ್ಟಿದ್ದ ಹೂ ಗಿಡಗಳ ಕುಂಡಗಳನ್ನು ಪುಡಿಗೈದ ಕಿಡಿಗೇಡಿಗಳು
Bantwal: ಸಾಹಿತ್ಯವನ್ನು ಮಕ್ಕಳ ಮನ ಮುಟ್ಟುವಂತೆ ಬೋಧಿಸುವ ಶಿಕ್ಷಕರು ಬೇಕು
Bantwal ತಾಲೂಕು ಕಚೇರಿ: ಪಾಳು ಬಿದ್ದಿದೆ ಜನರೇಟರ್!
Uppinangady: ಕಾಟಾಚಾರದ ಕಾಮಗಾರಿಗೆ ಸ್ಥಳೀಯರ ತರಾಟೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Data Theft: ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್ ಮ್ಯಾನೇಜರ್!
Out of Syllabus Review; ಪ್ರೇಮಿಗಳಿಗೆ ಹೊಸ ಸಿಲೆಬಸ್
INDvAUS; ಇತಿಹಾಸದಲ್ಲೇ ಮೊದಲ ಬಾರಿಗೆ…: 200 ವಿಕೆಟ್ ನೊಂದಿಗೆ ಹೊಸ ದಾಖಲೆ ಬರೆದ ಬುಮ್ರಾ
Aranthodu: ಉಡುಪಿಗೆ ಭತ್ತದ ಲೋಡ್ ಸಾಗಿಸುತ್ತಿದ್ದ ವೇಳೆ ಲಾರಿಗೆ ಆಕಸ್ಮಿಕ ಬೆಂಕಿ
Anandapura: ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.