ಸುಬ್ರಹ್ಮಣ್ಯ: ಠಾಣೆ ಮೆಟ್ಟಿಲೇರಿದ ಶಿಕ್ಷಕರ ಗಲಾಟೆ
Team Udayavani, Feb 10, 2018, 7:00 AM IST
ಸುಬ್ರಹ್ಮಣ್ಯ: ಬಾಡಿಗೆ ಕೊಠಡಿಯಲ್ಲಿ ವಾಸವಿದ್ದ ಮುಖ್ಯ ಶಿಕ್ಷಕಿಯನ್ನು ಖಾಸಗಿ ಶಾಲೆಯ ದೈ.ಶಿ. ಶಿಕ್ಷಕ ನೋರ್ವ ಎಳೆದೊಯ್ದಿದ್ದಾರೆ ಎಂದು ಆರೋಪಿಸಿ ಸುಬ್ರ ಹ್ಮಣ್ಯ ಠಾಣೆಯಲ್ಲಿ ಫೆ.9ರಂದು ದೂರು ದಾಖಲಾಗಿದೆ.
ಮೂಲತಃ ಉಡುಪಿಯವರಾದ, ಸ್ಥಳೀಯ ಶಾಲೆಯೊಂದರ ಮುಖ್ಯ ಶಿಕ್ಷಕಿ ಗುತ್ತಿಗಾರು ಛತ್ರಪ್ಪಾಡಿಯಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸವಿದ್ದರು. ಇದೇ ಕಟ್ಟಡದಲ್ಲಿ ಸರಕಾರಿ ಶಾಲೆಯ ಮತ್ತೋರ್ವ ಶಿಕ್ಷಕ ಕೂಡ ಬಾಡಿಗೆ ನೆಲೆಯಲ್ಲಿ ವಾಸವಿದ್ದರು. ಫೆ.8ರಂದು ರಾತ್ರಿ ಶಿಕ್ಷಕಿ ವಾಸವಿದ್ದ ಕೊಠಡಿಯಲ್ಲಿ ಪಕ್ಕದ ಶಿಕ್ಷಕ ಇರುವುದನ್ನು ಗಮನಿಸಿದ ಕೊಠಡಿ ಮಾಲಕನ ಸಹೋದರ ಖಾಸಗಿ ದೈ.ಶಿ.ಶಿಕ್ಷಕ ಮಾಯಿಲಪ್ಪ ಅವರು ಶಿಕ್ಷಕ-ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿದೆ.
ಮರುದಿನ ಮುಖ್ಯ ಶಿಕ್ಷಕಿ ಮನೆಗೆ ಕರೆ ಮಾಡಿ ವಿಷಯ ತಿಳಿಸಿದ ಮೇರೆಗೆ ಮನೆಯವರು ಬಂದು ಮುಖ್ಯ ಶಿಕ್ಷಕಿ-ಶಿಕ್ಷಕನ ಜತೆ ಠಾಣೆಗೆ ತೆರಳಿ ಮಾಯಿಲಪ್ಪರ ವಿರುದ್ಧ ದೂರು ನೀಡಿದ್ದರು. ಶಿಕ್ಷಣಕ್ಕೆ ಸಂಬಂಧಿಸಿ ಚರ್ಚೆ ನಡೆಯುತ್ತಿದ್ದಾಗ ಮಾಯಿಲಪ್ಪ ಅವರು ತನ್ನ ಮೇಲೆ ಕೈ ಮಾಡಿ ಎಳೆದೊಯ್ದ ಕುರಿತು ದೂರು ನೀಡಿದ್ದರು.
ಇದಕ್ಕೆ ಪ್ರತಿಯಾಗಿ ಮಾಯಿಲಪ್ಪರ ಪತ್ನಿ ಗ್ರಾ.ಪಂ. ಸದಸ್ಯೆ ಕೂಡ ಪ್ರತಿದೂರು ನೀಡಲು ಮುಂದಾದರು. ಠಾಣೆಯಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ಮುಖ್ಯ ಶಿಕ್ಷಕಿ ಅಸ್ವಸ್ಥಗೊಂಡಿದ್ದು, ಅವರಿಗೆ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಬಳಿಕ ಠಾಣಾಧಿಕಾರಿಗಳು ಎರಡೂ ಕಡೆಯವರ ನಡುವೆ ಮಾತುಕತೆ ನಡೆಸಿ ಪ್ರಕರಣವನ್ನು ಇತ್ಯರ್ಥಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.