ಮೊಬೈಲ್‌ ಖಾತೆಗೆ ಸಬ್ಸಿಡಿ ಹಣ: ತಡೆ


Team Udayavani, Dec 21, 2017, 9:58 AM IST

21-16.jpg

ಬೆಳ್ತಂಗಡಿ: ಏರ್‌ಟೆಲ್‌ ಮೊಬೈಲ್‌ ವ್ಯಾಲೆಟ್‌ಗೆ ಪಾವತಿಯಾಗುತ್ತಿದ್ದ ಗ್ಯಾಸ್‌ ಸಬ್ಸಿಡಿ ಹಣವನ್ನು ಆಧಾರ್‌ ಪ್ರಾಧಿಕಾರ ತಡೆ ಹಿಡಿದಿದೆ. ಏರ್‌ಟೆಲ್‌ ಬ್ಯಾಂಕಿಂಗ್‌ ಲೈಸನ್ಸ್‌ ರದ್ದು ಮಾಡುವ ಭೀತಿಯಲ್ಲಿ ಏರ್‌ಟೆಲ್‌ ಈಗಾಗಲೇ ಜಮೆ ಮಾಡಿಸಿಕೊಂಡ 190 ಕೋ.ರೂ. ಸಬ್ಸಿಡಿ ಹಣವನ್ನು ಖಾತೆದಾರರಿಗೆ ಮರಳಿಸುವ ಭರವಸೆ ನೀಡಿದೆ. ಮಾತ್ರವಲ್ಲದೆ ಮಧ್ಯಾಂತರ ದಂಡವಾಗಿ 2.5 ಕೋಟಿ ರೂ.ಗಳನ್ನು ಯುಐಡಿಎಐ (ಆಧಾರ್‌ ಪ್ರಾಧಿಕಾರ)ಯಲ್ಲಿ ಠೇವಣಿ ಇರಿಸಿದೆ. ಏರ್‌ಟೆಲ್‌ ಸಂಸ್ಥೆ ಗ್ರಾಹಕರಿಗೆ ಮಾಹಿತಿ ನೀಡದೇ 31 ಲಕ್ಷ ಗ್ರಾಹಕರ ಗ್ಯಾಸ್‌ ಸಬ್ಸಿಡಿಯನ್ನು ಏರ್‌ಟೆಲ್‌ ಪೇಮೆಂಟ್‌ ಬ್ಯಾಂಕ್‌ಗೆ ಜಮೆ ಮಾಡಿತ್ತು. 

ದ.ಕ., ಉಡುಪಿ ಸಮಸ್ಯೆ
ಕರಾವಳಿಯಲ್ಲಿ ಹೈನುಗಾರ ಸರಕಾರದ ಹಾಲು ಸಬ್ಸಿಡಿಗೆ ಕಾದರೆ ಆತನ ಬ್ಯಾಂಕ್‌ಗೆ ನಯಾಪೈಸೆ ಬಿದ್ದಿರುವುದಿಲ್ಲ. ಆದರೆ ಏರ್‌ಟೆಲ್‌ ಮೊಬೈಲ್‌ ಖಾತೆಗೆ ಒಮ್ಮೊಂದೊಮ್ಮೆಗೆ ಸಾವಿರಾರು ರೂ. ಜಮೆಯಾಗಿರುತ್ತದೆ. ಉದ್ಯೋಗ ಖಾತರಿಯ ಕೂಲಿ ಮೊಬೈಲ್‌ ಕಂಪೆನಿ  ಯಲ್ಲಿನ ಖಾತೆಗೆ! ಸರಕಾರದ ಸಬ್ಸಿಡಿ, ಬೆಳೆಹಾನಿ ಪರಿಹಾರ ಹೀಗೆ ಸರಕಾರದಿಂದ ಆಧಾರ್‌ ಆಧಾರದಿಂದ ಪಾವತಿ  ಯಾಗುವ ಹಣ ಏರ್‌ಟೆಲ್‌ ಮೊಬೈಲ್‌ ಕರೆನ್ಸಿಯಾಗಿ ಪರಿವರ್ತನೆ ಯಾಗುತ್ತಿದ್ದು ಅನಕ್ಷ ರಸ್ಥ ರಿಗೆ ಇದರ ಮಾಹಿತಿಯೇ ಇರುವುದಿಲ್ಲ. ಅವರು ಸಬ್ಸಿಡಿ ಗಾಗಿ ಅಲೆದಾಡುತ್ತಲೇ ಇರು ತ್ತಾರೆ. ಕಡತ ದಾಖಲೆಗಳ ಪ್ರಕಾರ ಸಬ್ಸಿಡಿ ವಿತರಿಸಲಾಗಿರುತ್ತದೆ. ಈ ಗೊಂದಲ ಸೃಷ್ಟಿಯಾದದ್ದು ಆಧಾರ್‌ ಲಿಂಕ್‌ನಿಂದ. ದೇಶಾದ್ಯಂತ ಈ ಸಮಸ್ಯೆ ಸೃಷ್ಟಿ ಯಾಗಿದ್ದು ಗ್ರಾಹಕ ಬಯಸಿದ ಖಾತೆಗೇ ಹಣ ಜಮೆಯಾಗುವಂತಹ ತಂತ್ರಜ್ಞಾನದ ತಿದ್ದುಪಡಿ ಆಗಬೇಕಿದೆ ಎಂದು ಉದಯವಾಣಿ ಪತ್ರಿಕೆ ಆ. 24ರಂದು ಮುಖಪುಟದಲ್ಲಿ ವರದಿ ಮಾಡಿತ್ತು. ಈಗ ಅಡುಗೆ ಅನಿಲ ಸಬ್ಸಿಡಿ ಕುರಿತಾಗಿ ಮಾತ್ರ ಕಠಿನ ಸೂಚನೆ ಬಂದಿದೆ. ಇತರ ಸಬ್ಸಿಡಿ ಕುರಿತೂ ದಿಟ್ಟ ಕ್ರಮ ಬರಬೇಕಿದೆ.

ಮೊಬೈಲ್‌ ವ್ಯಾಲೆಟ್‌ಗಳು
ಈಗ ಬ್ಯಾಂಕುಗಳಷ್ಟೇ ಹಣದ ವ್ಯವಹಾರ ನಡೆಸುತ್ತಿಲ್ಲ. ಮೊಬೈಲ್‌ನಲ್ಲಿ ದೊರೆಯುವ ನೂರಾರು ವ್ಯಾಲೆಟ್‌ ಆ್ಯಪ್‌ಗ್ಳಲ್ಲಿ ಹಣದ ವ್ಯವಹಾರ ನಡೆಸಲು ಅವಕಾಶವಿದೆ. ಅಂತೆಯೇ ಏರ್‌ಟೆಲ್‌ ಸಂಸ್ಥೆ ಕೂಡ ಅಧಿಕೃತವಾಗಿ ಹಣದ ವ್ಯವಹಾರ ನಡೆಸಲು ಅನುಮತಿ ಪಡೆದಿದ್ದು ಏರ್‌ಟೆಲ್‌ ಮನಿ ಎಂಬ ಹೆಸರಿನ ಮೂಲಕ ಮೊಬೈಲ್‌ ವ್ಯಾಲೆಟ್‌ನಲ್ಲಿ ಹಣ ವಿನಿಮಯ, ವ್ಯವಹಾರಕ್ಕೆ ಅನುಕೂಲ ಮಾಡಿದೆ.

ಇಲ್ಲಾಗಿದೆ ಎಡವಟ್ಟು
ಆಧಾರ್‌ ಸಂಖ್ಯೆಯನ್ನು ಖಾತೆಗೆ ಜೋಡಿಸುತ್ತಾ ಕೊನೆಯದಾಗಿ ಯಾವ ಖಾತೆಗೆ ಆಧಾರ್‌ ಸಂಖ್ಯೆ ಜೋಡಿಸುತ್ತಾರೋ ಆ ಖಾತೆಗೆ ಹಣ ಜಮೆ ಯಾಗುವಂತಹ ತಂತ್ರಜ್ಞಾನ ವ್ಯವಸ್ಥೆ ಈಗ ಚಾಲ್ತಿಯಲ್ಲಿದೆ. ಏರ್‌ಟೆಲ್‌ ಸಿಮ್‌ಗೆ ಆಧಾರ್‌ ಲಿಂಕ್‌ ಮಾಡಿದರೆ ಹಣದ ವಹಿವಾಟಿನ ಮಾನ್ಯತೆಯ ಏರ್‌ಟೆಲ್‌ ಮನಿಗೆ ಖಾತೆಗೆ ಎಲ್ಲ ಹಣ ಜಮೆಯಾಗುತ್ತದೆ. ಏರ್‌ಟೆಲ್‌ ಮಾತ್ರ ಅಲ್ಲ, ಕೆಲವು ಸ್ವಯಂಸೇವಾ ಸಂಸ್ಥೆಗಳು ಖಾಸಗಿ ಬ್ಯಾಂಕುಗಳಲ್ಲಿ ಸ್ವಯಂ ಸೇವಾ ಸಂಘದ ಸದಸ್ಯರ ಖಾತೆ ತೆರೆದಿದ್ದು ಅನೇಕರ ಹಣ ಅಂತಹ ಖಾಸಗಿ ಬ್ಯಾಂಕುಗಳಿಗೂ ಹೋಗುತ್ತಿದೆ. ಆದರೆ ಮುಗ್ಧರು ಇನ್ನೂ ಕೂಡ ತಾವು ಹೆಚ್ಚಾಗಿ ಉಪಯೋಗ ಮಾಡುವ ಬ್ಯಾಂಕ್‌ನ ಖಾತೆಯನ್ನಷ್ಟೇ ಪರಿಶೀಲಿಸಿ ಸಬ್ಸಿಡಿ, ಅನುದಾನ, ಪರಿಹಾರ ಬಂದಿಲ್ಲ ಎಂದು ಕೊಸರಾಡಿಕೊಳ್ಳುತ್ತಿದ್ದಾರೆ.

ದೂರು ಕೊಟ್ಟಿದ್ದೇವೆ
ಇಂತಹ ಸಮಸ್ಯೆ ಕುರಿತು ಜಿಲ್ಲಾ ಲೀಡ್‌ ಬ್ಯಾಂಕ್‌ ಮೂಲಕ ದೂರು ನೀಡಲಾಗಿದೆ. ಏರ್‌ಟೆಲ್‌ ಏರಿಯಾ ಮ್ಯಾನೇಜರ್‌ಗಳ ಮೂಲಕ ಹಣವನ್ನು ಆಯಾ ಖಾತೆದಾರರ ಬ್ಯಾಂಕ್‌ ಖಾತೆಗೆ ಜಮೆ ಮಾಡಿಸಲಾಗಿದೆ. ಸೆಪ್ಟಂಬರ್‌ ವರೆಗಿನ ಸಬ್ಸಿಡಿ ಹಣ ಬಂದಿದ್ದು ಇನ್ನಷ್ಟೇ ಬ್ಯಾಂಕಿಗೆ ಜಮೆ ಮಾಡಬೇಕಿದೆ. ಈ ಬಾರಿಯೂ ಸಮಸ್ಯೆಯಾದರೆ ಅದಕ್ಕೆ ತಕ್ಕ ಕ್ರಮ ಕೈಗೊಳ್ಳಲಾಗುವುದು.
 ಡಾ| ಬಿ.ವಿ. ಸತ್ಯನಾರಾಯಣ, ವ್ಯವಸ್ಥಾಪಕ ನಿರ್ದೇಶಕರು, ಕೆಎಂಎಫ್‌

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Police

Subhramanya: ಹೆದ್ದಾರಿ ತಡೆದು ಪ್ರತಿಭಟನೆ: 13 ಮಂದಿಗೆ ಜಾಮೀನು

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

12-

Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.