ಸುಬ್ರಹ್ಮಣ್ಯ: ಕುಕ್ಕೆಲಿಂಗ ಜಾತ್ರೆ ಪಂಚಮಿ ರಥೋತ್ಸವ

Team Udayavani, Jan 16, 2019, 5:46 AM IST

16-january-5.jpg

ಸುಬ್ರಹ್ಮಣ್ಯ: ಮಕರ ಸಂಕ್ರಮಣ ಪ್ರಯುಕ್ತ ಮಂಗಳವಾರ ಬೆಳಗ್ಗೆ ಶ್ರೀ ದೇಗುಲದಲ್ಲಿ ಕುಕ್ಕೆಲಿಂಗ ದೇವರ ಜಾತ್ರೆ ಪ್ರಯುಕ್ತ ಪಂಚಮಿ ರಥೋತ್ಸವ ಜರಗಿತು.

ದೇಗುಲದ ಹೊರಾಂಗಣದಲ್ಲಿ ಶ್ರೀ ದೇವರ ಉತ್ಸವ ನಡೆದ ಬಳಿಕ ರಥಬೀದಿಯಲ್ಲಿ ಪಂಚಮಿ ರಥೋತ್ಸವ ನಡೆಯಿತು. ದೇವರು ಬೀದಿಗೆ ಬರುವ ಮುಂಚಿತ ಕ್ಷೇತ್ರದ ಹೊಸೊಳಿಗಮ್ಮ ದೈವವು ದೇಗುಲದ ಮುಂಭಾಗದಲ್ಲಿ ದೇವರಿಗೆ ಕಾಣಿಕೆ ನೀಡಿತು. ಬಳಿಕ ರಥಬೀದಿಯಲ್ಲಿ ರಥೋತ್ಸವ ನೆರವೇರಿತು. ಈ ವೇಳೆ ದೈವವು ರಥದ ಜತೆ ಕಟ್ಟೆಪೂಜೆ ನಡೆಯುವ ತನಕ ತೆರಳಿ ದೇವರು ದೇಗುಲದ ಒಳಗೆ ಪ್ರವೇಶಿಸುವ ತನಕ ಪಾಲ್ಗೊಂಡಿತು. ಸವಾರಿ ಮಂಟಪದಲ್ಲಿ ಶ್ರೀ ದೇವರಿಗೆ ಕಟ್ಟೆಪೂಜೆ ನೆರವೇರಿತು. ಸೋಮವಾರ ರಾತ್ರಿ ಕುಕ್ಕೆಲಿಂಗ ಜಾತ್ರೆ ಹಿನ್ನೆಲೆಯಲ್ಲಿ ದೇಗುಲದ ಹೊರಾಂಗಣದಲ್ಲಿ ಶ್ರೀ ದೇವರ ಬಂಡಿ ಉತ್ಸವ ವಿಜೃಂಭಣೆಯಿಂದ ನಡೆಯಿತು. ಅನಂತರ ಕಾಜುಕುಜುಂಬ ದೈವದ ನಡಾವಳಿ ನೆರವೇರಿತು. ಉತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.

ಪುತ್ತೂರ ಒಡೆಯನಿಗೆ ಕನಕಾಭಿಷೇಕ
ಪುತ್ತೂರು:
ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರಿಗೆ ಮಕರ ಸಂಕ್ರಮಣದ ದಿನ ರಾತ್ರಿ ಶ್ರೀ ಉಳ್ಳಾಳ್ತಿ ಅಮ್ಮನವರ ನಡೆಯಲ್ಲಿ ಕನಕಾಭಿಷೇಕ ನಡೆಯಿತು. ಮಕರ ಸಂಕ್ರಮಣದ ರಾತ್ರಿ ಪೂಜೆಯ ಬಳಿಕ ಬಲಿ ಉತ್ಸವದ ಕೊನೆಯ ಸುತ್ತಿನಲ್ಲಿ ದೇವಾಲಯದ ಆಡಳಿತ ಮೊಕ್ತೇಸರ ಎನ್‌. ಸುಧಾಕರ ಶೆಟ್ಟಿ ಕನಕಾಭಿಷೇಕ ನೆರವೇರಿಸಿದರು. ದೊಡ್ಡ ಹರಿವಾಣದಲ್ಲಿ ಹೊದ್ಲು, ಅಡಿಕೆ, ವೀಳ್ಯದೆಲೆ, ಕರಿಮೆಣಸು ಮೊದಲಾದ ಸುವಸ್ತುಗಳು, ಚಿನ್ನ -ಬೆಳ್ಳಿಯ ತುಣುಕುಗಳು, ರೂಪಾಯಿ, ನಾಣ್ಯ ಗಳನ್ನು ಶ್ರೀ ದೇವರ ಉತ್ಸವ ಮೂರ್ತಿಗೆ ಚಿಮ್ಮಿಸುವ ಮೂಲಕ ಅಭಿಷೇಕ ಮಾಡಲಾಯಿತು. ತುಳು ಪಾಡ್ದನಗಳಲ್ಲಿ ಉಲ್ಲೇಖೀ ಸಿರುವಂತೆ ವಿಜಯದ ಸಂಕೇತವಾಗಿ ಅರಸರ ಕಾಲದಿಂದಲೂ ಸೀಮೆಯ ದೇವಸ್ಥಾನದಲ್ಲಿ ಈ ಕ್ರಮ ವನ್ನು ಪಾಲಿಸ ಲಾಗುತ್ತಿದೆ. ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡುವುದು ಕನಕಾಭಿಷೇಕದ ವಿಶೇಷ. ಅರ್ಚಕ ವಿ.ಎಸ್‌. ಭಟ್ ವೈದಿಕ ವಿಧಿ-ವಿಧಾನ ನೆರವೇರಿಸಿದರು.

ಟಾಪ್ ನ್ಯೂಸ್

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!

PUNJAB

Jagjit Singh Dallewal: ರೈತ ನಾಯಕನನ್ನು ಆಸ್ಪತ್ರೆಗೆ ದಾಖಲಿಸಲು ಡಿ.31ರ ಗಡುವು

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

ಚೆನ್ನೈ ಲೈಂಗಿಕ ಕಿರುಕುಳ ಕೇಸ್‌: ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶ

Pinarayi Vijayan: ಸಿಂಗ್‌ ಅಂತ್ಯಕ್ರಿಯೆ ವೇಳೆ ಬೇರೆ ಕಾರ್ಯಕ್ರಮದಲ್ಲಿ ಪಿಣರಾಯಿ ಭಾಗಿ

Pinarayi Vijayan: ಸಿಂಗ್‌ ಅಂತ್ಯಕ್ರಿಯೆ ವೇಳೆ ಬೇರೆ ಕಾರ್ಯಕ್ರಮದಲ್ಲಿ ಪಿಣರಾಯಿ ಭಾಗಿ

1-man-mohan

Manmohan Singh ವಿಚಾರದಲ್ಲಿ ಕಾಂಗ್ರೆಸ್ ಅಗ್ಗದ ರಾಜಕಾರಣ ಮಾಡುತ್ತಿದೆ: ಬಿಜೆಪಿ

CBI

ED ಅಧಿಕಾರಿ ಒಳಗೊಂಡ ಲಂಚ ಪ್ರಕರಣ; ಸಿಬಿಐನಿಂದ ಮಧ್ಯವರ್ತಿ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!

Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!

PUNJAB

Jagjit Singh Dallewal: ರೈತ ನಾಯಕನನ್ನು ಆಸ್ಪತ್ರೆಗೆ ದಾಖಲಿಸಲು ಡಿ.31ರ ಗಡುವು

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

5

Udupi: ತಂಡಗಳ ನಡುವೆ ಹಲ್ಲೆ; ಪ್ರಕರಣ ದಾಖಲು

2

Kasaragod: ಹೊಳೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.